ದೊಡ್ಮನೆಯ ಮೊದಲ ಎಲಿಮಿನೇಷನ್- ಪ್ರಬಲ ಸ್ಪರ್ಧಿಯೇ ಔಟ್?

Public TV
1 Min Read

‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಶೋ ಶುರುವಾಗಿ 1 ವಾರ ಕಳೆದಿದೆ. 17 ಸ್ಪರ್ಧಿಗಳ ಆಟ ಕೂಡ ಜೋರಾಗಿದೆ. ಹೀಗಿರುವಾಗ ದೊಡ್ಮನೆಯ ಮೊದಲ ಎಲಿಮಿನೇಷನ್‌ನಲ್ಲಿ ಪ್ರಬಲ ಸ್ಪರ್ಧಿಯೇ ಔಟ್ ಆಗಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ:‘ನಿದ್ರಾದೇವಿ Next Door’ ಸಿನಿಮಾಗೆ ಕುಂಬಳಕಾಯಿ ಪ್ರಾಪ್ತಿ

ರೂಲ್ಸ್ ಪ್ರಕಾರ, ವಾರಾಂತ್ಯದ ಕಡೆಯ ಪಂಚಾಯಿತಿಯಲ್ಲಿ ಯಾರಾದರೂ ಒಬ್ಬ ಸ್ಪರ್ಧಿಯ ಎಲಿಮಿನೇಷನ್ ಪ್ರಕ್ರಿಯೆ ನಡೆಯುತ್ತದೆ. ಅದರಂತೆ ದೊಡ್ಮನೆಯ ಮೊದಲ ವಾರ ಯಾರು ಊಹಿಸಿರದ ವ್ಯಕ್ತಿ ಯಮುನಾ ಶ್ರೀನಿಧಿ (Yamuna Srinidhi)  ಔಟ್ ಆಗಿದ್ದಾರೆ ಎನ್ನಲಾಗಿದೆ. ಅತೀ ಕಡಿಮೆ ವೋಟ್ ಪಡೆದ ಕಾರಣ ಮನೆಯಿಂದ ಹೊರ ಬಂದಿದ್ದಾರೆ ಎನ್ನಲಾಗ್ತಿದೆ.

ಶನಿವಾರ (ಸೆ.5) ಸಂಚಿಕೆಯಲ್ಲಿ ಭವ್ಯಾ, ಗೌತಮಿ ಜಾದವ್, ಮಾನಸಾ ಸೇಫ್ ಆಗಿದ್ದಾರೆ. ಗಟ್ಟಿ ಸ್ಪರ್ಧಿ ಎಂದು ಗುರುತಿಸಿಕೊಂಡಿದ್ದ ಯಮುನಾ ಎಲಿಮಿನೇಟ್ ಆಗಿದ್ದಾರೆ ಎನ್ನಲಾದ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಈ ಸುದ್ದಿ ಕೇಳಿ ಫ್ಯಾನ್ಸ್ ಕೂಡ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಈ ಸುದ್ದಿ ನಿಜನಾ? ಎಂಬುದನ್ನು ಭಾನುವಾರದ (ಸೆ.6) ಸಂಚಿಕೆಯಲ್ಲಿ ಉತ್ತರ ಸಿಗಲಿದೆ. ಅಲ್ಲಿಯವರೆಗೂ ಕಾದುನೋಡಬೇಕಿದೆ.

Share This Article