ಡಿಬಾಸ್ ಹುಟ್ಟುಹಬ್ಬಕ್ಕೆ ‘ಬಿಗ್ ಬಾಸ್’ ಇಶಾನಿ ಸ್ಪೆಷಲ್ ಸಾಂಗ್ ರಿಲೀಸ್

Public TV
2 Min Read

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬದಂದು (ಫೆ.16) ‘ಬಿಗ್ ಬಾಸ್’ (Bigg Boss Kannada 10) ಖ್ಯಾತಿಯ ಇಶಾನಿ (Eshani) ವಿಶೇಷ ಗೀತೆಯನ್ನು ರಿಲೀಸ್ ಮಾಡಲಿದ್ದಾರೆ. ದರ್ಶನ್ (Darshan) ಕುರಿತಾದ ಗೀತೆ ಇದಾಗಿದ್ದು, ಹಾಡು ಅದ್ಭುತವಾಗಿ ಮೂಡಿ ಬಂದಿದೆ. ‘ಬಾಸ್’ (Boss) ಹಾಡು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ದರ್ಶನ್ ನಟಿಸಿದ ಅಷ್ಟು ಸಿನಿಮಾಗಳ ಹೆಸರು ಒಳಗೊಂಡಿರುವ ‘ಬಾಸ್’ ಎಂಬ ಸಾಂಗ್ ರಿಲೀಸ್ ಮಾಡಿದ್ದಾರೆ. ದರ್ಶನ್ ಕುರಿತು ಲಿರಿಕ್ಸ್ ಬರೆದು ಇಶಾನಿ ಹಾಡಿಗೆ ಧ್ವನಿಯಾಗಿದ್ದಾರೆ. ಎಎಸ್ ಪ್ರೊಡಕ್ಷನ್ ಅಡಿಯಲ್ಲಿ ಗಿರಿ ಗೌಡ ನಿರ್ದೇಶಿಸಿದ್ದಾರೆ. ಒಟ್ನಲ್ಲಿ ಇಶಾನಿ ಹಾಡಿಗೆ ಡಿಬಾಸ್ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಮೂಲಕ ಡಿಬಾಸ್ ಮೇಲಿನ ಅಭಿಮಾನವನ್ನು ಇಶಾನಿ ವ್ಯಕ್ತಪಡಿಸಿದ್ದಾರೆ.

 

View this post on Instagram

 

A post shared by Eshani (@eshanimusic)

ಫೆ.16ರಂದು ದರ್ಶನ್ ಅವರು ಆರ್‌ಆರ್ ನಗರದ ನಿವಾಸದಲ್ಲಿ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ದವಸ ಧಾನ್ಯಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಭಿಮಾನಿಗಳಿಗೆ ಈ ದಿನ ದರ್ಶನ್ ಸಮಯ ಮೀಸಲಿಟ್ಟಿದ್ದಾರೆ. ಇದನ್ನೂ ಓದಿ:ದಚ್ಚುಗೆ ಪ್ರೇಮ್ ಆ್ಯಕ್ಷನ್ ಕಟ್- ‘ಜೈ ಶ್ರೀರಾಮ್’ ಎಂದು ಗದೆ ಎತ್ತಿದ ಡಿಬಾಸ್

‘ಕಾಟೇರ’ (Katera) ಸಕ್ಸಸ್ ನಂತರ ದರ್ಶನ್ ಮತ್ತಷ್ಟು ಡಿಮ್ಯಾಂಡ್ ಜಾಸ್ತಿಯಾಗಿದೆ. ಎಂದೂ ಮಾಡಿರದ ಹೊಸ ಬಗೆಯ ಕಥೆಯನ್ನು ದರ್ಶನ್ ಆಯ್ಕೆ ಮಾಡ್ತಿದ್ದಾರೆ. ಕರಿಯ ನಿರ್ದೇಶಕ ಪ್ರೇಮ್, ಮಿಲನ ಖ್ಯಾತಿಯ ಪ್ರಕಾಶ್, ಕಾಟೇರ ನಿರ್ದೇಶಕನ ಜೊತೆ 2 ಸಿನಿಮಾ, ರಮೇಶ್ ಪಿಳ್ಳೈ, ಶೈಲಜಾ ನಾಗ್ ಮತ್ತು ಬಿ.ಸುರೇಶ, ಮೋಹನ್ ನಟರಾಜನ್, ಸೂರಪ್ಪ ಬಾಬು, ಸಚ್ಚಿದಾನಂದ ಇಂಡುವಾಳ, ಕೆ.ಮಂಜುನಾಥ್, ರಘುನಾಥ್ ಸೋಗಿ, ಮಹೇಶ್ ಸುಖಧರೆ, ರಾಘವೇಂದ್ರ ಹೆಗ್ಡೆ ಹೀಗೆ ಸಾಲು ಸಾಲು ನಿರ್ಮಾಪಕರು ದರ್ಶನ್‌ಗಾಗಿ ಸಿನಿಮಾ ಮಾಡಲು ಮುಂದೆ ಬಂದಿದ್ದಾರೆ. ದರ್ಶನ್ ಹುಟ್ಟುಹಬ್ಬದಂದು ಸಿನಿಮಾಗಳನ್ನು ಘೋಷಣೆ ಕೂಡ ಮಾಡಿದ್ದಾರೆ.

ದರ್ಶನ್ ಸಿನಿಮಾಗಳಿಗೆ ಬಂಡವಾಳ ಹಾಕಿದರೆ ಹಣಕ್ಕೆ ಮೋಸವಿಲ್ಲ ಎನ್ನುವ ಮಾತು ಮೊದಲಿನಿಂದಲೂ ಇದೆ. ಕಾಟೇರ ಗೆದ್ದ ನಂತರ ಈ ನಂಬಿಕೆ ಮತ್ತಷ್ಟು ಹೆಚ್ಚಾಗಿದೆ. ಹಾಗಾಗಿ ಸಾಲು ಸಾಲು ಸಿನಿಮಾಗಳು ಘೋಷಣೆ ಆಗಿವೆ. ಯಾವೆಲ್ಲ ಸಿನಿಮಾಗಳು, ಯಾವಾಗೆಲ್ಲ ಬರುತ್ತವೆ ಎನ್ನುವುದು ಕಾದು ನೋಡಬೇಕಿದೆ.

Share This Article