ಧರ್ಮಸ್ಥಳ ಕೇಸಲ್ಲಿ ಅನನ್ಯಾ ಭಟ್ ಪಾತ್ರ ಕಟ್ಟುಕಥೆನಾ? – ಸುಜಾತಾ ಭಟ್ ಸುಳ್ಳು ಹೇಳಿ ಯಾಮಾರಿಸಿದ್ರಾ?

Public TV
2 Min Read

ಬೆಂಗಳೂರು: ಧರ್ಮಸ್ಥಳ ಪ್ರಕರಣ (Dharmasthala Case) ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ನನ್ನ ಮಗಳು ಅನನ್ಯಾ ಭಟ್ ಕಾಣೆಯಾಗಿದ್ದಾಳೆ ಎಂದು ಸುಜಾತ ಭಟ್ (Sujatha Bhat) ಆಕೆಯ ಫೋಟೋ ಬಿಡುಗಡೆ ಮಾಡಿದ್ದರು. ಆದ್ರೇ ಈ ಫೋಟೋದ ಮೂಲವನ್ನು ಬೆನ್ನತ್ತಿದಾಗ ಅಸಲಿಯತ್ತು ಬಹಿರಂಗಗೊಂಡಿದೆ.

ನನ್ನ ಮಗಳು ಅನನ್ಯಾ ಭಟ್ (Ananya Bhat) ಮಣಿಪಾಲದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದು, 2003ರಲ್ಲಿ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾಗ ಕಾಣೆಯಾಗಿದ್ದಳು. ಈ ಬಗ್ಗೆ ದೂರು ನೀಡಲು ಹೋದಾಗ ಅಂದಿನ ಪೊಲೀಸರು ದೂರು ದಾಖಲಿಸಿಕೊಂಡಿರಲಿಲ್ಲ. ನನಗೆ ಧರ್ಮಸ್ಥಳದಲ್ಲಿ ಹೊಡೆಯಲಾಗಿತ್ತು ಎಂದೆಲ್ಲ ಸುಜಾತ ಭಟ್ ಆರೋಪ ಮಾಡಿದ್ದರು. ಇದನ್ನೂ ಓದಿ: ರೈಲಿಗೂ ಲಗೇಜ್ ಪಾಲಿಸಿ – ಲಗೇಜ್‌ ಮಿತಿ ಎಷ್ಟು? ಪಾವತಿ ಮಾಡಬೇಕಾದ ಹಣ ಎಷ್ಟು?

ನಾಪತ್ತೆಯಾಗಿದ್ದ ಮಗಳು ಅನನ್ಯಾ ಭಟ್ ಫೋಟೋ ಬಿಡುಗಡೆ ಮಾಡುವಂತೆ ಒತ್ತಡ ಹೆಚ್ಚಾದ ಬೆನ್ನಲ್ಲೇ ಸುಜಾತ ಭಟ್ ಫೋಟೋವೊಂದನ್ನು ಬಿಡುಗಡೆ ಮಾಡಿದ್ದರು. ಆದರೀಗ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇವಳೇ ನನ್ನ ಮಗಳು ಅನನ್ಯಾ ಭಟ್ ಅಂತ ಮೊನ್ನೆಯಷ್ಟೇ ವಕೀಲರ ಸಮ್ಮುಖದಲ್ಲಿ ಸುಜಾತ ಭಟ್ ಬಿಡುಗಡೆ ಮಾಡಿದ್ದರು.

