ಬಿಗ್ ಬಾಸ್ (Bigg Boss) ಮನೆಯಲ್ಲೊಂದು ತ್ರಿಕೋನ ಪ್ರೇಮಕಥೆಯು ನಿಧಾನವಾಗಿ ಟ್ರ್ಯಾಕ್‌ಗೆ ಬರಲಾರಂಭಿಸಿದೆ. ಇದನ್ನ ಗಂಭೀರವಾಗಿ ತೆಗೆದುಕೊಳ್ಳಲಾಗದಿದ್ದರೂ ಮುಂದೊಂದು ದಿನ ಇದುವೇ ಆಟದ ಸ್ವರೂಪವನ್ನು ಬದಲಿಸಬಹುದು.
ಜಂಟಿಯಾಗಿ ಮನೆಯೊಳಗೆ ಹೋಗಿದ್ದ ಸ್ಪರ್ಧಿಗಳು ಗಿಲ್ಲಿ ನಟ (Gilli Nata) ಹಾಗೂ ಕಾವ್ಯ (Kavya) ಬೆಸ್ಟ್ಫ್ರೆಂಡ್ಸ್. ಇವರ ನಡುವೆ ಈಗ ರಕ್ಷಿತಾ ಶೆಟ್ಟಿ (Rakshita Shetty) ಆಗಮನವಾಗಿದೆ. ಕಾವ್ಯ ವಿಚಾರವಾಗಿ ಗಿಲ್ಲಿ ನಟ ಆಸಕ್ತಿ ತೋರಿಸುತ್ತಿರುವ ಹೊತ್ತಲ್ಲೇ ಮಾತಿನ ಭರದಲ್ಲಿ ರಕ್ಷಿತಾ ನುಡಿದಿರುವ ಮಾತೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಇದನ್ನೂ ಓದಿ: ರಾಜೇಂದ್ರ ಸಿಂಗ್ ಬಾಬು ಅವರಿಲ್ಲದಿದ್ರೆ ನಾನು ಜೀರೋ : ಸುಹಾಸಿನಿ ಮನದಾಳ
ಗಿಲ್ಲಿನಟನ ಬಳಿಯೇ ರಕ್ಷಿತಾ, ನಿಮಗೆ ಕಾವ್ಯ ಅಂದ್ರೆ ಇಷ್ಟ. ನನಗೆ ನೀವು ಅಂದ್ರೆ ಇಷ್ಟ ಎಂದಿದ್ದಾರೆ. ಇದೀಗ ಇದೇ ವೀಡಿಯೋ ಇಟ್ಟುಕೊಂಡು ಇದನ್ನು ಟ್ರಯಾಂಗಲ್ ಲವ್‌ಸ್ಟೋರಿ ಎಂದು ಟ್ರೋಲ್ ಮಾಡಲಾಗುತ್ತಿದೆ.
ಅಸಲಿಗೆ ರಕ್ಷಿತಾ ಮೇಲೆ ಅಶ್ವಿನಿ ಗೌಡ (Ashwini Gowda) ಜಾಹ್ನವಿ ಮಾತಿನ ದಾಳಿ ನಡೆಸಿದ್ದಾಗ ರಕ್ಷಿತಾ ಪರನಿಂತ ವ್ಯಕ್ತಿ ಗಿಲ್ಲಿ. ಈ ವಿಚಾರಕ್ಕೆ ಗಿಲ್ಲಿಗೆ ಕಿಚ್ಚ ಸುದೀಪ್‌ರಿಂದ ಹೊಗಳಿಕೆಯೂ ಬಂದಿತ್ತು. ಇದೀಗ ಗಿಲ್ಲಿಯ ಸಿಲ್ಲಿ ಮಾತುಗಳು, ಸೀರಿಯಸ್ ಆಗಿ ಆಡುವ ಆಟದ ವಿಧಾನಗಳು ಹಾಗೂ ಕಷ್ಟದಲ್ಲಿ ತಮ್ಮ ಪರ ನಿಂತಿದ್ದಕ್ಕೆ ರಕ್ಷಿತಾ ಗಿಲ್ಲಿಗೆ ಮನಸೋತಂತೆ ಕಾಣುತ್ತಿದೆ. ಹೀಗಾಗಿ ರಕ್ಷಿತಾ ಹೆಚ್ಚೆಚ್ಚು ಗಿಲ್ಲಿ ಜೊತೆ ಸಮಯ ಕಳೆಯಲಾರಂಭಿಸಿದ್ದಾರೆ.
ಸಂಭಾಷಣೆಯೊಂದರಲ್ಲಿ ಕಾವ್ಯ ಎದುರಲ್ಲಿ ಗಿಲ್ಲಿಗೆ ಕಾವ್ಯ ಅಂದ್ರೆ ಇಷ್ಟ. ನನಗೆ ಗಿಲ್ಲಿ ಅಂದ್ರೆ ಇಷ್ಟ ಎಂದಿದ್ದಾರೆ. ಇದೇ ಸದ್ಯಕ್ಕೆ ಬಿಗ್‌ಬಾಸ್ ಮನೆಯ ತ್ರಿಕೋನ ಪ್ರೇಮಕಥೆ.
