ಅನುಪಮಾ ಗೌಡ ವಿರುದ್ಧ ಸಿಡಿದೆದ್ದ ರೂಪೇಶ್‌ ರಾಜಣ್ಣ

Public TV
2 Min Read

ಬಿಗ್ ಬಾಸ್ ಮನೆಯ(Bigg Boss House) ಆಟ ಇದೀಗ ಹೈವೋಲ್ಟೇಜ್‌ನಿಂದ ಕೂಡಿದೆ. ದಿನಕಳೆದಂತೆ ಸ್ಪರ್ಧಿಗಳ ಜಟಾಪಟಿ ಜೋರಾಗಿದೆ. ಇದೀಗ ಕ್ಯಾಪ್ಟೆನ್ಸಿ ಟಾಸ್ಕ್ ವಿಚಾರವಾಗಿ ರೂಪೇಶ್ ರಾಜಣ್ಣ ಮತ್ತು ಅನುಪಮಾ ಗೌಡ ನಡುವೆ ಮಾತಿನ ಚಕಮಕಿ ನಡೆದಿದೆ. ಅನುಪಮಾ ನಡೆಗೆ ಸೂಟ್ ಕೇಸ್ ಹಿಡಿದು ಹೊರಗೆ ಹೋಗಲು ರೂಪೇಶ್ ರಾಜಣ್ಣ(Roopesh Rajanna) ಮುಂದಾಗಿದ್ದಾರೆ.

ದೊಡ್ಮನೆ ಈಗ ಮುಂಚೆ ಇದ್ದ ಹಾಗೆ ಶಾಂತ ವಾತಾವರಣವಿಲ್ಲ. ಸಾಕಷ್ಟು ರೋಚಕ ತಿರುವು ಪಡೆದು ಮುನ್ನಗ್ಗುತ್ತಿದೆ. ಕ್ಯಾಪ್ಟೆನ್ಸಿ ಪಟ್ಟ ಏರಲು ಬಿಗ್ ಬಾಸ್ ಕೊಟ್ಟಿದ್ದ ಟಾಸ್ಕ್‌ನಿಂದ ಈಗ ಮನೆಯಲ್ಲಿನ ಕಲಹಕ್ಕೆ ಕಾರಣವಾಗಿದೆ.. ಟಾಸ್ಕ್‌ವೊಂದರಲ್ಲಿ ಮೊದಲು ಬಝರ್ ಒತ್ತಿದ್ದು ನಾನು ಎಂದು ರೂಪೇಶ್ ರಾಜಣ್ಣ ಪಟ್ಟು ಹಿಡಿದಿದ್ದಾರೆ. ಬಿಗ್ ಬಾಸ್ ಬಳಿ ಅನುಪಮಾ ಅಪೀಲ್ ಮಾಡಲಿಲ್ಲ ಎಂಬ ಕಾರಣಕ್ಕೆ ರೂಪೇಶ್ ರಾಜಣ್ಣ ಗರಂ ಆಗಿದ್ದಾರೆ. ಇದೇ ಕಾರಣಕ್ಕೆ ಸೂಟ್ ಕೇಸ್‌ಗಳನ್ನ ಹಿಡಿದು ಹೊರಗೆ ಹೋಗಲು ರೂಪೇಶ್ ರಾಜಣ್ಣ ಮುಂದಾಗಿದ್ದಾರೆ. ಕೊನೆಗೆ ನನ್ನ ತಪ್ಪಿದ್ದರೆ ನಾನೇ ನಿಮ್ಮ ಕಾಲಿಗೆ ಬಿದ್ದು ಕ್ಷಮೆ ಕೇಳ್ತೀನಿ ಎಂದು ರಾಜಣ್ಣ ಅವರಿಗೆ ಅನುಪಮಾ(Anupama Gowda) ಕೇಳಿಕೊಂಡಿದ್ದಾರೆ. ಇದನ್ನೂ ಓದಿ:ಸಚಿವ ವಿ.ಸೋಮಣ್ಣ ಪುತ್ರ ಮತ್ತು ನಟ ಸೃಜನ್ ಲೋಕೇಶ್ ಮಧ್ಯ ಡಿಶುಂ ಡಿಶುಂ?

