Bigg Boss Kannada : ವಿನಯ್ ವಿಷಯದಲ್ಲಿ ಬದಲಾದ ಸಂಗೀತಾ

Public TV
2 Min Read

ಅಂದು ಹಾವು ಮುಂಗಸಿ ಅಂತಿದ್ದ ವಿನಯ್ (Vinay Gowda) ಮತ್ತು ಸಂಗೀತಾ (Sangeetha Sringeri) ಬದಲಾಗಿದ್ದಾರಾ? ಹೌದು ಎನ್ನುತ್ತದೆ ಬಿಗ್ ಬಾಸ್ ಮನೆ. ವಿನಯ್ ಕಂಡರೆ ನನಗೆ ಭಯವಾಗುತ್ತಿದೆ, ನಾನು ಖಿನ್ನತೆಗೆ ಒಳಗಾಗುತ್ತಿದ್ದೇನೆ. ಅವನ ಬರ್ತನೆ ಸರಿಯಿಲ್ಲ ಎಂದು ಹಲವು ಆರೋಪಗಳನ್ನು ಮಾಡಿದ್ದ ಸಂಗೀತಾ, ಇದೀಗ ಏಕಾಏಕಿ ಬದಲಾಗಿದ್ದಾರೆ. ಆ ಬದಲಾವಣೆಗೆ ಏನು ಕಾರಣ ಎಂಬ ಪ್ರಶ್ನೆಯನ್ನೂ ಹುಟ್ಟು ಹಾಕಿದ್ದಾರೆ.

ಬಿಗ್ ಬಾಸ್ (Bigg Boss Kannada) ಮನೆಯ ಅಸಲಿ ಆಟ ಇದೀಗ ಶುರುವಾಗಿದೆ. ಮೊದಲಿಗೆ ತಣ್ಣನೆ ಇದ್ದ ಮನೆ ಇದೀಗ 2ನೇ ವಾರ ಇಡೀ ‘ಬಿಗ್ ಬಾಸ್’ ಮನೆಯನ್ನೇ ಅಲುಗಾಡಿಸಿದ್ದು ವಿನಯ್ ಗೌಡ- ಸಂಗೀತಾ ಶೃಂಗೇರಿ ನಡುವಿನ ಕಿತ್ತಾಟ. ವಿನಯ್ ಗೌಡ ಜೋರು ಜೋರಾಗಿ ಕೂಗಾಡಿದ್ದರು. ಅದಾದ್ಮೇಲೆ, ಪರಸ್ಪರ ಕ್ಷಮೆ ಕೇಳಿ ಜಗಳಕ್ಕೆ ಸಂಗೀತಾ ಮತ್ತು ವಿನಯ್ ಗೌಡ ಅಂತ್ಯ ಹಾಡಿದರು. ಅಂದು ಮನೆಯ ವಿಲನ್ ಎಂದಿದ್ದ ಸಂಗೀತಾ, ಈಗ ವಿನಯ್ ಗೌಡ ಅವರಿಗೆ ‘ಅತ್ಯುತ್ತಮ’ ಪಟ್ಟ ನೀಡಿದ್ದಾರೆ. ಅದನ್ನ ಕಂಡ ವೀಕ್ಷಕರು ಅಷ್ಟೆಲ್ಲಾ ಕಿತ್ತಾಡಿದ್ದರು. ಈಗ ಅತ್ಯುತ್ತಮನಾ? ಇದು ಎಂಟನೇ ಅದ್ಭುತವೇ ಸರಿ ಅಂತಿದ್ದಾರೆ.

ಕಳಪೆ- ಬೆಸ್ಟ್ ಪರ್ಫಾಮೆನ್ಸ್ ಆಯ್ಕೆ ಪ್ರಕ್ರಿಯೆಯಲ್ಲಿ ವಿನಯ್‌ ಗೌಡ ಪರವಾಗಿ ಬೆಸ್ಟ್ ಎಂದು ಸಂಗೀತಾ ವೋಟ್ ಮಾಡಿದರು. ಆದರೆ, ಅದಕ್ಕೆ ಸಂಗೀತಾ ನೀಡಿದ ಕಾರಣ ಮಾತ್ರ ವೀಕ್ಷಕರಿಗೆ ಅರ್ಥವಾಗಿಲ್ಲ. ಎಲ್ಲಾ ಟಾಸ್ಕ್ ಪ್ರಕಾರ ನೋಡಿದ್ರೆ, ಈ ವಾರ ಗ್ರೂಪ್ ಆಕ್ಟಿವಿಟೀಸ್ ಇತ್ತು. ಪ್ರತ್ಯೇಕ ಅಂತ ಬಂದಾಗ ನನಗೆ ಒಂದೇ ಚಟುವಟಿಕೆ individual ಅನಿಸಿರೋದು. ಅದಕ್ಕೆ ಬೆಸ್ಟ್ ಪರ್ಫಾಮರ್‌ ವಿನಯ್ ಅಂತ ನಾನು ಕನ್ಸಿಡರ್ ಮಾಡ್ತೀನಿ ಎಂದರು ಸಂಗೀತಾ.

ವಿನಯ್ ಗೌಡ ಥ್ರೆಟ್ ಆಗ್ತಿದೆ ನಾನು ಬಿಗ್ ಬಾಸ್ ಮನೆಯಿಂದ ಹೋಗ್ತೀನಿ ಎಂದು ಕಣ್ಣೀರಿಟ್ಟಿದ್ದ ಸಂಗೀತಾ ಈಗ ಅವರನ್ನ ಓಲೈಸುವ ಸಲುವಾಗಿ ಅವರಿಗೆ ಅತ್ಯುತ್ತಮ ಮತ ಹಾಕಿದ್ರಾ ಸಂಗೀತಾ ಎಂಬ ಡೌಟ್‌ ಎಲ್ಲರನ್ನೂ ಕಾಡುತ್ತಿದೆ. ಇನ್ನೂ ಬೆಸ್ಟ್ ಪರ್ಫಾಮರ್ ಎನಿಸಿಕೊಂಡ ರಕ್ಷಕ್‌ಗೆ ಮೆಡಲ್ ಲಭಿಸಿತು. ಕಳಪೆ ಪಟ್ಟ ಪಡೆದ ಇಶಾನಿ ಜೈಲಿಗೆ ಹೋಗಿ ಗೊಳೋ ಎಂದು ಕಣ್ಣೀರು ಇಟ್ಟರು.

ಮೊದಲ ವಾರ ಸ್ನೇಕ್ ಶ್ಯಾಮ್ ಹೊರಬಂದರು 2ನೇ ವಾರ ಯಾರಿಗೆ ಮನೆಯ ಆಟ ಅಂತ್ಯವಾಗುತ್ತೆ ಕಾದುನೋಡಬೇಕಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್