Bigg Boss Kannada 10 ಪ್ರೋಮೋ ಔಟ್- ಈ ಬಾರಿ ಸಮ್‌ಥಿಂಗ್ ಸ್ಪೆಷಲ್

By
1 Min Read

ಕಿರುತೆರೆ ಲೋಕದ ಅತೀ ದೊಡ್ಡ ರಿಯಾಲಿಟಿ ಶೋ ಅಂದರೆ ಬಿಗ್ ಬಾಸ್ (Bigg Boss Kannada) ಕಾರ್ಯಕ್ರಮ. ಸದ್ಯದಲ್ಲೇ ಕಿಚ್ಚನ(Kichcha Sudeep)  ಬಿಗ್ ಬಾಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಹೀಗಿರುವಾಗ ಬಿಗ್ ಬಾಸ್ ಸೀಸನ್ 10ರ ಮೊದಲ ಪ್ರೋಮೋ ಈಗ ರಿವೀಲ್ ಆಗಿದೆ. ಈ ಬಾರಿ ಸಮ್‌ಥಿಂಗ್ ಸ್ಪೆಷಲ್ ಆಗಿ ಇರಲಿದೆ ಅಂತಾ ವಾಹಿನಿ ಕೂಡ ಬಿಗ್ ಅಪ್‌ಡೇಟ್ ನೀಡಿದ್ದಾರೆ.

ಮನೆಯಲ್ಲಿ ಕ್ಯಾಮೆರಾಗಳನ್ನಿಟ್ಟು ಅವರ ಸ್ಪರ್ಧಿಗಳ ಚಲನ ವಲನ, ಮಾತುಗಳನ್ನು ಪ್ರೇಕ್ಷಕರಿಗೆ ರಿಯಾಲಿಟಿ ಶೋನಲ್ಲಿ ತೋರಿಸುವುದು ರೂಢಿಯಾಗಿತ್ತು. ಇದೀಗ ಬಿಡುಗಡೆ ಆಗಿರುವ ಪ್ರೋಮೋ ತುಸು ಭಿನ್ನವಾಗಿದ್ದು, ಈ ಬಾರಿ ರಿಯಾಲಿಟಿ ಶೋನ ಫಾರ್ಮ್ಯಾಟ್ ಸಹ ಭಿನ್ನವಾಗಿರುವ ಸುಳಿವು ನೀಡುತ್ತಿದೆ. ಮನೆಯೊಳಗಿನ ಕ್ಯಾಮೆರಾದ ಬದಲಿಗೆ ಪ್ರೋಮೋನಲ್ಲಿ ರಸ್ತೆಯಲ್ಲಿನ ಕ್ಯಾಮೆರಾಗಳನ್ನು ತೋರಿಸಲಾಗಿದೆ. ರಸ್ತೆಯಲ್ಲಿ, ಕಟ್ಟಡಗಳಿಗೆ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳನ್ನು ತೋರಿಸಿ, ರಸ್ತೆಯಲ್ಲಿ ಓಡಾಡುವ ವ್ಯಕ್ತಿಗಳ ದೃಶ್ಯಗಳನ್ನು ಸೆರೆ ಹಿಡಿದು ಪ್ರೋಮೋನಲ್ಲಿ ತೋರಿಸಲಾಗಿದೆ. ಪ್ರೋಮೋದ ಅಂತ್ಯದಲ್ಲಿ ಈ ಬಾರಿ ಬಿಗ್‌ಬಾಸ್ ಸಮ್‌ಥಿಂಗ್ ಸ್ಪೆಷಲ್ ಆಗಿರಲಿದೆ ಎಂದು ಹೇಳಿರುವುದು ಪ್ರೇಕ್ಷಕರ ಕುತೂಹಲ ಕೆರಳಿಸಿದೆ.

ತೆಲುಗು, ತಮಿಳು ಭಾಷೆಗಳಲ್ಲಿಯೂ ಬಿಗ್ ಬಾಸ್ ಪ್ರಾರಂಭವಾಗುತ್ತಿದೆ. ಅಂತೆಯೇ ಕನ್ನಡದಲ್ಲಿಯೂ ಇನ್ನು ಕೆಲವೇ ದಿನಗಳಲ್ಲಿ ಬಿಗ್‌ಬಾಸ್ ರಿಯಾಲಿಟಿ ಶೋ ಪ್ರಾರಂಭವಾಗಲಿದೆ. ಅನುಬಂಧ ಅವಾರ್ಡ್ ಕಾರ್ಯಕ್ರಮದ ಬಳಿಕ ಅಕ್ಟೋಬರ್‌ನಲ್ಲಿ ಶೋ ಪ್ರಾರಂಭವಾಗಲಿದೆಯಂತೆ. ಬಿಗ್ ಬಾಸ್ 10ನೇ ಸೀಸನ್ ಆಗಿರುವ ಕಾರಣ, ಈ ಬಾರಿ ಅದ್ದೂರಿಯಾಗಿ ಮಾಡಲು ವಾಹಿನಿ ನಿರ್ಧರಿಸಿದೆ. ಹಾಗಾಗಿ ಒಟಿಟಿ ಬಿಗ್ ಬಾಸ್ (Bigg Boss Ott) ಇರುವುದಿಲ್ಲ. ಇದನ್ನೂ ಓದಿ:ದೀಪಾವಳಿಗೆ ‘ಸಲಾರ್’ ಪಕ್ಕಾ: ಈ ತಿಂಗಳ ಅಂತ್ಯಕ್ಕೆ ಅನುಮಾನ

ಬಿಗ್ ಬಾಸ್ ಈ ಸೀಸನ್‌ನಲ್ಲಿ ನಮ್ರತಾ ಗೌಡ(Namratha Gowda), ಭೂಮಿಕಾ ಬಸವರಾಜ್, ವರ್ಷ ಕಾವೇರಿ, ರಾಜೇಶ್ ಧ್ರುವ ಸೇರಿದಂತೆ ಹಲವರು ದೊಡ್ಮನೆ ಆಟಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್