ಕಳಪೆ ಆಟದಿಂದ ದೀಪಿಕಾಗೆ ಮುಖ ತೋರಿಸಲಾಗದೇ ಟಾಯ್ಲೆಟ್ ಒಳಗೆ ಸೇರಿಕೊಂಡ ಸಂಬರ್ಗಿ

Public TV
2 Min Read

ಬಿಗ್ ಬಾಸ್ (Bigg Boss) ಮನೆ ಇದೀಗ ರಣರಂಗವಾಗಿ ಮಾರ್ಪಟ್ಟಿದೆ. ಎರಡನೇ ವಾರಕ್ಕೆ ಕಾಲಿಟ್ಟಿರುವ ದೊಡ್ಮನೆಯಲ್ಲಿ ಪ್ರಶಾಂತ್ ಸಂಬರ್ಗಿ ಕಳಪೆ ಪ್ರದರ್ಶನ ನೀಡಿ, ದೀಪಿಕಾ ದಾಸ್‌ಗೆ(Deepika Das) ಮುಖ ತೋರಿಸಲಾಗದೇ ಟಾಯ್ಲೆಟ್ ಒಳಗೆ ಸೇರಿಕೊಂಡಿದ್ದಾರೆ. ಮನೆ ಮಂದಿಯನ್ನ ಬುಗುರಿ ಆಡಿಸಿದಂತೆ ಆಡುತ್ತಿದ್ದ ಸಂಬರ್ಗಿ ಅವರು ಇದೀಗ ತನ್ನ ತಂಡವನ್ನ ಗೆಲ್ಲಿಸಲಾಗದೆ ಸೋತು ಮಕಾಡೆ ಮಲಗಿದ್ದಾರೆ.

ಕಳೆದ ಸೀಸನ್‌ನಿಂದ ಮೋಡಿ ಮಾಡಿದ್ದ ಪ್ರಶಾಂತ್ ಸಂಬರ್ಗಿ(Prashanth Sambargi) ಇದೀಗ ಬಿಗ್ ಬಾಸ್ ಸೀಸನ್ 9ಕ್ಕೂ ಕಾಲಿಟ್ಟಿದ್ದಾರೆ. ಒಂದಲ್ಲಾ ಒಂದು ವಿಚಾರವಾಗಿ ಮನೆಯ ಕಲಹಕ್ಕೆ ಕಾರಣವಾಗುವ ಸಂಬರ್ಗಿ ಇದೀಗ ಅನುಪಮಾ ಮುಂದೆ ಸೋತು ದೀಪಿಕಾ ಮುಖ ತೋರಿಸಲಾಗದೇ ಟಾಯ್ಲೆಟ್ ಒಳಗೆ ಸೇರಿಕೊಂಡಿದ್ದಾರೆ.

ಎರಡನೇ ವಾರದಲ್ಲಿ ದೀಪಿಕಾ ದಾಸ್ (Deepika Das) ಮತ್ತು ಅನುಪಮಾ ಗೌಡ (Anupama Gowda) ಅವರನ್ನ ಕ್ಯಾಪ್ಟನ್ ಮಾಡಿ ಎರಡು ತಂಡಗಳನ್ನಾಗಿ ವಿಂಗಡಿಸಿತ್ತು. ಮೊದಲ ಟಾಸ್ಕ್‌ನಲ್ಲಿ ಬುಟ್ಟಿಯ ಒಳಗೆ ಹಾಕುವ ಟಾಸ್ಕ್‌ನಲ್ಲಿ ಮಯೂರಿ ಮುಂದೆ ಸಂಬರ್ಗಿ ಸೋತಿದ್ದರು. ಆ ಬಳಿಕ ದಿನದ ಮತ್ತೊಂದು ಟಾಸ್ಕ್ ಪ್ರಾರಂಭವಾಯ್ತು, ಎರಡು ಕಾರುಗಳನ್ನು ನಿಲ್ಲಿಸಿ ಅದರ ಪ್ರತಿಯೊಂದು ಟೈರ್ ಅನ್ನು ಜಾಕ್ ಸಹಾಯದಿಂದ ಬಿಚ್ಚಿ ಹೊಸ ಟೈರ್ ಹಾಕುವ ಟಾಸ್ಕ್ ಅದಾಗಿತ್ತು. ಇದನ್ನೂ ಓದಿ:ಮಗಳ ಫೋಟೋ ಜೊತೆ ಹೆಸರು ರಿವೀಲ್ ಮಾಡಿದ `ಕಾಂತಾರಾ’ ಹೀರೋ ರಿಷಬ್ ಶೆಟ್ಟಿ

