ಕೊನೆಯ ಕ್ಯಾಪ್ಟನ್ಸಿ ಆಟದಲ್ಲಿ ಮೋಸ ಮಾಡಿದ್ರಾ ಧನುಷ್‌? – ಯಾರಾಗ್ತಾರೆ ಮನೆಯ ಕ್ಯಾಪ್ಟನ್?

1 Min Read

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಫಿನಾಲೆಗೆ ಹತ್ತಿರವಾಗ್ತಿದೆ. ಈ ಹಿನ್ನೆಲೆಯಲ್ಲಿ ಮನೆಯವ್ರಿಗೆ ಕೊನೆಯ ಕ್ಯಾಪ್ಟನ್‌ ಅವಕಾಶವನ್ನ ಬಿಗ್‌ ಬಾಸ್‌ ಕೊಟ್ಟಿದ್ದಾರೆ. ಕೊನೆಯ ಕ್ಯಾಪ್ಟನ್‌ ಆಗುವವರು ನೇರವಾಗಿ ಫಿನಾಲೆಗೆ ಎಂಟ್ರಿ ಕೊಡ್ತಾರೆ ಅಂತ ಹೇಳಲಾಗಿತ್ತು. ಈ ಸ್ಥಾನಕ್ಕಾಗಿ ಅಶ್ವಿನಿ ಗೌಡ ವಿರುದ್ಧ ನಡೆದ ಟಾಸ್ಕ್‌ನಲ್ಲಿ ಧನುಷ್‌ ಮೋಸ ಮಾಡಿದ್ರಾ ಅನ್ನೋ ಪ್ರಶ್ನೆ ಹುಟ್ಟುಹಾಕಿದೆ. ಸ್ವತಃ ಬಿಗ್‌ ಬಾಸ್‌ ಇದನ್ನು ಪ್ರಶ್ನಿಸಿದ್ದಾರೆ.

ಕೊನೆಯ ಕ್ಯಾಪ್ಟನ್ಸಿ ರೇಸ್‌ನಲ್ಲಿದ್ದ ಅಶ್ವಿನಿ ಗೌಡ ಮತ್ತು ಧನುಷ್‌ಗೆ ಬಿಗ್‌ ಬಾಸ್‌ ಒಂದು ಟಾಸ್ಕ್‌ ಕೊಟ್ಟಿದ್ದರು. ಒಂದು ಮೇಜಿನಲ್ಲಿ ಪಜಲ್‌ ತುಂಡುಗಳನ್ನು ಜೋಡಿಸಲಾಗಿರುತ್ತದೆ. ಮೇಜಿನ ಮೇಲ್ಭಾಗದಲ್ಲಿ ಚಾಕು ಇರುವ ಪಜಲ್‌ ತುಂಡಿರುತ್ತದೆ. ಅದನ್ನು ಮೇಜಿನ ಕೆಳಭಾಗಕ್ಕೆ ತಂದು ಹೊರತೆಗೆಯಬೇಕು. ಇದರ ಮಧ್ಯೆ ಸಿಗುವ ಪಜಲ್‌ ತುಂಡುಗಳನ್ನು ಪಕ್ಕಕ್ಕೆ ಸರಿಸುತ್ತಾ, ಚಾಕು ಇರುವ ತುಂಡನ್ನು ಕೆಳಭಾಗಕ್ಕೆ ತರಬೇಕು. ಈ ವೇಳೆ, ಪಜಲ್‌ ತುಂಡುಗಳನ್ನು ತಿರುಗಿಸುವಂತಿಲ್ಲ ಮತ್ತು ಸ್ಥಳಾಂತರಿಸುವಂತಿಲ್ಲ. ಟಾಸ್ಕ್‌ ಪೂರ್ಣಗೊಳಿಸಿ ಹಗ್ಗವನ್ನು ಮೊದಲು ಕತ್ತರಿಸುವ ಸ್ಪರ್ಧಿ ವಿನ್ನರ್‌ ಆದಂತೆ. ಇದು ಆಟದ ನಿಯಮವಾಗಿತ್ತು.

ಈ ಟಾಸ್ಕ್‌ನಲ್ಲಿ ಧನುಷ್‌ ಗೆಲ್ತಾರೆ. ಆದರೆ, ಆಟದ ವಿಚಾರವಾಗಿ ಬಿಗ್‌ ಬಾಸ್‌ ಪ್ರಶ್ನೆಯೊಂದನ್ನು ಮುಂದಿಟ್ಟಿದ್ದಾರೆ. ಪಜಲ್‌ ತುಂಡನ್ನು ಸರಿಸಬೇಕಿರುವ ಮಾನದಂಡದ ಪ್ರಕಾರ, ಚಾಕು ಇರುವ ಪಜಲ್‌ ತುಂಡನ್ನು ಹೊರಗೆ ತೆಗೆಯಲಾಗಿದೆಯೇ ಎಂದು ಬಿಗ್‌ ಬಾಸ್‌ ಪ್ರಶ್ನೆ ಮಾಡ್ತಾರೆ. ಚಾಕು ಇರುವ ತುಂಡನ್ನು ಹೊರತೆಗೆಯುವ ಭರದಲ್ಲಿ ಧನುಷ್‌ ಯಡವಟ್ಟು ಮಾಡಿಕೊಂಡಿರುವಂತೆ ಕಾಣುತ್ತಿದೆ.

ಹಾಗಾದ್ರೆ, ಧನುಷ್‌ ಮೋಸದ ಆಟ ಆಡಿ ಗೆದ್ರಾ? ಅವರೇ ಮನೆಯ ಕೊನೆಯ ಕ್ಯಾಪ್ಟನ್‌ ಆಗಿ ಫಿನಾಲೆಗೆ ಮೊದಲ ಎಂಟ್ರಿ ಕೊಡ್ತಾರಾ? ಅಥವಾ ಕ್ಯಾಪ್ಟನ್ಸಿ ಸ್ಥಾನ ಅವರ ಕೈತಪ್ಪುತ್ತಾ ಎಂಬುದನ್ನು ಕಾದುನೋಡಬೇಕಿದೆ.

Share This Article