ಸಂಪತ್ ಪತ್ನಿ 5 ತಿಂಗಳ ಗರ್ಭಿಣಿ- ಸಹನಟನ ನೆನೆದು ಕಣ್ಣೀರಿಟ್ಟ ವೈಷ್ಣವಿ

Public TV
2 Min Read

ಕಿರುತೆರೆಯ ಜನಪ್ರಿಯ ಸೀರಿಯಲ್ ‘ಅಗ್ನಿಸಾಕ್ಷಿ’ (Agnisakshi) ಖ್ಯಾತಿಯ ನಟ ಸಂಪತ್ ಜಯರಾಮ್ (Sampath Jayram) ಇತ್ತೀಚಿಗೆ ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು.  ರಾಜೇಶ್ ಧ್ರುವ (Rajesh Druva) ಅವರು ಸಂಪತ್ ಸಾವಿನ ಬಗ್ಗೆ ಸಂತಾಪ ಸೂಚಿಸಿದ್ದರು. ಈ ಬೆನ್ನಲ್ಲೇ ನಟಿ ವೈಷ್ಣವಿ ಗೌಡ (Vaishnavi Gowda) ಕೂಡ ಸಹನಟನ ಬಗ್ಗೆ ಮಾತನಾಡಿದ್ದಾರೆ.

‘ಅಗ್ನಿಸಾಕ್ಷಿ’ ಆರು ವರ್ಷಗಳ ಕಾಲ ಟಿವಿ ಪ್ರೇಕ್ಷಕರಿಗೆ ರಂಜಿಸಿತ್ತು. ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಅವರ ಅಣ್ಣನ (Brother) ಪಾತ್ರದಲ್ಲಿ ಸಂಪತ್ ಜಯರಾಮ್ ನಟಿಸಿದ್ದರು. ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಸಂಪತ್ ಜಯರಾಮ್ ಸಾವಿನ ಬಗ್ಗೆ ನಟಿ ವೈಷ್ಣವಿ ಮಾತನಾಡಿದ್ದಾರೆ.

ಸಂಪತ್ ಸೆಟ್‌ನಲ್ಲಿ ಯಾವಾಗಲೂ ನಗುತ್ತಿದ್ದರು ಮತ್ತು ಇತರರನ್ನು ನಗಿಸುತ್ತಿದ್ದರು. ಅವರು ಧಾರಾವಾಹಿಯಲ್ಲಿ ನನ್ನ ಸಹೋದರನ ಪಾತ್ರ ನಿರ್ವಹಿಸಿದ್ದರು. ನಮ್ಮಿಬ್ಬರ ಕಾಂಬಿನೇಷನ್ ದಿನಾಲೂ ಇರುತ್ತಿರಲಿಲ್ಲ. ಆದರೆ, ಇದ್ದಾಗೆಲ್ಲ ಅವರು ಖುಷಿಯಿಂದ ಮಾತನಾಡುತ್ತಿದ್ದರು. ಜೀವನದ ಬಗ್ಗೆ ಅವರು ಎಂದಿಗೂ ದೂರಿಲ್ಲ. ಸೆಟ್‌ನಲ್ಲಿ ಅವರು ಯಾವಾಗಲೂ ಬೇಸರದಲ್ಲಿ ಇದ್ದಿದ್ದನ್ನು ನೋಡಿಲ್ಲ ಎಂದು ವೈಷ್ಣವಿ ಗೌಡ ಹೇಳಿದ್ದಾರೆ. ಇದನ್ನೂ ಓದಿ:ಅಗತ್ಯವಿತ್ತು, ಲಿಪ್ ಲಾಕ್ ಮಾಡಿದೆ : ಅಮಲಾ ಪೌಲ್ ಬೋಲ್ಡ್ ಮಾತು

 

View this post on Instagram

 

A post shared by Sampath J Ram (@sampath.jram)

‘ಅಗ್ನಿಸಾಕ್ಷಿ’ ಕೊನೆಗೊಂಡಾಗಿನಿಂದ ಸಂಪತ್‌ನ ಭೇಟಿ ಆಗಿರಲಿಲ್ಲ. ಅವರು ನನ್ನನ್ನು ಪಾರ್ಟಿ ಮತ್ತು ಮದುವೆಗೆ ಕರೆದಿದ್ದರು. ಆದರೆ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದ ಕಾರಣ ನಾನು ಅಲ್ಲಿಗೆ ಹೋಗಲು ಸಾಧ್ಯವಾಗಿರಲಿಲ್ಲ. ನಾನು ಕಾಲ್‌ನಲ್ಲಿ ಮಾತನಾಡಿ ಅವರಿಗೆ ಶುಭಾಶಯ ತಿಳಿಸಿದ್ದೆ. ಸಂಪತ್‌ಗೆ ಮದುವೆಯಾಗಿ ಒಂದು ವರ್ಷವೂ ಆಗಿಲ್ಲ. ನನಗೆ ತಿಳಿದಿರುವ ಪ್ರಕಾರ ಅವರ ಪತ್ನಿ ಐದು ತಿಂಗಳ ಗರ್ಭಿಣಿ. ಹೀಗಿರುವಾಗ ಅವರಿಗೆ ಯಾವ ವಿಚಾರ ಆತ್ಮಹತ್ಯೆಗೆ ಪ್ರೇರೇಪಿಸಿತೋ ಗೊತ್ತಿಲ್ಲ ಎಂದು ಸಹನಟ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಬಿಗ್‌ ಬಾಸ್‌ ಬಳಿಕ ನಟಿ ವೈಷ್ಣವಿ ಗೌಡ ಅವರು ʻಸೀತಾರಾಮʼ ಸೀರಿಯಲ್‌ ಮೂಲಕ ಮತ್ತೆ ಕಿರುತೆರೆಗೆ ಬರುತ್ತಿದ್ದಾರೆ. ನಾಯಕಿಯಾಗಿ ಹೊಸ ಬಗೆಯ ಕಥೆ ಜೊತೆ ಬರುತ್ತಿದ್ದಾರೆ.

Share This Article