ದರ್ಶನ್ ಪ್ರಕರಣ: ನೋ ಕಾಮೆಂಟ್ಸ್ ಎಂದ ‘ಬಿಗ್ ಬಾಸ್’ ಖ್ಯಾತಿಯ ಇಶಾನಿ

Public TV
1 Min Read

‘ಬಿಗ್ ಬಾಸ್’ (Bigg Boss Kannada) ಖ್ಯಾತಿಯ ಇಶಾನಿಗೆ ಇಂದು (ಸೆ.13) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬರ್ತ್‌ಡೇಯಂದು ಕೆಟ್ಟ ಕಾಮೆಂಟ್ ಮಾಡುವವರಿಗೆ ಟಕ್ಕರ್ ಕೊಡುವಂತಹ ಆಲ್ಬಂ ಸಾಂಗ್ ಅನ್ನು ರಿಲೀಸ್ ಮಾಡಿದ್ದಾರೆ. ಈ ವೇಳೆ, ದರ್ಶನ್ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ (Darshan) ಕೇಸ್‌ ಕುರಿತು ನೋ ಕಾಮೆಂಟ್ಸ್ ಎಂದಿದ್ದಾರೆ.

ಕೆಟ್ಟ ಕಾಮೆಂಟ್ ಮಾಡುವವರ ಬಗ್ಗೆ ಮತ್ತು ದರ್ಶನ್ ಪ್ರಕರಣದ ಬಗ್ಗೆ ಇಶಾನಿ ಮಾತನಾಡಿ, ಎಲ್ಲಾ ಹೆಣ್ಣು ಮಕ್ಕಳು ಸ್ಟ್ರಾಂಗ್ ಆಗಿ ಇರೋದಿಲ್ಲ ಕೆಟ್ಟದಾಗಿ ಕಾಮೆಂಟ್ ಮಾಡಬೇಡಿ. ನಮಗೆ ಎಲ್ಲೂ ಸೇಫ್ ಜಾಗ ಇಲ್ಲ. ಅದಕ್ಕೆ ಈ ಹಾಡಿನ ಮೂಲಕ ಬೋಲ್ಡ್ ಆಗಿ ಟಕ್ಕರ್ ಕೊಟ್ಟಿದ್ದೀನಿ ಎಂದಿದ್ದಾರೆ. ಇದನ್ನೂ ಓದಿ:ಬಾಲಿ ಬ್ಯೂಟಿಗೆ ಬೆರಗಾದ ‘ಪಾರು’ ನಟಿ

ದರ್ಶನ್ ಕುರಿತು ಎದುರಾದ ಪ್ರಶ್ನೆಗೆ ನೋ ಕಾಮೆಂಟ್ಸ್ ಎಂದಿದ್ದಾರೆ. ಕೆಟ್ಟ ಮೆಸೇಜ್ ಬಂದಾಗ ಇಗ್ನೋರ್ ಮಾಡೋಕೆ ಆಗಲ್ಲ. ದರ್ಶನ್ ಬಗ್ಗೆ ಮಾತನಾಡೋಕೆ ನಾನು ಏನು ಅಲ್ಲ. ನಾನು ತುಂಬಾ ಎಮೋಷನಲ್ ಆಗಿಬಿಡ್ತೀನಿ. ಅದಕ್ಕೆ, ಏನು ಹೇಳೋಕೆ ಆಗೋದಿಲ್ಲ. ರೇಣುಕಾಸ್ವಾಮಿ ಫ್ಯಾಮಿಲಿ ಬಗ್ಗೆ ಹೇಳಬೇಕೆಂದರೆ, ಫ್ಯಾಮಿಲಿ ಈಸ್ ಫ್ಯಾಮಿಲಿ ಎಲ್ಲಾ ಸರಿ ಹೋಗಲಿ ಎಂದು ಮಾತನಾಡಿದ್ದಾರೆ.

ಈ ವೇಳೆ, ಕೇರಳದ ಹೇಮಾ ಕಮಿಟಿಯಂತೆ ಕನ್ನಡದಲ್ಲೂ ತರುವ ಬಗ್ಗೆ ನಟಿ ಪ್ರತಿಕ್ರಿಯಿಸಿ, ಎಲ್ಲರಿಗೂ ಈ ಥರಹ ಸಮಸ್ಯೆ ಇರುತ್ತದೆ. ನನಗೂ ಈ ಥರ ಎಫೆಕ್ಟ್ ಆಗಿದೆ. ಕಾಸ್ಟಿಂಗ್ ತುಂಬಾ ಅಸಹ್ಯ ಅನಿಸುತ್ತದೆ. ಇದಕ್ಕಾಗಿ ಒಂದು ಸಂಸ್ಥೆ ಮಾಡ್ತಿರೋದು ಒಳ್ಳೆಯದು. ನಾನು ಯಾವಾಗಲೂ ಆ ಸಂಸ್ಥೆ ಜೊತೆ ಗಟ್ಟಿಯಾಗಿ ನಿಲುತ್ತೇನೆ ಎಂದಿದ್ದಾರೆ.

Share This Article