ಮುಂದಿನ ವಾರ ಕ್ಯಾಪ್ಟನ್ ಆಗಲು ನಡೆದ ಜಟಾಪಟಿಯಲ್ಲಿ ರೂಪೇಶ್ ರಾಜಣ್ಣ ಹಾಗೂ ಪ್ರಶಾಂತ್ ಸಂಬರ್ಗಿ ಒಂದೇ ಸಮಯಕ್ಕೆ ಬಝರ್ ಒತ್ತಿದರು. ಸಂಬರ್ಗಿ ಮೊದಲು ಬಝರ್ ಒತ್ತಿದರು ಅಂತ ಅನುಪಮಾ ಹೇಳಿದ್ದರು. ಆಗ ನಾನು ಮೊದಲು ಒತ್ತಿದ್ದು ಅನ್ನೋದು ರೂಪೇಶ್ ರಾಜಣ್ಣ ಅವರ ವಾದವಾಗಿತ್ತು. 100% ನಾನು ಮುಟ್ಟಿದ್ಮೇಲೆ ಪ್ರಶಾಂತ್ ಸಂಬರ್ಗಿ ಮುಟ್ಟಿದ್ದು. ದೇವರಿದ್ದಾನೆ ಎಂದು ರಾಜಣ್ಣ ಹೇಳಿದರು. ಇದರಿಂದ ಕೋಪಗೊಂಡ ಅನುಪಮಾ, ಆ ಲೈನ್ ಹೇಳಬೇಡಿ. ನಾನಿಲ್ಲಿ ಯಾರಿಗೂ ಫೇವರ್ ಮಾಡ್ತಿಲ್ಲ. ಎಕ್ಸ್ಟ್ರಾಲೈನ್ ಹೇಳಬೇಡಿ ಎಂದರು.

ನಾನು ಬಿಗ್ ಬಾಸ್ ಮನೆಯ ರಸ್ತೆ ಮೇಲೆ ಮಲಗುತ್ತೇನೆ. ನ್ಯಾಯಕ್ಕಾಗಿ ಹೋರಾಡುತ್ತೇನೆ. ಗೊಂದಲ ಇದ್ದರೆ ಕೇಳಿಕೊಳ್ಳಿ ಅಂತ ಮೊದಲೇ ಹೇಳಿದ್ದೆ. ಆದರೆ, ಕೇಳದೆ ನೇರವಾಗಿ ಘೋಷಣೆ ಮಾಡಿದರು ಎಂದು ಕ್ಯಾಮರಾ ಮುಂದೆ ರಾಜಣ್ಣ ಹೋರಾಟಕ್ಕಿಳಿದರು. ಆಟ ಆಡುವುದಿಲ್ಲ ಎಂದು ರೂಪೇಶ್ ರಾಜಣ್ಣ ಪಟ್ಟು ಹಿಡಿದರು.  ಈ ವೇಳೆ, ನಾನು ತಪ್ಪು ಮಾಡಿದ್ರೆ ಬಿಗ್ ಬಾಸ್ ಶಿಕ್ಷೆ ಕೊಡಲಿ. ಬೇಕಿದ್ದರೆ, ನಾನೇ ಹೊರಗೆ ಹೋಗುತ್ತೇನೆ ಎಂದರು ಅನುಪಮಾ. ಆದರೂ ರಾಜಣ್ಣ ಅವರ ಮನವೊಲಿಸಲು ಅನುಪಮಾ ಕಡೆಗೂ ಸೋಲಲೇ ಬೇಕಾಯಿತು.

Live Tv
[brid partner=56869869 player=32851 video=960834 autoplay=true]

Share This Article