ಬಿಗ್ ಬಾಸ್ ಸೀಸನ್ -12 (Bigg Boss Season 12) ಆರಂಭದಲ್ಲಿ ಆತಂಕ ಶುರುವಾಗಿದೆ. ಯಶಸ್ವಿಯಾಗಿ 11 ಸೀಸನ್ ಗಳನ್ನ ನಡೆಸಿಕೊಂಡು ಬರುತ್ತಿದ್ದ ರಿಯಾಲಿಟಿ ಶೋಗೆ ಬಿಗ್ ಶಾಕ್ ನೀಡಿದ್ದಾರೆ ಅಧಿಕಾರಿಗಳು. ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮ ಉಲ್ಲಂಘನೆ ಆಗಿರುವ ಹಿನ್ನೆಲೆ ಬಿಗ್ ಬಾಸ್ ನಡೆಯುತ್ತಿದ್ದ ಜಾಗ ಅಂದರೆ ಜಾಲಿವುಡ್ ಸ್ಟುಡಿಯೋಗೆ (Jollywood Studio) ಬೀಗ ಜಡಿಯಲಾಗಿದೆ.
ಬಿಗ್ ಬಾಸ್ ಮನೆಗೆ ಬೀಗ ಜಡಿದ ಬಳಿಕ ಅಲ್ಲಿದ್ದ ಸ್ಪರ್ಧಿಗಳನ್ನ ಈಗಲ್ ಟನ್ ರೆಸಾರ್ಟ್ ಗೆ ಸ್ಥಳಾಂತರ ಮಾಡಲಾಯಿತು. ರಾತ್ರಿಯಿಂದಲೇ ವಾಸ್ತವ್ಯ ಹೂಡಿರುವ ಸ್ಪರ್ಧಿಗಳು ಬೆಳಗ್ಗೆ ರೆಸಾರ್ಟ್ ಬಾಲ್ಕನಿಯಲ್ಲಿ ನಿಂತು ಮಾತಾಡಿಕೊಳ್ಳುತ್ತಿದ್ದರು. ಈ ಘಟನೆಯ ಅರಿವಿಲ್ಲದೇ ರಿಲ್ಯಾಕ್ಸ್ ಮೂಡ್ ಗೆ ಜಾರಿದ್ದಾರೆ. ಜೊತೆಗೆ ಬಿಗ್ ಬಾಸ್ ಸ್ಪರ್ಧಿಗಳಾದ ಧನುಷ್ ಗೌಡ (Dhanush Gowda) ಹಾಗೂ ಅಭಿಷೇಕ್ (Abhishek) ಧೂಮಪಾನ ಮಾಡುತ್ತಾ ಮಾತ್ನಾಡುತ್ತಾ ನಿಂತಿರುವ ವಿಡಿಯೋ ಪಬ್ಲಿಕ್ ಟಿವಿಗೆ ಸಿಕ್ಕಿದೆ.
ಅಂದಹಾಗೆ ಜಾಲಿವುಡ್ ಸ್ಟುಡಿಯೋಗೆ ಬೆಂಗಳೂರು ದಕ್ಷಿಣ ಡಿಸಿ 10ದಿನಗಳ ಕಾಲಾವಕಾಶ ನೀಡಿದ್ದಾರೆ. 10 ದಿನಗಳಲ್ಲಿ ಒಳಗಡೆ ಆದ ಲೋಪ-ದೋಷಗಳನ್ನ ಸರಿಪಡಿಸಿಕೊಳ್ಳುವಂತೆ ಸೂಚಿಸಿ 10ದಿನ ತಾತ್ಕಾಲಿಕ ರಿಲೀಫ್ ನೀಡಲಾಗಿದೆ. ಆದರೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಯಾವುದೇ ಅನುಮತಿ ದೊರೆಯದ ಕಾರಣ ಬಿಗ್ ಬಾಸ್ ಮನೆಗೆ ಬಹುತೇಕ ಇಂದು (ಅ.8) ಶಿಫ್ಟ್ ಆಗೋದು ಡೌಟ್ ಎನ್ನಲಾಗ್ತಿದೆ.