BBK 11: ದೊಡ್ಮನೆ ಆಟದ ಬಗ್ಗೆ ಹೊರಬಿತ್ತು ಬಿಗ್ ನ್ಯೂಸ್- ಫ್ಯಾನ್ಸ್‌ಗೆ ಸಿಹಿ ಸುದ್ದಿ

Public TV
2 Min Read

ಳೆದ 10 ಸೀಸನ್‌ಗಳ ಮೂಲಕ ಮನರಂಜನೆ ಕೊಡುವಲ್ಲಿ ಯಶಸ್ವಿಯಾದ ರಿಯಾಲಿಟಿ ಶೋ ಬಿಗ್‌ಬಾಸ್. ಇದೀಗ 11ನೇ ಸೀಸನ್ ಪ್ರತಿ ಮನೆ ಮನಗಳನ್ನ ಸೆಳೆದಿದೆ. ಏನೇ ಮಿಸ್ ಮಾಡಿದ್ರೂ ಈ ಕಾರ್ಯಕ್ರಮ ಮಿಸ್ ಮಾಡೊಲ್ಲ ಎನ್ನುವಷ್ಟರ ಮಟ್ಟಿಗೆ ವೀಕ್ಷಕರನ್ನ ಆಕರ್ಷಿಸಿದೆ ಈ ಬಾರಿಯ ಬಿಗ್ ಬಾಸ್ ಶೋ. ಅಂತಹ ಕಾರ್ಯಕ್ರಮದ ಬಗ್ಗೆ ಬಿಗ್ ನ್ಯೂಸ್ ಒಂದು ಭಾರೀ ಸದ್ದು ಮಾಡ್ತಿದೆ. ಅದೇನಪ್ಪ ಬಿಗ್ ನ್ಯೂಸ್ ಅಂತೀರಾ? ಇಲ್ಲಿದೆ ನೋಡಿ ಮಾಹಿತಿ. ಇದನ್ನೂ ಓದಿ:ಗರ್ಲ್‌ಫ್ರೆಂಡ್‌ ರಶ್ಮಿಕಾ ಮಂದಣ್ಣಗೆ ಲಕ್ಕಿ ಚಾರ್ಮ್‌ ಎಂದ ವಿಜಯ್‌ ದೇವರಕೊಂಡ

‘ಬಿಗ್ ಬಾಸ್ ಸೀಸನ್ 11’ (Bigg Boss Kannada 11) ಮನರಂಜನೆಯ ಇತಿಹಾಸದಲ್ಲಿ ಮೈಲುಗಲ್ಲು ಸಾಧಿಸಿದೆ. ಕಳೆದ ಸೀಸನ್ ಕೊಟ್ಟ ಮನರಂಜನೆಗೆ ಕರುನಾಡು ಕಳೆದು ಹೋಗಿತ್ತು. ಅಲ್ಲದೇ, ಬಿಗ್ ಬಾಸ್ ಶೋಗೆ ಭರ್ಜರಿ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. ಹೀಗಾಗಿ ಕಳೆದ ಬಾರಿ ಬಿಗ್ ಬಾಸ್ ಶೋವನ್ನ ಎರಡು ವಾರಗಳ ಕಾಲ ಜಾಸ್ತಿ ಮಾಡಿ ಮತ್ತಷ್ಟು ಮನರಂಜನೆಯನ್ನ ನೀಡಲಾಗಿತ್ತು. ಇದೀಗ ಸೀಸನ್ 11ರ ಶೋವನ್ನ ಇನ್ನೆರಡು ವಾರಗಳ ಕಾಲ ಮುಂದುವರೆಸುವುದಕ್ಕೆ ನಡೆಯುತ್ತಿದೆಯಂತೆ ಭರ್ಜರಿ ಪ್ಲ್ಯಾನ್‌.

ಹೀಗೊಂದು ಸುದ್ದಿ ಭಾರೀ ಸದ್ದು ಮಾಡ್ತಿದೆ. ಕಾರಣ ಬಿಗ್ ಬಾಸ್ ಸೀಸನ್ 11ಕ್ಕೆ ಕರುನಾಡ ಜನರು ಕೊಡ್ತಿರುವ ರೆಸ್ಪಾನ್ಸ್. ಈ ಕಾರಣದಿಂದ ಈ ಬಾರಿ ಕೂಡಾ ಬಿಗ್ ಬಾಸ್ ಶೋವನ್ನ ಇನ್ನೆರಡು ವಾರಗಳ ಕಾಲ ಮುಂದುವರೆಸುವುದಕ್ಕೆ ಪ್ಲ್ಯಾನ್ ಮಾಡಲಾಗಿದೆ ಎನ್ನಲಾಗ್ತಿದೆ. ಆದರೆ ಬಿಗ್ ಬಾಸ್ ಟೀಮ್ ಆಗಲಿ, ವಾಹಿನಿಯಾಗಲಿ ಅಧಿಕೃತ ಮಾಹಿತಿ ನೀಡಿಲ್ಲ.

‘ಬಿಗ್ ಬಾಸ್ 11’ನೇ ಸೀಸನ್ ವಾರದಿಂದ ವಾರಕ್ಕೆ ಕೌತುಕತೆಯನ್ನ ಮೂಡಿಸುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಟಾಸ್ಕ್, ರಿಸ್ಕ್, ಫೈಟ್, ಎಂಟರ್‌ಟೈನ್ಮೆಂಟ್ ಯಾವುದಕ್ಕೂ ಕೊರತೆ ಇಲ್ಲ. ಇನ್ನೂ ವಾರ ಪೂರ್ತಿ ನಡೆಯುವ ಕಾರ್ಯಕ್ರಮ ಒಂದು ಕಡೆಯಾದ್ರೆ, ಸುದೀಪ್ ನಡೆಸಿಕೊಡುವ ವೀಕೆಂಡ್ ಶೋ ಮತ್ತೊಂದು ಕಡೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

ಕೆಲವೊಂದು ಬಾರಿ ಎಪಿಸೋಡ್ ನೋಡೋದನ್ನ ಮರೆತರೂ ಸುದೀಪ್ ಬರುವ ಎರಡು ದಿನಗಳನ್ನ ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳುವುದಿಲ್ಲ ಜನ. ವೀಕೆಂಡ್‌ನಲ್ಲಿ ಕಿಚ್ಚನ ಪಂಚಾಯ್ತಿ ಏನಾಗುತ್ತೆ? ಕಿಚ್ಚ ಯಾರನ್ನ ಬೈಯ್ತಾರೆ? ಯಾರನ್ನ ಹೊಗಳ್ತಾರೆ ಅನ್ನೋದನ್ನೇ ಎದುರು ನೋಡ್ತಿರುತ್ತೆ ಕರುನಾಡು. ಹೀಗಾಗಿ ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮವನ್ನ ಇನ್ನೆರಡು ವಾರಗಳ ಕಾಲ ಎಕ್ಸ್ಟೆಂಡ್ ಮಾಡುವ ಪ್ಲ್ಯಾನ್‌ಗಳು ಕೂಡ ನಡೆಯುತ್ತಿವೆ ಅಂತ ಗುಮಾನಿ ಎದ್ದಿದೆ.

Share This Article