ಬಿಗ್‌ಬಾಸ್ ಮನೆಗೆ ಈ ಬಾರಿ ಯಾರು ಹೋಗ್ತಾರೆ? ಹರಿದಾಡುತ್ತಿದೆ ಹಲವು ಹೆಸರುಗಳು

Public TV
3 Min Read

ಬಿಗ್‌ಬಾಸ್ ಕನ್ನಡ ಸೀಸನ್ 12ಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಎಂದಿನಂತೆ ಆರಂಭಕ್ಕೂ ಮುನ್ನವೇ ಕೆಲವು ಸ್ಪರ್ಧಿಗಳ ಹೆಸರು ರಿವೀಲ್ ಆಗೋದು ಸಾಮಾನ್ಯ. ಅನೇಕ ಬಾರಿ ಮಿಸ್ ಆಗಿರೋ ಎಕ್ಸಾಂಪಲ್ ಕೂಡ ಇದೆ. ಸಾಮಾನ್ಯವಾಗಿ ವಿವಿಧ ವಲಯದ ಸೆನ್ಷೇಷನಲ್ ವ್ಯಕ್ತಿಗಳನ್ನ ಒಗ್ಗೂಡಿಸಿ ಸ್ಪರ್ಧಿಗಳನ್ನಾಗಿ ಆಯ್ಕೆ ಮಾಡಲಾಗುತ್ತೆ. ಅದರಂತೆ ಈ ಬಾರಿ ಬಿಗ್‌ಹೌಸ್ ಮನೆಯೊಳಗೆ ಹೋಗಲು ಚಾಲ್ತಿಯಲ್ಲಿರುವ ಸ್ಪರ್ಧಿಗಳು ಹೆಸರು ಪಟ್ಟಿಇಲ್ಲಿದೆ

ಸ್ಪರ್ಧೆಗೆ ರೆಡಿಯಾದ್ರಾ ಸುಧಾರಾಣಿ?
ಹಿರಿಯ ನಟಿ ಸುಧಾರಾಣಿ (Sudha Rani) ಧಾರಾವಾಹಿಗೂ ಎಂಟ್ರಿ ಕೊಟ್ಟ ಎವರ್‌ಗ್ರೀನ್ ಸುಂದರಿ. ಸೋಶಿಯಲ್ ಮೀಡಿಯಾದಲ್ಲಿ ಬಹಳವೇ ಆ್ಯಕ್ಟೀವ್ ಇರುವ ಪ್ರತಿಭಾನ್ವಿತೆ. ಸುಧಾರಾಣಿ ಈ ಬಾರಿ ಬಿಗ್‌ಬಾಸ್ ಮನೆಗೆ ಹೋಗುವ ಸ್ಟಾರ್‌ನಟಿ ಎನ್ನಲಾಗುತ್ತಿದೆ. ಈ ಬಗ್ಗೆ ಸುಧಾರಾಣಿ ಕೂಡ ಪ್ರತಿಕ್ರಿಯಿಸಿ ಹೌದಾ ಎಂದು ಕೇಳಿದ್ದಾರಷ್ಟೇ, ಹೋಗುತ್ತಿಲ್ಲ ಅಥವಾ ಹೋಗ್ತಿದ್ದೀನಿ ಅನ್ನೋ ಸುಳಿವನ್ನ ಅವರು ನೀಡಿಲ್ಲ. ಏನೇ ಆದ್ರೂ ಬಹುಮುಖ ಪ್ರತಿಭೆ ಸುಧಾರಾಣಿ ಈ ಬಾರಿ ಬಿಗ್‌ಬಾಸ್ ಸ್ಪರ್ಧೆಗೆ ಎಂಟ್ರಿ ಕೊಟ್ರೆ ಮನರಂಜನೆಗೆ ಮೋಸ ಇಲ್ಲ ಎನ್ನುತ್ತಿದ್ದಾರೆ ಫ್ಯಾನ್ಸ್.

 

ಜವಾರಿ ಹೈದ ಬಾಳು ಬೆಳಗುಂದಿ?
ಜವಾರಿ ಪ್ರತಿಭೆಯೋರ್ವ ಈ ಬಾರಿ ಮನರಂಜನೆ ಕೊಡಲು ಹೊರಟಿರುವ ಸುದ್ದಿ ರಿವೀಲ್ ವೈರಲ್ ಆಗಿದೆ. ಅವರೇ ಬಾಳು ಬೆಳಗುಂದಿ. ಈ ಜವಾರಿ ಸಿಂಗರ್ ಈಗಾಗ್ಲೇ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೆಷನ್‌ ಕ್ರಿಯೇಟ್ ಮಾಡಿರುವ ಸ್ಟಾರ್. ಸರಿಗಮಪ ಸ್ಪರ್ಧೆಯ ಟಾಪ್ 5 ಕಂಟೆಸ್ಟಂಟ್‌ಗಳಲ್ಲಿ ಓರ್ವ. ಅನೇಕ ಬಾರಿ ಆಫರ್ ಬಂದಿರೋದಾಗಿ ಬಾಳು ಈಗಾಗ್ಲೇ ಹೇಳ್ಕೊಂಡಿದ್ರು. ಆದರೆ ಈ ಬಾರಿ ಬಿಗ್ ಸ್ಪರ್ಧೆಗೆ ಎಂಟ್ರಿ ಕೊಡಲು ಬಾಳು (Balu Belagundi) ತಯಾರಾಗಿದ್ದಾರೆ ಎನ್ನಲಾಗುತ್ತಿದೆ.

ಅಗ್ನಿಸಾಕ್ಷಿ ವಿಜಯ್ ಸೂರ್ಯ ಫಿಕ್ಸಾ ?
ಸೀರಿಯಲ್ ಸ್ಟಾರ್‌ಗಳಿಗೆ ಜನಪ್ರೀತಿ ಹೆಚ್ಚು. ಹೀಗೆ ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಜನಮೆಚ್ಚಿದ ನಟ ವಿಜಯ್ ಸೂರ್ಯ. ಬಿಗ್‌ಬಾಸ್ ಸ್ಪರ್ಧೆಯಲ್ಲಿ ಹಿಂದೆ ಅನೇಕ ಬಾರಿ ವಿಜಯ್ ಸೂರ್ಯ (Vijay Surya) ಹೆಸರು ಕೇಳಿಬಂದಿತ್ತು. ಅದರೆ ಈ ಬಾರಿ ವಿಜಯ್ ಹೆಸರು ಬಲವಾಗೇ ಕೇಳಿಬರುತ್ತಿದೆ. ಆನ್ಸರ್ ಕೆಲವು ದಿನಗಳಲ್ಲಿ ಸಿಗುತ್ತೆ.

ಅಂಕಿತಾ-ಅನನ್ಯಾ, ಅಕ್ಕತಂಗಿಯರಲ್ಲಿ ಯಾರು ಬಿಗ್ ಕಂಟೆಸ್ಟೆಂಟ್‌?
ಬಿಗ್‌ಹೌಸ್‌ಗೆ ಎಲ್ಲಾ ರೀತಿಯ ಸ್ಪರ್ಧಿಗಳು ಬೇಕಾಗ್ತಾರೆ. ಹೀಗಾಗಿ ಒಂದು ಹೆಸರು ಭಾರೀ ಚಾಲ್ತಿಯಲ್ಲಿರೋದು ಬಹುಮುಖ ಪ್ರತಿಭೆ ಅಂಕಿತಾ ಅಮರ್ (Ankita Amar) ಹೆಸರು. ಜೊತೆ ಇವರ ಸಹೋದರಿ ಅನನ್ಯಾ ಅಮರ್ (Ananya Amar) ಹೆಸರೂ ಚಾಲ್ತಿಯಲ್ಲಿದೆ. ಅಕ್ಕ ಸಿನಿಮಾ ಸೀರಿಯಲ್‌ನಲ್ಲಿ ಫೇಮಸ್ ಆಗಿದ್ರೆ ತಂಗಿ ಅಂಕಿತಾ ಅಮರ್ ರಿಯಾಲಿಟಿ ಶೋ ಸ್ಟಾರ್. ಹೀಗಾಗಿ ಅಂಕಿತಾ, ಅನನ್ಯಾ ಅಮರ್ ಸಹೋದರಿಯರಲ್ಲಿ ಒಬ್ಬರು ಬಿಗ್‌ಹೌಸ್‌ಗೆ ಈ ಬಾರಿ ಹೋಗುವುದು ಫಿಕ್ಸ್ ಎನ್ನಲಾಗುತ್ತಿದೆ. ಖಚಿತತೆಗೆ ಸಪ್ಟೆಂಬರ್ 28ರವರೆಗೂ ಕಾಯಬೇಕು.

