`ಕಾಂತಾರ’ ಚಿತ್ರದ ಹಾಡನ್ನ ಕನ್ನಡದಲ್ಲಿ ಹಾಡಿದ ಹಿಂದಿ ನಟಿ ತೇಜಸ್ವಿ

Public TV
1 Min Read

ಹಿಂದಿ ಕಿರುತೆರೆಯ `ಬಿಗ್ ಬಾಸ್’ 15ರ (Bigg Boss Hindi) ವಿನ್ನರ್ ಆಗಿರುವ ತೇಜಸ್ವಿ ಪ್ರಕಾಶ್ (Tejasswi Prakash) ಅವರು ಪ್ರಸ್ತುತ `ನಾಗಿನ್ 6’ರಲ್ಲಿ (Naagin 6) ನಟಿಸುತ್ತಿದ್ದಾರೆ. ಇದೀಗ ಹಿಂದಿ ನಟಿ ಕನ್ನಡದಲ್ಲಿ ಹಾಡಿರೋದ್ದಕ್ಕೆ ಕನ್ನಡಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕಾಂತಾರ (Kantara) ಸಿನಿಮಾದ ಹಾಡನ್ನ ನಟಿ ತೇಜಸ್ವಿ ಹಾಡಿದ್ದಾರೆ.

 

View this post on Instagram

 

A post shared by Tejasswi Prakash (@tejasswiprakash)

ಬಾಲಿವುಡ್ (Bollywood) ನಟಿ ತೇಜಸ್ವಿ ಪ್ರಕಾಶ್ ಅವರು ತಾವೇ ಹಾಡಿರುವ ರಿಷಬ್ ಶೆಟ್ಟಿ (Rishab Shetty) ನಿರ್ದೇಶನದ, ನಟನೆಯ ‘ಕಾಂತಾರ’ ಸಿನಿಮಾದ ಹಾಡೊಂದನ್ನು ಏಕಾಏಕಿ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿ ಆಶ್ಚರ್ಯ ಮೂಡಿಸಿದ್ದಾರೆ. ತೇಜಸ್ವಿಯ ಹಾಡು ಕೇಳಿ ಕನ್ನಡಿಗರು ಮೆಚ್ಚಿದ್ದಾರೆ. `ಕರುಮದ ಕಲ್ಲನು’ ಎನ್ನುವ ಹಾಡನ್ನು ತೇಜಸ್ವಿ ಹಾಡಿ ಸೈ ಎನಿಸಿಕೊಂಡಿದ್ದಾರೆ.

 

View this post on Instagram

 

A post shared by Tejasswi Prakash (@tejasswiprakash)

`ಕರುಮದ’ ಕಲ್ಲನು ಎನ್ನುವ ಕನ್ನಡದ ಹಾಡನ್ನು ತೇಜಸ್ವಿ ಅವರು ಹಾಡಿದ ಪರಿ ಅನೇಕರಿಗೆ ಇಷ್ಟ ಆಗಿದೆ. ಸೆಲೆಬ್ರಿಟಿಗಳಿಂದ ಸಾಮಾನ್ಯ ಜನರವರೆಗೆ ಅನೇಕರು ಈ ಹಾಡನ್ನು ಮೆಚ್ಚಿದ್ದಾರೆ. ಅಷ್ಟೇ ಅಲ್ಲದೆ ತೇಜ ಅವರ ವಿಥೌಟ್ ಮೇಕಪ್ ಲುಕ್ ಕೂಡ ಅನೇಕರ ಪ್ರಶಂಸೆಗೆ ಪಾತ್ರವಾಗಿದೆ. ಹಾಡು ಹಾಡಿರುವ ವಿಡಿಯೋವನ್ನು ಅಪ್‌ಲೋಡ್ ಮಾಡಿರುವ ತೇಜಸ್ವಿ ಅವರು ಇದರ ಸಾಹಿತ್ಯವನ್ನು ಇಂಗ್ಲಿಷ್‌ನಲ್ಲಿ ಬರೆದಿದ್ದಾರೆ. ಇದನ್ನೂ ಓದಿ: ಮತ್ತೆ ಕಿರುತೆರೆಗೆ ಮರಳಿದ ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ

 

View this post on Instagram

 

A post shared by Karan Kundrra (@kkundrra)

ಬಿಗ್ ಬಾಸ್‌ನಲ್ಲಿ (Bigg Boss) ತೇಜಸ್ವಿ ಅವರು ತಮ್ಮ ಸಹಸ್ಪರ್ಧಿ ಕರಣ್ ಕುಂದ್ರಾ (Karan Kundra) ಜೊತೆ ಪ್ರೀತಿ ಚಿಗುರಿತ್ತು. ಸದ್ಯದಲ್ಲೇ ಈ ಜೋಡಿ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರು ಈಗ ಬೇರೇ ಬೇರೆ ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *