ಗಿಲ್ಲಿ ಕಾಲೆಳೆದು ಹೊಟ್ಟೆ ಹುಣ್ಣಾಗಿಸಿದ ಕಿಚ್ಚ ಸುದೀಪ್

Public TV
1 Min Read

ಬಿಗ್‌ಬಾಸ್ (Bigg Boss) ವೀಕೆಂಡ್ ಶೋ ನೋಡುವುದಕ್ಕಾಗಿ ಇಡೀ ಕರುನಾಡು ಕಾದು ಕುಳಿತಿರುತ್ತೆ. ಇಡೀ ವಾರ ಬಿಗ್‌ಬಾಸ್ ಮನೇಲಿ ಆದ ಬೆಳವಣಿಗೆಗಳ ಬಗ್ಗೆ ಕಿಚ್ಚ ಸುದೀಪ್ (Sudeep) ಯಾವ ರೀತಿ ರಿಯಾಕ್ಟ್ ಮಾಡುತ್ತಾರೆ. ಯಾರಿಗೆ ಮೆಚ್ಚುಗೆ ಕೊಡ್ತಾರೆ? ಯಾರಿಗೆ ಕ್ಲಾಸ್ ತೆಗೆದುಕೊಳ್ತಾರೆ ಅಂತಾ ಕ್ಯೂರಿಯಾಸಿಟಿಯಿಂದ ಕಾದು ಕುಳಿತಿರುತ್ತಾರೆ. ಈ ವಾರ ಮೊದಲದಿನ ಸುಧೀ, ರಿಷಾ, ಜಾಹ್ನವಿ ಹಾಗೂ ಅಶ್ವಿನಿ ಗೌಡಗೆ ಕ್ಲಾಸ್ ತೆಗೆದುಕೊಂಡಿದ್ದರು. ಇದೀಗ ರಿಲೀಸ್ ಆದ ಪ್ರೋಮೋದಲ್ಲಿ ಗಿಲ್ಲಿ ಕಾಲೆಳೆದಿದ್ದಾರೆ ಕಿಚ್ಚ.

ಬಿಗ್‌ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋನಲ್ಲಿ ಗಿಲ್ಲಿ ನಟ (Gilli Nata) ಸಖತ್ ಕಾಮಿಡಿ ಮಾಡುತ್ತಿದ್ದಾರೆ. ವಾರಾಂತ್ಯದ ಸಂಚಿಕೆಗಳಲ್ಲಿ ಕೂಡ ಅವರು ನಗುವಿನ ಮೂಲಕ ಮನರಂಜನೆ ನೀಡುತ್ತಿದ್ದಾರೆ. ಆರಂಭದಲ್ಲಿ ಕಾವ್ಯ (Kavaya Shaiva) ಮತ್ತು ಗಿಲ್ಲಿ ಜಂಟಿ ಆಗಿದ್ದರು. ಜಂಟಿ ಟಾಸ್ಕ್ ಮುಗಿದ ನಂತರ ಕೂಡ ಕಾವ್ಯ ಶೈವ ಜೊತೆ ಗಿಲ್ಲಿ ಕ್ಲೋಸ್ ಆಗಿದ್ದಾರೆ. ಆ ವಿಷಯ ಇಟ್ಟುಕೊಂಡು ಕಿಚ್ಚ ಸುದೀಪ್ ಅವರು ತಮಾಷೆ ಮಾಡಿದ್ದಾರೆ.  ಇದನ್ನೂ ಓದಿ:  ಉತ್ತರ ಭಾರತದಲ್ಲಿ ಕಾಂತಾರ ಸಿನಿಮಾ ಹವಾ: ಬಾಕ್ಸಾಫೀಸ್‌ನಲ್ಲಿ 200 ಕೋಟಿ ಕ್ಲಬ್!

`ಈ ಮನೆಯಲ್ಲಿ ನಿಮ್ಮಷ್ಟು ಅಮಾಯಕ ಬೇರೆ ಯಾರಾದ್ರೂ ಇದ್ದಾರಾ’ ಎಂದು ಸುದೀಪ್ ಪ್ರಶ್ನೆ ಮಾಡಿದ್ದಾರೆ. ಅಕ್ಟೋಬರ್ 26ರ ಸಂಚಿಕೆಯ ಪ್ರೋಮೋವನ್ನು `ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಸದ್ಯ ಕಿಚ್ಚನ ಮಾತು ಕೇಳಿ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ ಬಿಗ್‌ಬಾಸ್ ಪ್ರೀಯರು.

Share This Article