ಸ್ಯಾಂಡಲ್ವುಡ್ನ ಕಿಚ್ಚ ಸುದೀಪ್ ನಿರೂಪಣೆಯ, ಕನ್ನಡ ಕಿರುತೆರೆಯ ಅತಿ ದೊಡ್ಡ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-12ರ (BBK 12) ಆಟ ಆರಂಭವಾಗಿ ಎರಡೇ ವಾರಕ್ಕೆ ಬ್ರೇಕ್ ಬಿದ್ದಿದೆ. ಜಾಲಿವುಡ್ ಸ್ಟುಡಿಯೋಗೆ ಬೀಗ ಬಿದ್ದ ಹಿನ್ನೆಲೆ ಎಲ್ಲ ಸ್ಪರ್ಧಿಗಳನ್ನ ಈಗಲ್ಟನ್ ರೆಸಾರ್ಟ್ಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ಈಗಲ್ಟನ್ ರೆಸಾರ್ಟ್ನಿಂದಲೂ (Eagleton Resort) ಸ್ಪರ್ಧಿಗಳನ್ನ ಬೇರೆಗೆಡೆ ಶಿಫ್ಟ್ ಮಾಡಲು ತಯಾರಿ ನಡೆದಿದೆ.
ಮಂಗಳವಾರ ರಾತ್ರಿಯಿಂದಲೇ ಈಗಲ್ಟನ್ ರೆಸಾರ್ಟ್ನಲ್ಲಿ ದೊಡ್ಮನೆ ಸ್ಪರ್ಧಿಗಳು (Bigg Boss Contestants) ತಂಗಿದ್ದಾರೆ. ಅದಕ್ಕಾಗಿ 9 ರೂಮ್ಗಳನ್ನು ಬಿಗ್ ಬಾಸ್ ಬುಕ್ ಮಾಡಿಕೊಂಡಿತ್ತು. ಆದ್ರೆ ಇದಕ್ಕೂ ಮೊದಲೇ ಬೇರೆ ಕಾರ್ಯಕ್ರಮಕ್ಕೆ ರೆಸಾರ್ಟ್ ಬುಕ್ ಆಗಿರುವ ಕಾರಣ, ಸಂಜೆ 7 ಗಂಟೆ ಒಳಗೇ ಚೆಕ್ ಔಟ್ ಮಾಡುವಂತೆ ಸೂಚಿಸಲಾಗಿತ್ತು. ಆದ್ರೆ ಬಿಗ್ ಬಾಸ್ ಸಮಯಾವಕಾಶ ಕೇಳಿದ್ದು, ಕೆಲವೇ ಹೊತ್ತಿನಲ್ಲೇ 17 ಸ್ಪರ್ಧಿಗಳು ಬೇರೆಡೆಗೆ ಶಿಫ್ಟ್ ಮಾಡಲು ತಯಾರಿ ನಡೆದಿದೆ.
ಮೂಲಗಳ ಪ್ರಕಾರ, ದೇವನಹಳ್ಳಿ ಸಮೀಪದ ಗೋಲ್ಡನ್ ರೆಸಾರ್ಟ್ಗೆ ತೆರಳುವ ಸಾಧ್ಯತೆಯಿದೆ. ಅದಕ್ಕಾಗಿ 2 ಟಿಟಿ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಸ್ಪರ್ಧಿಗಳೂ ಕೂಡ ತಮ್ಮ ಲಗೇಜ್ಗಳನ್ನ ಪ್ಯಾಕ್ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.
ಬಿಗ್ಬಾಸ್ ಶೋ ನಡೆಯುತ್ತಿದ್ದ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಸ್ಟುಡಿಯೋಗೆ ಬೀಗ ಜಡಿಯಲಾಗಿದೆ. ಜಲ ಕಾಯಿದೆ, ವಾಯು ಕಾಯಿದೆಯಡಿ ಅನುಮತಿ ಪಡೆಯದೇ ಕಾರ್ಯಾಚರಣೆ ಮಾಡುತ್ತಿರುವ ಹಿನ್ನೆಲೆ ಮಾಲಿನ್ಯ ಇಲಾಖೆ ಇಲಾಖೆ ನೋಟಿಸ್ ನೀಡಿದ ಬೆನ್ನಲ್ಲೇ ತಾಲ್ಲೂಕು ಆಡಳಿತ ಬೀಗ ಜಡಿದಿದೆ.
ಹೀಗಾಗಿ ಬಿಗ್ಬಾಸ್ ಸ್ಪರ್ಧಿಗಳಾದ ಕಾವ್ಯಾ, ಗಿಲ್ಲಿ ನಟ, ಡಾಗ್ ಸತೀಶ್, ಚಂದ್ರಪ್ರಭ, ಅಭಿಶೇಕ್, ಅಶ್ವಿನಿ, ಮಂಜುಭಾಷಿಣಿ, ರಾಶಿಕಾ, ಕಾಖ್ರೊಚ್ ಸುಧಿ, ಮಲ್ಲಮ್ಮ, ಜಾಹ್ನವಿ, ಧನುಷ್ಗೌಡ, ಧೃವಂತ್, ಅಶ್ವಿನಿಗೌಡ, ರಕ್ಷಿತಾ ಶೆಟ್ಟಿ ಸೇರಿ ಎಲ್ಲರೂ ಸ್ಪರ್ಧಿಗಳು ಬಿಗ್ ಮನೆಯಿಂದ ಹೊರಬಂದಿದ್ದಾರೆ.