ಡಾಗ್ ಬ್ರೀಡರ್ ಸತೀಶ್ (Dog Breeder Satish) ಬಿಗ್‌ಬಾಸ್ (Bigg Boss) ಮನೆಯಿಂದ ರಾತ್ರೋರಾತ್ರಿ ಔಟ್ ಆಗಿದ್ದಾರೆ. ಮಿಡ್‌ವೀಕ್ ಎಲಿಮಿನೇಷನ್ ನಡೆದಿದ್ದು ಜನರ ವೋಟ್ ಹಾಗೂ ಮನೆಯವರ ವೋಟ್ ಕಡಿಮೆಯಾಗಿದ್ದಕ್ಕೆ ಸತೀಶ್ ಹೊರಬಂದಿದ್ದಾರೆ. 50 ಕೋಟಿ ರೂ. ಬೆಲೆಯ ಶ್ವಾನ ವಿಚಾರಕ್ಕೆ ಸುದ್ದಿಯಾಗಿದ್ದ ಸತೀಶ್ ಈಗ 100 ಕೋಟಿ ರೂ. ಶ್ವಾನವನ್ನು ಖರೀದಿಸಿ ತೋರಿಸುವುದಾಗಿ ಸವಾಲ್ ಎಸೆದಿದ್ದಾರೆ.
ಈ ಹಿಂದೆ ಸತೀಶ್ 50 ಕೋಟಿ ರೂ. ನಾಯಿಯನ್ನು ಸಾಕಿರುವ ವಿಚಾರಕ್ಕೆ ಸುದ್ದಿಯಾಗಿದ್ದರು. ಕಾಡುತೋಳ ಮತ್ತು ಕಾಕೇಶಿಯನ್ ಶೆಫರ್ಡ್ ಮಿಶ್ರಣದ ಕಡಬಾಮ್ ಒಕಾಮಿ ಎಂದು ಕರೆಯಲ್ಪಡುವ ನಾಯಿಯನ್ನ ಖರೀದಿಸಲು ಸುಮಾರು 50 ಕೋಟಿ ರೂ. ಖರ್ಚು ಮಾಡಿರೋದಾಗಿ ಹೇಳಿಕೊಂಡಿದ್ದರು. ಬಳಿಕ ಇವರ ಜೆಪಿ ನಗರದ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳಿಂದ ದಾಳಿ ನಡೆದಿತ್ತು. ಇದನ್ನೂ ಓದಿ: ಕಾಂತಾರ ಚಾಪ್ಟರ್ 1 ಬ್ಲಾಕ್‌ಬಸ್ಟರ್ ಹಿಟ್; 2 ವಾರದಲ್ಲಿ 717 ಕೋಟಿ ಕಲೆಕ್ಷನ್
ಈಗ ಬಿಗ್‌ಬಾಸ್ ಮನೆಯಿಂದ ಹೊರಬಂದ ಬಳಿಕ ಶೀಘ್ರದಲ್ಲೇ 100 ಕೋಟಿ ರೂ. ಬೆಲೆ ಬಾಳುವ ಶ್ವಾನವನ್ನ ಖರೀದಿಸುವುದಾಗಿ ಚಾಲೆಂಜ್ ಹಾಕಿದ್ದಾರೆ. ಜಾರಿ ನಿರ್ದೇಶನಾಲಯ ದಾಳಿ ಮಾಡಿದರೂ ನಾನು ನೋಡಿಕೊಳ್ಳುತ್ತೇನೆ. ಈಗ ನೂರು ಕೋಟಿ ನಾಯಿಯನ್ನು ಲಾಂಚ್ ಮಾಡುತ್ತೇನೆ. ಯಾರ್ ಕೇಸ್ ಹಾಕುತ್ತಾರೋ ಹಾಕಿಕೊಳ್ಳಲಿ ಎಂದು ಎಂದು ಪಬ್ಲಿಕ್‌ಟಿವಿಗೆ ನೀಡಿದ ಸಂದರ್ಶನದಲ್ಲಿ ಸತೀಶ್ ಹೇಳಿಕೊಂಡಿದ್ದಾರೆ.