ಶಿವಮೊಗ್ಗದ ರಿಪ್ಪನ್‌ಪೇಟೆಯಲ್ಲಿದ್ದ ಸುಜಾತಾ ಭಟ್ ಬೆಂಗಳೂರಿನ ರಂಗಪ್ರಸಾದ್ ಎಂಬುವರ ಮನೆಯಲ್ಲಿ ಕೇರ್ ಟೇಕರ್ ಆಗಿದ್ದರು. ಈ ರಂಗಪ್ರಸಾದ್ ಎಂಬುವವರ ಸೊಸೆಯೇ ವಾಸಂತಿ ಅನ್ನೋ ಸುದ್ದಿ ಈಗ ಹರಿದಾಡುತ್ತಿದೆ. ರಂಗಪ್ರಸಾದ್ ಅವರ ಪುತ್ರ ಶ್ರೀವತ್ಸ ಎಂಬುವವರ ಪತ್ನಿಯಾಗಿದ್ದ ವಾಸಂತಿ 2007ರಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ರು ಎನ್ನಲಾಗಿದೆ. ಇದೀಗ ರಂಗಪ್ರಸಾದ್ ಹಾಗೂ ಮಗ, ಸೊಸೆ ಎಲ್ಲರೂ ಸಾವನ್ನಪ್ಪಿದ್ದು, ವಾಸಂತಿ ಕಾಲೇಜು ದಿನಗಳ ಫೋಟೋವನ್ನು ಇಟ್ಟುಕೊಂಡಿದ್ದ ಸುಜತಾ ತನ್ನ ಮಗಳು ಎಂದು ಬಿಂಬಿಸೋಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಸಾಕು ಪ್ರಾಣಿಗಳಿಗಾಗಿ ಬ್ಲಡ್‌ ಬ್ಯಾಂಕ್‌ ನೆಟ್‌ವರ್ಕ್ – ಏನಿದು ಕೇಂದ್ರದ ಹೊಸ ಯೋಜನೆ?


ಶಿವಮೊಗ್ಗದ ರಿಪ್ಪನ್ ಪೇಟೆಯಲ್ಲಿ 1999ರಿಂದ 2007ವರೆಗೆ ಸುಜಾತಭಟ್, ಪ್ರಭಾಕರ್ ಬಾಳಿಗ ಎಂಬುವರ ಜೊತೆಗೆ ಇದ್ದರೆಂದು ಹೇಳಲಾಗಿದೆ. ಆದ್ರೆ, ಇವರನ್ನು ಕಂಡ ನೆರೆ ಹೊರೆಯವರು ಹೇಳೋ ಪ್ರಕಾರ, ಅವರಿಗೆ ಮಕ್ಕಳೇ ಇರಲಿಲ್ಲ. ನಾಯಿಗಳನ್ನೇ ಮಕ್ಕಳಂತೆ ಸಾಕುತ್ತಿದ್ದರು ಅಂತ ನೆರೆಹೊರೆಯವರು ಮಾಹಿತಿ ನೀಡಿದ್ದಾರೆ. ಪ್ರಭಾಕರ್ ಬಾಳಿಗ ಸ್ನೇಹಿತರೂ ಕೂಡ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ. ಅವರ ಪ್ರಕಾರವೂ ಸುಜಾತ ಭಟ್‌ಗೆ ಮಕ್ಕಳೇ ಇರಲಿಲ್ಲ.

ಇನ್ನು, ಈ ಎಲ್ಲಾ ಆರೋಪ ಸಂಬಂಧ ಪಬ್ಲಿಕ್ ಟಿವಿಗೆ ಸುಜಾತಾ ಭಟ್ ಎಕ್ಸ್ಕ್ಲೂಸಿವ್ ರಿಯಾಕ್ಷನ್ ಕೊಟ್ಟಿದ್ದಾರೆ. ನಾನು ಹೇಳಿರುವುದೆಲ್ಲವೂ ಸತ್ಯ. ಅನನ್ಯಾ ಭಟ್ ಫೋಟೋವನ್ನೇ ನಾನು ತೋರಿಸಿದ್ದೇನೆ. ನನಗೆ ಮಕ್ಕಳಿದ್ದಾರೆ. ಅನಿಲ್ ಭಟ್ ಎಂಬುವವರ ಜೊತೆ ನಾನು ವಿವಾಹವಾಗಿದ್ದೆ. ನಮ್ಮಿಬ್ಬರಿಗೆ ಜನಿಸಿದ ಮಗಳೇ ಈ ಅನನ್ಯಾ ಭಟ್. ಇನ್ನು ವಾಸಂತಿ ಯಾರು ಎಂಬುದೇ ನನಗೆ ಗೊತ್ತಿಲ್ಲ. ಅದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.

ಒಟ್ಟಾರೆ ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ ಬೆನ್ನತ್ತಿರುವ ಎಸ್‌ಐಟಿಗೆ ದಾಖಲಾಗ್ತಿರುವ ಪ್ರಕರಣಗಳು ಗೊಂದಲವಾಗಿಯೇ ಇದೆ.

Share This Article