ಡ್ರೋನ್ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ- ಫೇಕ್ ಪ್ರಮೋಟರ್ ವಿರುದ್ಧ ವಿನಯ್ ಕಿಡಿ

Public TV
2 Min Read

‘ಬಿಗ್ ಬಾಸ್ ಸೀಸನ್ 10’ರ ಸ್ಪರ್ಧಿ (Bigg Boss Kannada 10) ವಿನಯ್ ಗೌಡ (Vinay Gowda) ಅವರು ಸೋಷಿಯಲ್ ಮೀಡಿಯಾ ಫೇಕ್ ಪ್ರಮೋಟರ್ ಮೇಲೆ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಮಾಡದ ತಪ್ಪಿಗೆ ತನ್ನ ವಿರುದ್ಧ ಪಿತೂರಿ ಮಾಡಿದವರಿಗೆ ವಿಡಿಯೋ ಶೇರ್ ಮಾಡುವ ಮೂಲಕ ಉತ್ತರ ನೀಡಿದ್ದಾರೆ. ಇದನ್ನೂ ಓದಿ:ದುಬಾರಿ ಕಾರು ಖರೀದಿಸಿದ ರಕ್ಷಕ್- ದುಡ್ಡು ಎಲ್ಲಿಂದ ಬಂತು ಎಂದ ನೆಟ್ಟಿಗರು

ದೊಡ್ಮನೆಯಲ್ಲಿ ನೇರ ನುಡಿ ಮೂಲಕ ಗಮನ ಸೆಳೆದ ವಿನಯ್ ಗೌಡ (Vinay Gowda) ಈಗ ಫೇಕ್ ಸುದ್ದಿ ಪ್ರಮೋಟ್ ಮಾಡಿದವನಿಗೆ ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡಿದ್ದಾರೆ. ಖಾಸಗಿ ಸೋಷಿಯಲ್ ಮೀಡಿಯಾ ಪೇಜ್‌ವೊಂದು ಡ್ರೋನ್ ಪ್ರತಾಪ್ (Drone Prathap) ಬಗ್ಗೆ ವಿನಯ್ ಕೆಟ್ಟದಾಗಿ ಮಾತನಾಡಿದ್ದಾರೆ ಎಂದೇ ಬರೆಯಲಾಗಿತ್ತು. ಇತ್ತೀಚೆಗೆ ಇನ್ಸ್ಟಾಗ್ರಾಂ ಲೈವ್‌ಗೆ ವಿನಯ್ ಬಂದಿದ್ದರು. ಆಗ ಪ್ರತಾಪ್ ಕುರಿತು ಕೆಟ್ಟ ಮಾತುಗಳನ್ನಾಡಿದ್ದಾರೆ ಎಂದೇ ಉಲ್ಲೇಖಿಸಿದ್ದರು. ಅದಕ್ಕೆ ವಿನಯ್ ಈಗ ಫುಲ್ ಆಗಿದ್ದಾರೆ.

ಪ್ರತಾಪ್ (Drone Prathap) ಬಗ್ಗೆ ನಾನು ಏನೂ ಮಾತನಾಡಿಯೇ ಇಲ್ಲ. ಆದರೂ ಏನೇನೋ ಹಾಕುವುದು ಎಷ್ಟು ಸರಿ ಹೇಳಿ. ಸುದ್ದಿ ಇಲ್ವೇ ಇಲ್ಲ ಅಂತ ಆಗದೇ ಇರುವ ವಿಚಾರ ಹಾಕಿದ್ದು ತಪ್ಪು ಅಲ್ವಾ ಎಂದು ವಿನಯ್ ಗೌಡ ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ ಪ್ರಶ್ನೆ ಕೇಳಿದ್ದಾರೆ. ತಮ್ಮ ಅಭಿಮಾನಿಗಳಿಗೆ ಮನವಿಯೊಂದನ್ನು ಕೂಡ ವಿನಯ್ ಮಾಡಿಕೊಂಡಿದ್ದಾರೆ.

 

View this post on Instagram

 

A post shared by Vinay Gowda (@vinaygowdaactor)

ನನ್ನ ಸ್ನೇಹಿತರು, ನನ್ನ ಆತ್ಮೀಯರು, ನನ್ನ ಕಲ್ಟ್ ಅಭಿಮಾನಿಗಳು ಈ ಒಂದು ಫೇಕ್ ಪ್ರಮೋಟರ್ ವಿರುದ್ಧ ಹೋರಾಡಬೇಕಿದೆ. ಇಂತಹ ಪೇಕ್ ಪ್ರಮೋಟರ್ ವಿರುದ್ಧ ನಿಮ್ಮದೇ ರೀತಿಯಲ್ಲಿ ಉತ್ತರ ಕೊಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಅಂತಲೂ ವಿನಯ್ ಗೌಡ ಕೇಳಿಕೊಂಡಿದ್ದಾರೆ.

ದೊಡ್ಮನೆಯ ಆನೆ ಎಂದೇ ಫೇಮಸ್ ಆಗಿರುವ ವಿನಯ್ ಗೌಡಗೆ ಅಪಾರ ಅಭಿಮಾನಿಗಳ ಬಳಗವಿದೆ. ಅದರಲ್ಲೂ ವಿನಯ್‌ಗೆ ಫೀಮೇಲ್ ಫ್ಯಾನ್ಸ್ ಜಾಸ್ತಿ. ದೊಡ್ಮನೆ ಆಟದ ಬಳಿಕ ವಿನಯ್ ಯಾವ ಪ್ರಾಜೆಕ್ಟ್ ಮಾಡ್ತಾರೆ ಎಂದು ಅಭಿಮಾನಿಗಳ ಪ್ರಶ್ನೆಗೆ ಇತ್ತೀಚೆಗೆ ಇನ್ಸ್ಟಾಗ್ರಾಂ ಲೈವ್‌ನಲ್ಲಿ ಉತ್ತರಿಸಿದ್ದರು. ಇದನ್ನೂ ಓದಿ:ತಲೈವಾ ಜೊತೆ ಸಿನಿಮಾ ಮಾಡ್ತಿದ್ದಾರೆ ಬಾಲಿವುಡ್ ಖ್ಯಾತ ನಿರ್ಮಾಪಕ

ಸಹಸ್ಪರ್ಧಿ ಮೈಕೆಲ್ ಅಜಯ್ ಜೊತೆಗೂಡಿ ಹೊಸದೊಂದು ಕೆಫೆ ತೆರೆಯುತ್ತಿರುವುದಾಗಿ ತಿಳಿಸಿದ್ದರು. ಅದಕ್ಕಾಗಿ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಮಾರ್ಚ್ 7ರಂದು ತಮ್ಮ ಹುಟುಹಬ್ಬವಿದ್ದು, ಅಂದು ಕೆಲವೊಂದು ಘೋಷಣೆಗಳನ್ನು ಮಾಡುತ್ತಿರುವುದಾಗಿ ವಿನಯ್ ತಿಳಿಸಿದ್ದಾರೆ. ಹೊಸ ಸಿನಿಮಾದ ಅನೌನ್ಸ್‌ಮೆಂಟ್ ಕೂಡ ಮಾಡುವುದಾಗಿ ಹೇಳಿದ್ದರು.

ಲೈವ್‌ನಲ್ಲಿ ಅಭಿಮಾನಿಗಳು ಸ್ನೇಹಿತ್ ಒಡನಾಟದ ಬಗ್ಗೆ ಕೇಳಿದ್ದರು. ಸ್ನೇಹಿತ್ ನನ್ನ ಬ್ರದರ್ ಇದ್ದ ಹಾಗೆ. ಬೆಸ್ಟ್ ಫ್ರೆಂಡ್ ಕೂಡ. ತುಂಬಾ ಜೆನ್ಯೂನ್ ವ್ಯಕ್ತಿ. ಸ್ನೇಹಿತ್ ತುಂಬಾ ಸ್ವೀಟ್ ಹಾರ್ಟ್, ನನಗೆ ತುಂಬಾ ಸಪೋರ್ಟ್ ಮಾಡಿದ್ದಾರೆ ಎಂದು ವಿನಯ್ ಮಾತನಾಡಿದ್ದರು.

ಬಿಗ್ ಬಾಸ್‌ನಿಂದ ಬಂದ್ಮೇಲೆ ವಿನಯ್‌ಗೆ ಕನ್ನಡದ ಜೊತೆ ಪರಭಾಷೆಗಳಿಂದ ಕೂಡ ಬೇಡಿಕೆ ಶುರುವಾಗಿದೆ. ಮೂಲಗಳ ಪ್ರಕಾರ, ಕನ್ನಡ ಸಿನಿಮಾಗಳ ಜೊತೆ ತೆಲುಗು, ತಮಿಳಿನಲ್ಲಿಯೂ ವಿನಯ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜನಾ? ಕಾದುನೋಡಬೇಕಿದೆ.

Share This Article