ದೊಡ್ಮನೆ ಆಟಕ್ಕೆ ವೇದಿಕೆ ಸಜ್ಜು- ಸ್ಪರ್ಧಿಗಳಾಗಿ ಬರುವವರು ಇವರೇನಾ?

Public TV
2 Min Read

ಟಿವಿ ಪರದೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್‌ಗೆ ವೇದಿಕೆ ಸಿದ್ಧವಾಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ಕ್ಕೆ (Bigg Boss Kannada 11) ತೆರೆಮರೆಯಲ್ಲಿ ಭಾರೀ ಸಿದ್ಧತೆ ನಡೆಯುತ್ತಿದೆ ಎಂಬ ಸುದ್ದಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ರಾಮ್ ಪೋತಿನೇನಿ ಜೊತೆ ಕುಣಿದು ಕುಪ್ಪಳಿಸಿದ ಹಾಟ್ ಬೆಡಗಿ ಕಾವ್ಯಾ ಥಾಪರ್

ಸುದೀಪ್‌ (Sudeep) ನಿರೂಪಣೆಯ ‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಶೋ ಅದ್ಧೂರಿಯಾಗಿ ಮುಗಿದಿದೆ. ಮುಂದಿನ ಸೀಸನ್‌ಗೆ ದಿನಗಣನೆ ಶುರುವಾಗಿದೆ. ಇದೇ ಅಕ್ಟೋಬರ್‌ನಿಂದ ಬಿಗ್ ಬಾಸ್ ಮುಂದಿನ ಸೀಸನ್‌ಗೆ ಶುರುವಾಗಲಿದೆ ಎಂಬ ಸುದ್ದಿ ಈಗ ಸೋಷಿಯಲ್‌ ಮೀಡಿಯಾ ತುಂಬೆಲ್ಲಾ ಸದ್ದು ಮಾಡುತ್ತಿದೆ.

ಕನ್ನಡದ ‘ಬಿಗ್ ಬಾಸ್’ 11ಕ್ಕೆ ಅಕ್ಟೋಬರ್‌ 3ನೇ ವಾರದಲ್ಲಿ ಆರಂಭವಾಗುವುದು ಎಂಬ ಮಾತು ಕೇಳಿ ಬರುತ್ತಿದೆ. ಅದಕ್ಕೂ ಮುನ್ನ ಬಿಗ್ ಬಾಸ್ ಒಟಿಟಿ 2 ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ವಾಹಿನಿ ಯಾವುದೇ ಅಧಿಕೃತ ಮಾಹಿತಿ ಕೊಟ್ಟಿಲ್ಲ. ಹಾಗೆಯೇ ಒಂದಷ್ಟು ಸ್ಪರ್ಧಿಗಳ ಹೆಸರು ಕೂಡ ಕೇಳಿ ಬರುತ್ತಿದೆ.

ಈ ಮನೆಗೋಸ್ಕರ ಅದಕ್ಕೆ ಬೇಕಾದ ಸಾಮಗ್ರಿಗಳು, ಸ್ಪರ್ಧಿಗಳಿಗೋಸ್ಕರ ವ್ಯವಸ್ಥೆ ಹೀಗೆ ದೊಡ್ಡ ಮಟ್ಟದಲ್ಲಿ ತಯಾರಿ ಮಾಡಲು ತಿಂಗಳಾನುಗಟ್ಟಲೇ ಸಮಯ ಕೂಡ ಬೇಕಾಗಿದೆ. ಹಾಗಾಗಿ ಕೂಡ ತೆರೆಮರೆಯಲ್ಲಿ ತಯಾರಿ ಮಾಡಿಕೊಳ್ತಿದ್ದಾರೆ. ಇನ್ನೂ ಬೇರೆ ಬೇರೆ ಕ್ಷೇತ್ರಗಳಿಂದ ಸ್ಪರ್ಧಿಗಳ ಆಯ್ಕೆ ಮಾಡಲಾಗತ್ತದೆ. ಪ್ರತಿ ಸೀಸನ್ ಅಂತೆಯೇ ಈ ಬಾರಿಯೂ ಕೂಡ ಹಲವರ ಹೆಸರು ಸದ್ದು ಮಾಡುತ್ತಿದೆ.

‘ಬೃಂದಾವನ’ ನಟ ವರುಣ್ ಆರಾಧ್ಯ (Varun Aradhya), ಯೂಟ್ಯೂಬರ್ ವರ್ಷಾ ಕಾವೇರಿ (Varsha Kaveri), ನಟ ತ್ರಿವಿಕ್ರಮ್, ತುಕಾಲಿ ಸಂತು ಪತ್ನಿ ಮಾನಸಾ, ‘ಪಾರು’ ಖ್ಯಾತಿಯ ಮೋಕ್ಷಿತಾ ಪೈ, ಭವ್ಯಾ ಗೌಡ (Bhavya Gowda), ರೀಲ್ಸ್ ರೇಷ್ಮಾ, ‘ಮಜಾಭಾರತ’ ರಾಘವೇಂದ್ರ ಸೇರಿದಂತೆ ಅನೇಕರ ಹೆಸರು ಕೇಳಿ ಬಂದಿದೆ. ಇನ್ನೂ ದೊಡ್ಮನೆಗೆ ಕಾಲಿಡುವ ಮುನ್ನ ನಾವು ಹೋಗ್ತೀವಿ ಎಂದು ಯಾರು ಹೇಳಲ್ಲ. ಅದು ವಾಹಿನಿಯ ನಿಯಮವಾಗಿದೆ. ದೊಡ್ಮನೆ ಆಟ ಶುರುವಾದ್ಮೇಲೆ ಯಾರು ಸ್ಪರ್ಧಿಗಳು ಎಂಬುದು ಖಚಿತವಾಗಲಿದೆ.

Share This Article