ಲೆನ್ಸ್ ಬಳಕೆಯಿಂದ ನಟಿ ಯಡವಟ್ಟು- ಜಾಸ್ಮಿನ್ ಕಣ್ಣಿನ ಕಾರ್ನಿಯಾಗೆ ಹಾನಿ

Public TV
1 Min Read

ನ್ನಡದ ‘ಕರೋಡ್‌ ಪತಿ’ ನಟಿ, ಹಿಂದಿ ‘ಬಿಗ್ ಬಾಸ್’ (Bigg Boss) ಖ್ಯಾತಿಯ ಜಾಸ್ಮಿನ್ ಭಾಸಿನ್‌ಗೆ (Jasmin Bhasin) ಈಗ ಕಣ್ಣಿನ ಸಮಸ್ಯೆ ಎದುರಾಗಿದೆ. ಕಣ್ಣಿಗೆ ಲೆನ್ಸ್ ಬಳಸಿ ನಟಿ ಜಾಸ್ಮಿನ್ ಯಡವಟ್ಟು ಮಾಡಿಕೊಂಡಿದ್ದಾರೆ. ಇದರಿಂದ ಕಣ್ಣು ಕಳೆದುಕೊಳ್ತಾರಾ ಎಂಬ ಆತಂಕದಲ್ಲಿದ್ದಾರೆ ನಟಿಯ ಫ್ಯಾನ್ಸ್. ಇದನ್ನೂ ಓದಿ:ಡಿವೋರ್ಸ್ ಬೆನ್ನಲ್ಲೇ ಅನನ್ಯಾ ಪಾಂಡೆ ಜೊತೆ ಹಾರ್ದಿಕ್ ಲವ್ವಿ ಡವ್ವಿ

ನಾನು ಜುಲೈ 17ರಂದು ಸಮಾರಂಭಕ್ಕಾಗಿ ದೆಹಲಿಯಲ್ಲಿದ್ದೆ. ಅದಕ್ಕಾಗಿ ಸಿದ್ಧಳಾಗುತ್ತಿದ್ದೆ. ನನ್ನ ಲೆನ್ಸ್‌ನಲ್ಲಿ ಏನು ಸಮಸ್ಯೆ ಆಗಿತ್ತೋ ಗೊತ್ತಿಲ್ಲ. ಅದನ್ನು ಧರಿಸಿದ ನಂತರ ನನ್ನ ಕಣ್ಣುಗಳಿಗೆ ನೋವಾಗಲು ಪ್ರಾರಂಭವಾಯಿತು. ನೋವು ಕ್ರಮೇಣ ಹೆಚ್ಚಾಯಿತು. ನಾನು ವೈದ್ಯರ ಬಳಿಗೆ ಧಾವಿಸಲು ಬಯಸಿದ್ದೆ, ಆದರೆ ಕೆಲಸ ಮುಖ್ಯ ಅಂತ ನಾನು ಈವೆಂಟ್‌ಗೆ ಹಾಜರಾಗಲು ನಿರ್ಧರಿಸಿದೆ ಎಂದು ಜಾಸ್ಮಿನ್ ಮಾತನಾಡಿದ್ದಾರೆ.

ನಾನು ಈವೆಂಟ್‌ನಲ್ಲಿ ಸನ್‌ಗ್ಲಾಸ್ ಧರಿಸಿದ್ದೆ. ಕೆಲ ಹೊತ್ತಿನ ನಂತರ ನನಗೆ ಏನು ನೋಡಲು ಸಾಧ್ಯವಾಗಲಿಲ್ಲ. ನಂತರ ನಾನು ಕಣ್ಣಿನ ವೈದ್ಯರನ್ನು ಭೇಟಿ ಮಾಡಿದೆ. ಅವರು ನನ್ನ ಕಣ್ಣಿನ ಕಾರ್ನಿಯಾಗೆ ಹಾನಿಗೊಳಗಾಗಿವೆ ಎಂದು ಕಣ್ಣುಗಳಿಗೆ ಬ್ಯಾಂಡೇಜ್ ಹಾಕಿದರು. ಗುಣಮುಖವಾಗಲು 4ರಿಂದ 5 ದಿನಗಳ ಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದರು.

ನಾನು ನನ್ನ ಕಣ್ಣುಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ವೈದ್ಯರು ಹೇಳಿದ್ದಾರೆ. ಸದ್ಯ ನಾನು ನೋಡಲು ಸಾಧ್ಯವಿಲ್ಲ. ನಾನು ಮಲಗಲು ಸಹ ಕಷ್ಟಪಡುತ್ತಿದ್ದೇನೆ. ಕೆಲವು ದಿನಗಳಲ್ಲಿ ಚೇತರಿಸಿಕೊಳ್ಳುತ್ತೇನೆ ಮತ್ತು ಕೆಲಸಕ್ಕೆ ಮರಳುತ್ತೇನೆ ಎಂದು ನಟಿ ಜಾಸ್ಮಿನ್ ಭಾಸಿನ್ ಹೇಳಿದ್ದಾರೆ.

ಅಂದಹಾಗೆ, ಜಾಸ್ಮಿನ್ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕೋಮಲ್ ನಟನೆಯ ‘ಕರೋಡ್ ಪತಿ’ ಸಿನಿಮಾದಲ್ಲಿ ನಟಿಸಿದ್ದರು.

Share This Article