ನಿರ್ದೇಶನದತ್ತ ‘ಬಿಗ್ ಬಾಸ್’ ಖ್ಯಾತಿಯ ಚಂದನ್ ಕುಮಾರ್

Public TV
1 Min Read

‘ಬಿಗ್ ಬಾಸ್’ ಖ್ಯಾತಿಯ ಚಂದನ್ ಕುಮಾರ್ (Chandan Kumar) ನಟನೆಯ ಮೂಲಕ ಗಮನ ಸೆಳೆದಿದ್ದರು. ಈಗ ನಿರ್ದೇಶನದತ್ತ ಚಂದನ್ ಮುಖ ಮಾಡಿದ್ದಾರೆ. ತಮ್ಮ ಹುಟ್ಟುಹಬ್ಬದಂದು (ಸೆ.11) ಹೊಸ ಸಿನಿಮಾದ ಅಪ್‌ಡೇಟ್ ಹಂಚಿಕೊಂಡಿದ್ದಾರೆ.

‘ಪ್ರೇಮ ಬರಹ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ನಾಯಕನಾಗಿ ಎಂಟ್ರಿ ಕೊಟ್ಟಿದ್ದ ಚಂದನ್, ‘ಫ್ಲರ್ಟ್’ (Flirt Kannada Film) ಎಂಬ ಸಿನಿಮಾಗೆ ನಟಿಸುವ ಜೊತೆಗೆ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಅದರ ಮೇಕಿಂಗ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

 

View this post on Instagram

 

A post shared by K A V I T H A (@iam.kavitha_official)

ಈ ಚಿತ್ರದಲ್ಲಿ ಅವಿನಾಶ್, ಹಿರಿಯ ನಟಿ ಶ್ರುತಿ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಚಂದನ್ ನಟಿಸುತ್ತಿರುವ 10ನೇ ಸಿನಿಮಾಗೆ ತಾವೇ ನಿರ್ದೇಶನ (Direction) ಮಾಡುವ ಮೂಲಕ ಹೊಸ ಹೆಜ್ಜೆ ಇಟ್ಟಿದ್ದಾರೆ. ಇದನ್ನೂ ಓದಿ:‘ಕೆಜಿಎಫ್‌ 2’ ಸಿಂಗರ್‌ ಜೊತೆ ಎಂಗೇಜ್‌ ಆದ ‘ಸಿಂಗಾರ ಸಿರಿಯೇ’ ಖ್ಯಾತಿಯ ಪ್ರಮೋದ್‌ ಮರವಂತೆ

ಇನ್ನೂ ಈ ಹಿಂದೆ ಲಕ್ಷ್ಮಿ ಬಾರಮ್ಮ, ಬಿಗ್ ಬಾಸ್ ಕನ್ನಡ, ಪರಭಾಷೆಯಲ್ಲೂ 2 ಸೀರಿಯಲ್‌ಗಳನ್ನು ಮಾಡಿದ್ದಾರೆ. ಕೆಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

Share This Article