ಬೆಂಕಿಗೆ ಸರ್ಪ್ರೈಸ್ ಕೊಟ್ಟ ವರ್ತೂರು- ಮದುವೆ ಯಾವಾಗ ಎಂದ ಫ್ಯಾನ್ಸ್

Public TV
1 Min Read

ಬಿಗ್‌ ಬಾಸ್‌ ಕನ್ನಡ 10ರ ಹಾಟ್ ಬ್ಯೂಟಿ ತನಿಷಾ ಕುಪ್ಪಂಡ (Tanisha Kuppanda) ಅವರಿಗೆ ವರ್ತೂರು ಸಂತೋಷ್ (Varthur Santhosh) ಸರ್ಪ್ರೈಸ್‌ವೊಂದನ್ನು ಕೊಟ್ಟಿದ್ದಾರೆ. ತನಿಷಾರ ರೆಸ್ಟೋರೆಂಟ್‌ಗೆ ಭೇಟಿ ಕೊಟ್ಟು ವರ್ತೂರು ಅಚ್ಚರಿ ಮೂಡಿಸಿದ್ದಾರೆ. ಇದನ್ನೂ ಓದಿ:ನನ್ನ ಲೈಫ್‌ನಲ್ಲಿ ವಿಜಯ್ ಎಲ್ಲರಿಗಿಂತ ಹೆಚ್ಚಾಗಿ ಬೆಂಬಲಿಸಿದ್ದಾರೆ- ರಶ್ಮಿಕಾ

ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಪ್ರೇಮ ಪಕ್ಷಿಗಳಾಗಿ ತನಿಷಾ- ವರ್ತೂರು ಸಂತೋಷ್ ಹೈಲೆಟ್ ಆಗಿದ್ದರು. ಬಿಗ್ ಬಾಸ್ ಶೋ ಮುಗಿದ ಮೇಲೆ ಇಬ್ಬರೂ ಜೊತೆಯಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ತನಿಷಾ- ವರ್ತೂರು ಸಂತೋಷ್ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.

ತನಿಷಾರ ಮುಂದಾಳತ್ವದ ಹೋಟೆಲ್‌ಗೆ ಸಡನ್ ಭೇಟಿ ನೀಡಿ ಬೆಂಕಿ ಮುಖದಲ್ಲಿ ಸಂತೋಷ್ ನಗು ಮೂಡಿಸಿದ್ದಾರೆ. ಸಂತೋಷ್ ದಿಢೀರ್ ಭೇಟಿ ತನಿಷಾಗೆ ಖುಷಿ ಕೊಟ್ಟಿದೆ. ಈ ವೇಳೆ, ಇಬ್ಬರು ಜೊತೆಯಾಗಿ ಫೋಟೋ ಕೂಡ ಕ್ಲಿಕ್ಕಿಸಿಕೊಂಡಿದ್ದಾರೆ.

ತನಿಷಾ- ವರ್ತೂರು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಇಬ್ಬರ ಮದುವೆ ಯಾವಾಗ? ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಇನ್ನೂ ಬಿಗ್ ಬಾಸ್ ಫಿನಾಲೆ ವೇದಿಕೆಯಲ್ಲಿ ಸುದೀಪ್, ವರ್ತೂರುಗೆ ಇರುವ ಫೇಮ್‌ಗೆ 3 ಬಾರಿ ಮದುವೆಯಾಗಬಹುದು ಎಂದಿದ್ದರು. ಅದಕ್ಕೆ ವರ್ತೂರು ತಾಯಿ, ಆದರೆ ಆಗಲಿ ಬಿಡಿ ಎಂದು ಗ್ರೀನ್ ಸಿಗ್ನಲ್ ನೀಡಿದ್ದರು. ಆಗ ತನಿಷಾ ನಾಚಿ ನೀರಾಗಿದ್ದರು.

Share This Article