ರೀಲ್ಸ್ ಕೇಸ್ – ರಜತ್ ಜೈಲಿಗೆ, ವಿನಯ್‌ಗೆ 500 ರೂ. ದಂಡ

Public TV
1 Min Read

ಚ್ಚು ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣದಲ್ಲಿ ರಜತ್‌ಗೆ (Rajath) 14 ದಿನ ನ್ಯಾಯಾಂಗ ಬಂಧನಕ್ಕೆ 24ನೇ ಎಸಿಎಂಎಂ ಕೋರ್ಟ್ ಆದೇಶ ನೀಡಿದ್ರೆ, ವಿನಯ್‌ಗೆ (Vinay Gowda) 500 ರೂ. ದಂಡ ವಿಧಿಸುವ ಮೂಲಕ ರಿಲೀಫ್ ಕೊಟ್ಟಿದೆ. ಇದನ್ನೂ ಓದಿ:ಶ್ರೀದೇವಿ ಬಯೋಪಿಕ್‌ನಲ್ಲಿ ನಟಿಸಲು ಸಿದ್ಧ ಎಂದ ಪೂಜಾ ಹೆಗ್ಡೆ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ ಮಾತನಾಡಿ, ರಜತ್‌ಗೆ ಜೈಲಿಗೆ ಹೋಗಿದ್ದು ಬೇಸರ ಆಗಿದೆ ಎಂದು ಹೇಳಿದ್ದಾರೆ.

ವಾರಂಟ್ ರಿಕಾಲ್ ಆಗಿದ್ರಿಂದ ವಿನಯ್‌ಗೆ ಈ ಕೇಸ್‌ನಿಂದ ರಿಲೀಫ್ ಸಿಕ್ಕಿದೆ. ಕೋರ್ಟ್‌ಗೆ ವಕೀಲರೊಂದಿಗೆ ಹಾಜರಾಗಿ ವಿನಯ್ ಕ್ಷಮೆಯಾಚಿಸಿದ್ದಾರೆ. ಮುಂದಿನ ದಿನಗಳಲ್ಲಿ ವಿಚಾರಣೆಗೆ ಸಹಕಾರ ನೀಡೋದಾಗಿ ತಿಳಿಸಿದರು. ಹಾಗಾಗಿ ವಿನಯ್‌ಗೆ 500 ರೂ. ದಂಡವನ್ನು 24ನೇ ಎಸಿಎಂಎಂ ನ್ಯಾಯಾಲಯ ವಿಧಿಸಿದೆ. ಇದನ್ನೂ ಓದಿ:ರೀಲ್ಸ್ ಕೇಸ್: ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ರಜತ್

ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ವಿನಯ್ ಗೌಡ, ನಾನು ಅರ್ಜಿ ಹಾಕಿದ್ದಕ್ಕೆ ವಾರಂಟ್ ರಿಕಾಲ್ ಆಗಿತ್ತು. ನನಗೆ ವಾರಂಟ್ ಆಗಿರಲಿಲ್ಲ. ನಿನ್ನೆ ಸಂಜೆ ಪೊಲೀಸ್ ಠಾಣೆಗೆ ಹೋಗಿ ಬಂದಿದ್ದೇನೆ. ನನ್ನ ವಕೀಲರು ಇಂದು ಕೋರ್ಟ್ ಬರಲು ಹೇಳಿದ್ದರು. ಹಾಗಾಗಿ ಅವರೊಂದಿಗೆ ಬಂದಿದ್ದೇನೆ ಎಂದು ತಿಳಿಸಿದ್ದಾರೆ.

ರಜತ್ ಮೇಲೆ ಸಿಟ್ಟಿಲ್ಲ. ಕೋರ್ಟ್ ಆದೇಶಕ್ಕೆ ನಾವು ಗೌರವ ನೀಡಬೇಕಾಗತ್ತದೆ ಎಂದು ತಿಳಿಸಿದರು.

Share This Article