ಕಿಚ್ಚನ ಮುಂದೆಯೇ ವಿನಯ್‌ಗೆ ಚಾಟಿ ಬೀಸಿದ ಮನೆಮಂದಿ

By
2 Min Read

ದೊಡ್ಮನೆಯ ಮನೆಯ ಆಟ ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನ ಪಡೆದುಕೊಳ್ಳುತ್ತಿದೆ. 3 ವಾರ ಪೂರೈಸಿ 4ನೇ ವಾರದತ್ತ ಮುನ್ನುಗ್ಗುತ್ತಿದೆ. ಇದರ ನಡುವೆ ಕಿಚ್ಚನ ಪಂಚಾಯಿತಿಯಲ್ಲಿ ಸುದೀಪ್ ಮುಂದೆಯೇ ವಿನಯ್ ಗೌಡಗೆ (Vinay Gowda) ತುಕಾಲಿ ಸಂತೂ (Tukali Santhu) ಟಾಂಗ್ ಕೊಟ್ಟಿದ್ದಾರೆ.

ಬಿಗ್‌ ಬಾಸ್ (Bigg Boss Kannada) ಒಂಟಿ ಸಲಗ ಎಂದು ಹೇಳುವ ಮೂಲಕ ವಿನಯ್ ಫೈನಲಿಸ್ಟ್ ಆಗುವ ಲಕ್ಷಣವಿದೆ ಎಂದು ಸುದೀಪ್ ವಾರದ ಪಂಚಾಯಿತಿಯಲ್ಲಿ ಮಾತನಾಡಿದರು. ಅವರಿಗೆ ಯಾರು ಎದುರಾಳಿಗಳು ಇಲ್ವಾ ಎಂದು ಕಿಚ್ಚ ಪ್ರಶ್ನಿಸಿದ್ದರು. ಈ ಬೆನ್ನಲ್ಲೇ ವಿನಯ್ ವಿರುದ್ಧ ಮನೆಮಂದಿ ತಿರುಗಿ ಬಿದ್ದಿದ್ದಾರೆ. ಇದನ್ನೂ ಓದಿ:ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ಕುಟುಂಬಸ್ಥರು

ಸೂಕ್ತವೆನಿಸುವ ಗಾದೆಯ ಫಲಕವನ್ನ ಎದುರಾಳಿ ಸ್ಪರ್ಧಿಗೆ ಹಾಕಿ ಸೂಕ್ತ ಕಾರಣವನ್ನ ನೀಡಬೇಕು. ಅದರಂತೆಯೇ ಕಾರ್ತಿಕ್, ನಮ್ರತಾ, ವಿನಯ್ ಸೇರಿದಂತೆ ಹಲವರಿಗೆ ನಾ ನಾ ರೀತಿಯ ಗಾದೆಯ ಫಲಕಗಳು ಸಿಕ್ಕಿವೆ. ಅದರಲ್ಲಿ ವಿನಯ್ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ‘ಮೂರು ಬಿಟ್ಟವರು ಊರಿಗೆ ದೊಡ್ಡವರು’ ಎಂದು ತುಕಾಲಿ ಸಂತೂ ವಿನಯ್‌ಗೆ ಕುಟುಕಿದ್ದಾರೆ.

‘ಸೂಪರ್ ಸಂಡೇ ವಿತ್ ಸುದೀಪ್’ ಶೋನಲ್ಲಿ ಸುದೀಪ್ ಮುಂದೆಯೇ ಎಲ್ಲರನ್ನೂ ಹೀಯಾಳಿಸಿ ಮಾತನಾಡುತ್ತಾರೆ ಎಂದು ಡ್ರೋನ್ ಪ್ರತಾಪ್, ತನಿಷಾ ಸೇರಿದಂತೆ ಹಲವರು ವಿನಯ್ ವಿರುದ್ಧ ಮಾತನಾಡಿದ್ದಾರೆ. ಇನ್ನೂ ವಿನಯ್ ಗೌಡ ವಿಚಾರದಲ್ಲಿ ವೀಕೆಂಡ್ ಪಂಚಾಯಿತಿಯಲ್ಲಿ ಯಾಕಿಷ್ಟು ಮೌನ ವಹಿಸಿದ್ದಾರೆ ಕಿಚ್ಚ (Sudeep) ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.

ನಟಿ ಸಂಗೀತಾ ಆಡಿದ ಅಸಭ್ಯ ಮಾತು, ಡ್ರೋನ್ ಹೀಯಾಳಿಸಿದ ರೀತಿ ಸೇರಿದಂತೆ ಹಲವು ವಿಷಯಗಳಿಗೆ ಸುದೀಪ್ ಕ್ಲಾಸ್ ತೆಗೆದುಕೊಳ್ಳುಬೇಕಿತ್ತು. ಆದರೆ ಯಾಕೆ ತಟಸ್ಥರಾಗಿದ್ದಾರೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡ್ತಿದ್ದಾರೆ. ಅಭಿಮಾನಿಗಳ ಪ್ರಶ್ನೆ ಉತ್ತರ ಸಿಗುತ್ತಾ ಕಾದುನೋಡಬೇಕಿದೆ.

ಬಿಗ್‌ ಬಾಸ್‌ ಆಟದಿಂದ ಈಗಾಗಲೇ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್‌ ಆಗಿದ್ದಾರೆ. ಮತ್ತೆ ದೊಡ್ಮನೆಗೆ ವರ್ತೂರು ಸಂತೋಷ್‌ (Varthur Santhosh) ಕಾಲಿಡಲಿದ್ದಾರೆ ಎಂಬ ಸುದ್ದಿಯೂ ಇದೆ. ಇದೆಲ್ಲದರ ನಡುವೆ ಈ ವಾರ ಮನೆಯಿಂದ ಹೊರ ಬರುವ ಆ ಸ್ಪರ್ಧಿ ಯಾರು ಎಂಬ ಕುತೂಹಲ ಮನೆ ಮಾಡಿದೆ.

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್