ಬಿಗ್ ಬಾಸ್: ಸಲ್ಮಾನ್ ಖಾನ್ ಪಡೆಯುವ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ!

Public TV
1 Min Read

ಮುಂಬೈ: ಕಿರುತೆರೆಯಲ್ಲಿ ಪ್ರಸಾರಗೊಳ್ಳುವ ರಿಯಾಲಿಟಿ ಶೋ ಗಳಲ್ಲಿ ಬಿಗ್ ಬಾಸ್ ಮೊದಲನೆಯದಾಗಿ ಬರುತ್ತದೆ. ಎಲ್ಲಾ ರಿಯಾಲಿಟಿ ಶೋಗಳಿಗಿಂತ ಬಿಗ್ ಬಾಸ್ ಕಾರ್ಯಕ್ರಮವನ್ನು ಹೆಚ್ಚಿನ ಪ್ರೇಕ್ಷಕರನ್ನು ಹೊಂದಿದೆ.

ಕಲರ್ಸ್ ಚಾನೆಲ್ ನಲ್ಲಿ ಪ್ರಸಾರಗೊಳ್ಳುವ ಬಿಗ್ ಬಾಸ್ ಶೋ ಪ್ರಮುಖ ಆಕರ್ಷಣೆ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್. ಸಲ್ಮಾನ್ ಗಾಗಿ ಅತಿಹೆಚ್ಚು ಬಿಗ್ ಬಾಸ್ ವೀಕ್ಷಣೆ ಮಾಡುತ್ತಾರೆ ಎಂದು ಹೇಳಲಾಗುತ್ತದೆ. ಹಾಗಾಗಿ ಸಲ್ಮಾನ್ ಖಾನ್ ಬಿಗ್ ಬಾಸ್ ಸೀಸನ್ 11ಕ್ಕೆ ಪ್ರತಿ ಎಪಿಸೋಡಿಗೆ 11 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.

ಈಗಾಗಲೇ ಯಶಸ್ವಿಯಾಗಿ 10 ಸೀಸನ್ ಗಳನ್ನು ಮುಗಿಸಿರುವ ಬಿಗ್‍ಬಾಸ್ ಈ ಬಾರಿ ತನ್ನ ವಿಭಿನ್ನ ಪ್ರೋಮೋಗಳ ಮೂಲಕ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಈ ಬಾರಿಯ ಬಿಗ್ ಬಾಸ್‍ನಲ್ಲಿ ಯಾವೆಲ್ಲಾ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ ಎಂಬುದನ್ನು ಇದೂವರೆಗೂ ಚಾನೆಲ್ ಹೇಳಿಕೊಂಡಿಲ್ಲ. ಬಿಗ್ ಬಾಸ್ ನಲ್ಲಿ ಈ ಒಂದಲ್ಲ, ಎರಡು ಮನೆಗಳಿರಲಿವೆ. ಇದೇ ಅಕ್ಟೋಬರ್ 1ರಿಂದ ಬಿಗ್‍ಬಾಸ್ ರಿಯಾಲಿಟಿ ಶೋ ಆರಂಭವಾಗಲಿದೆ.

https://twitter.com/rajcheerfull/status/909268018529574912

https://twitter.com/rajcheerfull/status/898525211997458435

https://twitter.com/BiggBoss24x7/status/909255567499157504

https://twitter.com/BiggBoss24x7/status/908012287314685953

Share This Article
Leave a Comment

Leave a Reply

Your email address will not be published. Required fields are marked *