ಅಭಿಮಾನಿಗಳಿಗೆ ಶಾಕ್ ಕೊಟ್ಟ ಬಿಗ್ ಬಾಸ್ ಖ್ಯಾತಿಯ ಕಾರ್ತಿಕ್-ನಮ್ರತಾ

Public TV
1 Min Read

ಬಿಗ್ ಬಾಸ್ (Bigg Boss) ಮನೆಯಲ್ಲಿ ಸಂಗೀತಾ ದೂರವಾದ ನಂತರ ಕಾರ್ತಿಕ್ ಮಹೇಶ್ (Karthik Mahesh) ಅವರಿಗೆ ಹತ್ತಿರವಾದವರು ನಮ್ರತಾ (Namratha Gowda). ಈ ಜೋಡಿಯ ಸ್ನೇಹ ಬಿಗ್ ಬಾಸ್ ಮನೆಯಲ್ಲಿ ಇರುವತನಕ ಹಾಗೆಯೇ ಇತ್ತು. ಬಿಗ್ ಬಾಸ್ ಮನೆಯಿಂದ ಆಚೆ ಬಂದ ಮೇಲೂ ಅದು ಮುಂದುವರೆದಿದೆ.

ಸ್ನೇಹಿತ್ ನಿಂದ ನಮ್ರತಾ ದೂರವಾದ ನಂತರ ಕಾರ್ತಿಕ್ ಸ್ನೇಹ ನಮ್ರತಾಗೆ ಸಿಕ್ಕಿತ್ತು. ಹಾಗಾಗಿ ಈ ಜೋಡಿಯನ್ನು ಲವ್ ಬರ್ಡ್ಸ್ ಅಂತೆಲ್ಲ ಅಭಿಮಾನಿಗಳು ಕರೆದರು. ಅದರಲ್ಲೂ ಇತ್ತೀಚೆಗೆ ಕಾರ್ತಿಕ್ ಮದುವೆ ಬಗ್ಗೆ ಅವರ ತಾಯಿ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿರೋದ್ರಿಂದ ಎಲ್ಲೆಲ್ಲೂ ಕಾರ್ತಿಕ್ ಮದುವೆ ವಿಚಾರ ಚರ್ಚೆಯಾಗುತ್ತಿದೆ.

ನಿನ್ನೆಯಷ್ಟೇ ನಮ್ರತಾ ಮತ್ತು ಕಾರ್ತಿಕ್ ಜೊತೆಗಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ಸೇಲ್ ಆದವು. ಅದರಲ್ಲೂ ಇಬ್ಬರೂ ಮದುವೆ (Marriage) ಗೆಟಪ್ ನಲ್ಲಿ ಇರುವುದರಿಂದ ಈ ಜೋಡಿ ಸದ್ದಿಲ್ಲದೇ ಹಸೆಮಣೆ ಏರಿದ್ದಾರೆ ಎಂದೂ ಸುದ್ದಿ ಆಗಿತ್ತು.

ನಮ್ರತಾ ಮತ್ತು ಕಾರ್ತಿಕ್ ಪಕ್ಕಾ ಸಂಪ್ರದಾಯಿಕ ಉಡುಪು, ಮದುವೆ ಗೆಟಪ್, ಫೋಟೋಗೆ ಪೋಸ್ ಕೊಟ್ಟಿರುವ ರೀತಿ ಒಂದು ರೀತಿಯಲ್ಲಿ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಹಾಗಾಗಿ ಕೆಲವರು ಅದೇ ಶಾಕ್ ನಲ್ಲಿ ಹೊಸ ಜೀವನಕ್ಕೆ ಕಾಲಿಡುತ್ತಿರುವ ಜೋಡಿಗೆ ಶುಭಾಶಯ ಎಂದೆಲ್ಲ ಪೋಸ್ಟ್ ಮಾಡಿದ್ದರು.

 

ಅಸಲಿಯ ಕಥೆಯೇ ಬೇರೆ ಆಗಿತ್ತು. ಆಭರಣ ಜಾಹೀರಾತುವೊಂದಕ್ಕೆ ಈ ಜೋಡಿ ಪೋಸ್ ನೀಡಿದ್ದಾರೆ. ಆ ಜಾಹೀರಾತಿಗಾಗಿ ಈ ಫೋಟೋ ಶೂಟ್ ನಡೆದಿದೆ. ನಂತರ ಕಾರ್ತಿಕ್ ಈ ಕುರಿತಂತೆ ಸ್ಪಷ್ಟನೆ ನೀಡಿ, ಅಭಿಮಾನಿಗಳ ನಿಟ್ಟುಸಿರಿಗೆ ಕಾರಣರಾಗಿದ್ದಾರೆ.

Share This Article