ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಕಾಕ್ರೋಚ್ ಸುಧಿ (Cockroach Sudhi) ಎಂದೇ ಹೆಸರುಗಳಿಸಿರುವ ಸುಧಿ ತಮ್ಮ ಕಷ್ಟದ ದಿನಗಳನ್ನ ನೆನೆದು ಕಣ್ಣೀರಿಟ್ಟಿದ್ದಾರೆ. ಬಿಗ್‌ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಯಾಗಿದ್ದ ಸುಧಿ ಈ ವಾರ ಎಲಿಮಿನೇಟ್ ಆಗಿ ಮನೆಯಿಂದ ಹೊರಬಂದಿದ್ದಾರೆ.
ʻಪಬ್ಲಿಕ್ ಟಿವಿʼಗೆ ನೀಡಿದ ಸಂದರ್ಶನದಲ್ಲಿ ಹಳೆಯ ಕಥೆಗಳನ್ನ ಎಳೆಎಳೆಯಾಗಿ ಮೆಲುಕು ಹಾಕಿ ಕಣ್ಣೀರು ಸುರಿಸಿದ್ದಾರೆ. ಇದೀಗ ಎಲ್ಲವನ್ನೂ ಗಳಿಸಿರುವ ಸುಧಿ ಹಿಂದೆ ಒಂದು ತುತ್ತಿನ ಅನ್ನಕ್ಕೆ ಕಷ್ಟಪಡುತ್ತಿದ್ದ ಕಥೆ ಬಿಚ್ಚಿಟ್ಟಿದ್ದಾರೆ. ಮದುವೆಯಾದ ಹೊಸದರಲ್ಲಿ ಪತ್ನಿಯೊಂದಿಗೆ ಜೀವನ ನಡೆಸುತ್ತಿರುವಾಗ ಅವರು ಕಷ್ಟಪಟ್ಟು ಸಾಕಿದ್ದ ಸಿಲ್ಕ್ ಸ್ಮಿತಾ ಹೆಸರಿನ ನಾಯಿ ಕುರಿತು ಭಾವುಕವಾಗಿ ಅನೇಕ ವಿಚಾರಗಳನ್ನ ಹೇಳಿಕೊಂಡಿದ್ದಾರೆ.ಇದನ್ನೂ ಓದಿ: ರಕ್ಷಿತಾಗೆ ಆ *** ಪದ ಬಳಸಿದ್ದಕ್ಕೆ ಬೇಜಾರಿದೆ, ಕೈಮುಗಿದು ಕ್ಷಮೆ ಕೇಳ್ತೀನಿ: ಕಾಕ್ರೋಚ್ ಸುಧಿ
ಮನೆಯವರ ವಿರೋಧದ ಮಧ್ಯೆ ಶ್ರೀಮಂತ ಹುಡುಗಿಯನ್ನ ಮದುವೆಯಾಗಿದ್ದ ಸುಧಿ ಆಕೆಯನ್ನ ನೋಡಿಕೊಳ್ಳಲು ಕಷ್ಟ ಪಡುತ್ತಿದ್ದರಂತೆ, ಜೀವನದಲ್ಲಿ ಕಷ್ಟ ಇದ್ದಾಗಲೂ ನಾಯಿ ಸಾಕಿದ್ದ ಸುಧಿ ಅದಕ್ಕೆ ಸಿಲ್ಕ್ ಸ್ಮಿತಾ ಎಂದು ಹೆಸರಿಟ್ಟಿದ್ದರಂತೆ. ಪತ್ನಿಗೆ ಅಡುಗೆ ಮಾಡೋಕೆ ಬರದಿರುವ ಕಾರಣಕ್ಕೆ ಮನೆಗೆ ಪ್ರತಿದಿನ ನಾಲ್ಕು ಪ್ಲೇಟ್ ಚಿಕನ್ ಮಸಾಲಾ ತೆಗೆದುಕೊಂಡು ಬರುತ್ತಿದ್ದರಂತೆ. ಅದರಲ್ಲಿ ನಾಲ್ಕು ಚಿಕನ್ ತುಂಡುಗಳನ್ನ ತಮ್ಮ ಸಾಕುನಾಯಿ ಸ್ಮಿತಾಗೆ ಕೊಡುತ್ತಿದ್ದರಂತೆ. ಇನ್ನುಳಿದ ಎರಡೋ ಮೂರೋ ಪೀಸ್‌ಗಳನ್ನು ಸುಧಿ ಹಾಗೂ ಪತ್ನಿ ತಿಂದು ಮಲಗುತ್ತಿದ್ದರಂತೆ.
ಒಂದಿನ ಸುಧಿ ಗೆಳೆಯ ಬಂದು ಅನ್ನ ರಸಂ ಮಾಡೋದನ್ನ ಕಲಿಸಿಕೊಟ್ಟರಂತೆ. ಬಳಿಕ 6 ತಿಂಗಳು ಅನ್ನ ರಸಂ ತಿಂದುಕೊಂಡೇ ಜೀವನ ಮಾಡಿದ್ದೇವೆ ಎಂದು ಕಣ್ಣೀರಿಟ್ಟಿದ್ದಾರೆ. ಸಾಕುನಾಯಿ ಸ್ಮಿತಾಗೆ ಒಂದ್ ಲೀಟರ್ ಮೊಸರಿನ ಜೊತೆ ಅನ್ನ ಕೊಡುತ್ತಿದ್ದರಂತೆ. ಹೀಗೆ ತಮ್ಮ ಹಳೆಯ ದಿನಗಳನ್ನ ನೆನೆದು ಅಲ್ಲಿಂದ ಇಲ್ಲಿವರೆಗೂ ಬೆಳೆಸಿದ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಧನ್ಯವಾದ ಹೇಳುತ್ತಾ ಭಾವುಕರಾದರು.ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಕಾಕ್ರೋಚ್ ಸುಧಿ ಔಟ್