ಸೋಶಿಯಲ್ ಮೀಡಿಯಾ ಸ್ಟಾರ್ ಪಾಯಲ್ ಚೆಂಗಪ್ಪ
ಇದು ಸೋಶಿಯಲ್ ಮೀಡಿಯಾ ಕಾಲ ಆಗಿರೋದ್ರಿಂದ ಯೂಟ್ಯೂಬ್ ಫಾಲೋವರ್ಸ್‌ ಪಾಯಲ್ ಚೆಂಗಪ್ಪ (Payal Chengappa) ಚಿರಪರಿಚಿತ ಪ್ರತಿಭೆ. ಕಾಮಿಡಿ ಕಂಟೆಂಟ್ ಮೂಲಕ ಯೂಟ್ಯೂಬ್‌ನಲ್ಲಿ ಯಂಗ್‌ಸ್ಟರ್‌ಗಳ ಮನಗೆದ್ದ ಚೆಲುವೆ. ಸಿನಿಮಾ ನಟಿಯೂ ಕೂಡ. ಈ ಚೆಲುವೆಗೂ ಬಿಗ್‌ಬಾಸ್ ಕಾರ್ಯಕ್ರಮ ತಂಡದಿಂದ ಕರೆಯೋಲೆ ಹೋಗಿದ್ಯಂತೆ. ಒಪ್ಪಿಕೊಳ್ತಾರಾ…? ತಿಳ್ಕೊಳ್ಳೋಕೆ ಕೆಲವು ದಿನ ಕಾಯಬೇಕು.

ಸತ್ಯ ಧಾರಾವಾಹಿಯ ಅಮೂಲ್ ಬೇಬಿಗೂ ಚಾನ್ಸ್ ?
ಸತ್ಯ ಧಾರಾವಾಹಿಯ ಅಮುಲ್ ಬೇಬಿ ಎಂದೇ ಫೇಮಸ್ ಆಗಿರುವ ಕಿರುತೆರೆ ನಟ ಸಾಗರ್ ಬಿಳಿಗೌಡ. ಇವರ ಹೆಸರು ಕೂಡ ಸ್ಪರ್ಧಿಗಳ ಸಂಭಾವ್ಯ ಪಟ್ಟಿಯಲ್ಲಿ ಕೇಳಿಬರುತ್ತಿದೆ.

 

ರೀಲ್‌ಸ್ಟಾರ್‌ ವರುಣ್ ಆರಾಧ್ಯಗೂ ಅವಕಾಶ ?
ಸೋಶಿಯಲ್ ಮೀಡಿಯಾ ಹಾಗೂ ಸೀರಿಯಲ್ ಮೂಲಕ ಜನಪ್ರಿಯತೆ ಗಳಿಸಿರುವ ವರುಣ್ ಆರಾಧ್ಯ (Varun Aradya) ಹೆಸರು ಈ ಬಾರಿ ಬಿಗ್‌ಬಾಸ್ ಸ್ಪರ್ಧೆಯಲ್ಲಿ ಕೇಳಿಬರುತ್ತಿದೆ. ರೀಲ್ಸ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಫಾಲೋವರ್ಸ್ ಪಡೆದ ಯುವಕ. ವಿವಾದದಿಂದ ಸುದ್ದಿಯಾಗಿದ್ದ ಹುಡುಗ ವರುಣ್ ಆರಾಧ್ಯ. ಈ ಬಾರಿ ವರಣ್ ಕೂಡ ದೊಡ್ಮನೆಗೆ ಎಂಟ್ರಿ ಕೊಡುತ್ತಿರುವುದು ಖಚಿತ ಎನ್ನುತ್ತದೆ ಸುದ್ದಿಮೂಲ.

ಸೋಶಿಯಲ್ ಮೀಡಿಯಾ ಸ್ಟಾರ್ ಭೂಮಿಕಾ ದೇಶಪಾಂಡೆ ?
ಕಂಟೆಂಟ್ ಕ್ರಿಯೇಟರ್ ಹಾಗು ರೀಲ್ಸ್ ಚೆಲುವೆ, ಉತ್ತರ ಕರ್ನಾಟಕದ ಖಡಕ್ ಹುಡುಕಿ ಭೂಮಿಕಾ ದೇಶಪಾಂಡೆ (Bhumika Deshpande) ಹೆಸರು ಈ ಬಾರಿಯ ಕಂಟೆಸ್ಟೆಂಟ್‌ ಲಿಸ್ಟ್‌ನಲ್ಲಿ ಕೇಳಿಬರುತ್ತಿದೆ.

Share This Article