ಕಾವ್ಯ Vs ರಕ್ಷಿತಾ| ಅಮಾಯಕಿಯಂತೆ ನಾಟಕ – ರಿಯಲ್‌ ಕನ್ನಿಂಗ್‌ ನೀವು

1 Min Read

ಬಿಗ್‌ಬಾಸ್‌ (Bigg Boss) ಮನೆಯಲ್ಲಿ ರಿಯಲ್‌ ವಿಲನ್‌ ಯಾರು ಎನ್ನುವ ವಿಚಾರದ ಬಗ್ಗೆ ಕಾವ್ಯ (Kavya) ಮತ್ತು ರಕ್ಷಿತಾ (Rakshita) ಮಧ್ಯೆ ಭಾರೀ ವಾಗ್ವಾದ ನಡೆದಿದೆ.

ಸದಸ್ಯರಿಗೆ ಮನೆಯಲ್ಲಿರುವ ವಿಲನ್‌ (Villain) ಆಯ್ಕೆ ಮಾಡುವಂತೆ ಸೂಚಿಸಲಾಗಿತ್ತು. ಈ ಪೈಕಿ ರಕ್ಷಿತಾ ಚೈತ್ರಾ ಅವರ ಹೆಸರನ್ನು ಸೂಚಿಸಿದರೆ ಕಾವ್ಯ ರಕ್ಷಿತಾ ಹೆಸರನ್ನು ಆಯ್ಕೆ ಮಾಡಿದ್ದಾರೆ.

ರಕ್ಷಿತಾಳದ್ದು ಕನ್ನಿಂಗ್‌ ಬುದ್ದಿ, ಅಮಾಯಕರಂತೆ ಸ್ಟ್ರ್ಯಾಟಜಿ ಬಳಸುತ್ತಿದ್ದಾಳೆ ಎಂದು ಕಾವ್ಯ ಹೇಳಿದ್ದಕ್ಕೆ ರಕ್ಷಿತಾ, ಮನೆಯಲ್ಲಿರುವ ಕನ್ನಿಂಗ್‌ ವ್ಯಕ್ತಿ ನೀವು. ರಿಯಲ್‌ ಕಾವ್ಯ ನೀವಲ್ಲ ಎಂದು ತಿರುಗೇಟು ನೀಡಿದ್ದಾರೆ.


ಆರಂಭದಲ್ಲಿ ಕಾವ್ಯ ಮತ್ತು ರಕ್ಷಿತಾ ಸಂಬಂಧ ಚೆನ್ನಾಗಿತ್ತು. ಆದರೆ ಅಭಿಷೇಕ್‌ ನಾಮಿನೇಷನ್‌ ವಿಚಾರದಲ್ಲಿ ಕಾವ್ಯ ರಕ್ಷಿತಾ ದಡ್ಡಿ, ಅವಳಿಗೆ ಏನು ಹೇಳಬೇಕು ಅಂತ ಗೊತ್ತಿಲ್ಲ ಎಂದಿದ್ದರು. ಇಲ್ಲಿಂದ ಇಬ್ಬರ ನಡುವಿನ ಸಂಬಂಧ ಹಳಸಲು ಆರಂಭವಾಗಿತ್ತು. ನಂತರ ನಾಮಿನೇಷನ್‌ ಪ್ರಕ್ರಿಯೆಯಲ್ಲಿ ಕಾವ್ಯ ರಕ್ಷಿತಾ ನಡುವೆ ಜೋರಾದ ವಾದ ನಡೆದಿತ್ತು. ಇದನ್ನೂ ಓದಿ:  ಕಣ್ಣೀರಿಟ್ಟ ‘ಕಾವು’ – ವಿಲನ್‌ ಕೊಟ್ಟ ಟಾಸ್ಕಲ್ಲಿ ಗೆದ್ರಾ ಗಿಲ್ಲಿ?

ನಾಮಿನೇಷನ್‌ ಸಂದರ್ಭದಲ್ಲಿ ಕಾವ್ಯ ರಕ್ಷಿತಾಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಬರುವುದಿಲ್ಲ ಎಂದು ಹೇಳಿದ್ದರೆ ನಾನು ಮನೆಯ ಕೆಲಸ ಮಾಡುತ್ತಿದ್ದೇನೆ. ಟಾಸ್ಕ್‌ ಆಡುತ್ತಿದ್ದೇನೆ. ಎಲ್ಲರ ಜೊತೆ ಮಾತನಾಡುತ್ತೇನೆ. ನೀವು ಯಾವುದಾರೂ ಟಾಸ್ಕ್‌ ಗೆದ್ದಿದೀರಾ ಎಂದು ತಿರುಗೇಟು ನೀಡಿದ್ದರು.
Share This Article