ಟೈಯರ್ ಅನ್ನು ಬದಲಾಯಿಸುವ ಅಭ್ಯಾಸ ನನಗೆ ಇದೆಯೆಂದು 200% ಈ ಟಾಸ್ಕ್ ನಾನು ಆಡಬಲ್ಲೆ ಎಂದು ದೀಪಿಕಾ ತಂಡದಿಂದ ಪ್ರಶಾಂತ್ ಸಂಬರ್ಗಿ ಮೊದಲು ಹೋದರು. ಅನುಪಮಾ ತಂಡದಿಂದ ರಾಕೇಶ್ ಮೊದಲು ಹೋದರು. ಆದರೆ ಪ್ರಶಾಂತ್ ಸಂಬರ್ಗಿಗೆ ಒಂದೇ ಒಂದು ಟೈರ್ ಅನ್ನು ಫಿಟ್ ಮಾಡಲು ಸಾಧ್ಯವಾಗಲಿಲ್ಲ. ಆದರೆ ಅನುಪಮಾ ತಂಡದಿಂದ ರಾಕೇಶ್, ದರ್ಶ್ ಚಂದಪ್ಪ, ಆರ್ಯವರ್ಧನ್ ಗುರೂಜಿ ಹಾಗೂ ಅಮೂಲ್ಯ ಅವರುಗಳು ಟೈರ್ ಅನ್ನು ಆರಾಮವಾಗಿ ಬದಲಾಯಿಸಿ ಟಾಸ್ಕ್ ಅನ್ನು ಸುಲಭವಾಗಿ ಗೆದ್ದುಬಿಟ್ಟರು.

ಆದರೆ ಒಂದೂ ಟೈಯರ್ ಬದಲಾಯಿಸಲಾಗದೆ ಸೋತ ಪ್ರಶಾಂತ್, ಬೇಸರದಿಂದ ಟಾಯ್ಲೆಟ್ ಒಳಗೆ ಸೇರಿಕೊಂಡು ಬಿಟ್ಟಿದ್ದರು. ಎಷ್ಟು ಹೊತ್ತಾದರೂ ಬರಲಿಲ್ಲ, ಕೊನೆಗೆ ದೀಪಿಕಾ, ರೂಪೇಶ್ ಇನ್ನಿತರರು ಹೋಗಿ ಕರೆದ ಬಳಿಕ ಅವರು ಹೊರಗೆ ಬಂದರು. ಹೊರಗೆ ಬಂದರೂ ಬಹಳ ಬೇಸರದಲ್ಲಿಯೇ ಇದ್ದರು. ಆದರೆ ಅವರ ತಂಡದ ಸದಸ್ಯರಾದ ರೂಪೇಶ್ ರಾಜಣ್ಣ ಹಾಗೂ ನವಾಜ್ ಅವರುಗಳು ಪ್ರಶಾಂತ್ ಬಗ್ಗೆ ತೀವ್ರ ಬೇಸರದಲ್ಲಿದ್ದರು. ಅವರಿಗೆ ಟೈರ್ ಬದಲಾಯಿಸುವುದು ಬರಲಿಲ್ಲವೆಂದ ಮೇಲೆ ಮೊದಲು ಹೋಗಿದ್ದು ಏಕೆ ಎಂದು ರೂಪೇಶ್ ರಾಜಣ್ಣ ಪ್ರಶ್ನೆ ಮಾಡಿದರು. ಇನ್ನು ನವಾಜ್, ತನಗೆ ಆಡಲು ಅವಕಾಶ ಸಿಗಲಿಲ್ಲವೆಂದು ಬೇಸರದಲ್ಲಿದ್ದರು. ನಾನು ನಾಮಿನೇಟ್ ಆಗಿದ್ದೇನೆ, ನನಗೆ ಆಡಲು ಅವಕಾಶ ಬೇಕು ಎಂದು ಕ್ಯಾಪ್ಟನ್ ದೀಪಿಕಾ ಬಳಿ ಅಳಲು ತೋಡಿಕೊಂಡಿದ್ದರು. ಸಂಬರ್ಗಿ ಕಳಪೆ ಪ್ರದರ್ಶನಕ್ಕೆ ದೀಪಿಕಾ ದಾಸ್ ತಂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *