ರಸ್ತೆ ಅಪಘಾತ – ದಿವ್ಯಾ ಸುರೇಶ್‌ಗೆ ಗಾಯ

Public TV
1 Min Read

ಬೆಂಗಳೂರು: ಬಿಗ್‌ ಬಾಸ್‌ ಖ್ಯಾತಿಯ ದಿವ್ಯಾ ಸುರೇಶ್‌ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ.

ಸೋಮವಾರ ದ್ವಿಚಕ್ರ ವಾಹನದಲ್ಲಿ ಲಸಿಕೆ ಪಡೆದು ಮನೆಗೆ ಮರಳುತ್ತಿದ್ದಾಗ ನಾಯಿ ಅಡ್ಡ ಬಂದಿದೆ. ಈ ವೇಳೆ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನದಿಂದ ನೆಲಕ್ಕೆ ಬಿದ್ದಿದ್ದಾರೆ. ಇದನ್ನೂ ಓದಿ: ತುಂಡುಡುಗೆ ತೊಟ್ಟ ಕ್ಲಾಸಿ ಲುಕ್‍ನಲ್ಲಿ ದಿವ್ಯಾ ಸುರೇಶ್

ಬಿದ್ದ ರಭಸಕ್ಕೆ ಕೆನ್ನೆ ಮತ್ತು ದವಡೆ ಭಾಗಕ್ಕೆ ಪೆಟ್ಟು ಬಿದ್ದಿದೆ. ಸದ್ಯ ಮನೆಯಲ್ಲಿ ದಿವ್ಯಾ ಸುರೇಶ್‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್​ಸ್ಟಾಗ್ರಾಮ್​ ಸ್ಟೇಟಸ್​ ಮೂಲಕ ದಿವ್ಯಾ ಈ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಇನ್‍ಸ್ಟಾ ಖಾತೆಯಿಂದ ಪತಿಯ ಹೆಸರು ಕೈಬಿಟ್ಟ ನಟ ಚಿರಂಜೀವಿ ಪುತ್ರಿ ಶ್ರೀಜಾ

ಡಿಸೆಂಬರ್‌ 28 ರಂದು ನೈಟ್ ಕರ್ಫ್ಯೂ ವೇಳೆ ಎಂಜಿ ರಸ್ತೆಯಲ್ಲಿ ಅವರು ಓಡಾಡುತ್ತಿದ್ದರು. ಈ ವೇಳೆ ಪೊಲೀಸರು ದಿವ್ಯಾ ಮತ್ತು ಸ್ನೇಹಿತರನ್ನು ಮನೆಗೆ ಕಳುಹಿಸಿಲು ಮುಂದಾದಾಗ ವಾಹಿನಿಗಳ ಕ್ಯಾಮೆರಾ ನೋಡಿ ಹೈಡ್ರಾಮಾ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *