ಲಿಂಗಾಯತ ಅವಹೇಳನ ಕೇಸಲ್ಲಿ ಸಿದ್ದರಾಮಯ್ಯಗೆ ರಿಲೀಫ್

Public TV
1 Min Read

ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಲಿಂಗಾಯತ ಸಮುದಾಯದವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಸಿದ್ದರಾಮಯ್ಯ (Siddaramaiah) ವಿರುದ್ಧ ದಾಖಲಾಗಿದ್ದ ಮಾನಹಾನಿ ಮೊಕದ್ದಮೆ ಅರ್ಜಿಯನ್ನು ಜನಪ್ರತಿನಿಧಿಗಳ ಕೋರ್ಟ್ ವಜಾ ಮಾಡಿದೆ.

ಲಿಂಗಾಯತ ಸಿಎಂಗಳು ಭ್ರಷ್ಟರು ಎಂಬ ಸಿದ್ದರಾಮಯ್ಯ ಹೇಳಿಕೆಯಿಂದ ಇಡೀ ಸಮುದಾಯಕ್ಕೆ ನೋವಾಗಿದೆ. ಮಾನಹಾನಿಯಾಗುವಂತೆ ಮಾಡಿದ್ದಾರೆ ಎಂದು ಶಂಕರ್ ಸೇಠ್ ಮತ್ತು ಮಲ್ಲಯ್ಯ ಹಿರೇಮಠ್ ಎಂಬವರು ಕೋರ್ಟ್ (Court) ಮೊರೆ ಹೋಗಿದ್ರು. ಇದೀಗ ಈ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ರಿಲೀಫ್ ಸಿಕ್ಕಿದೆ.

ಇದೇ ವೇಳೆ ಚುನಾವಣೆ ವೇಳೆ ಬಿಜೆಪಿ (BJP) ವಿರುದ್ಧ ಭ್ರಷ್ಟಾಚಾರದ ರೇಟ್‍ಕಾರ್ಡ್ ಜಾಹೀರಾತು ನೀಡಿದ್ದ ಪ್ರಕರಣದಲ್ಲಿ ಕಾಂಗ್ರೆಸ್ (Congress) ನಾಯಕರಿಗೆ ಸಂಕಷ್ಟ ಶುರುವಾಗಿದೆ. ಬಿಜೆಪಿ ದೂರಿನ ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್, ಸಿಎಂ, ಡಿಸಿಎಂ ಮತ್ತು ಸುರ್ಜೇವಾಲಾ ಸೇರಿ ಕಾಂಗ್ರೆಸ್ ಪಕ್ಷದ 36 ಮುಖಂಡರಿಗೆ ಸಮನ್ಸ್ ಜಾರಿ ಮಾಡಿದೆ. ಈ ಅರ್ಜಿಯನ್ನು ವಿಚಾರಣೆಗೆ ಯೋಗ್ಯ ಎಂದು ಪರಿಗಣಿಸಿದ ಕೋರ್ಟ್, ಜುಲೈ 27ರಂದು ಖುದ್ದು ಹಾಜರಾಗುವಂತೆ ಸೂಚನೆ ನೀಡಿದೆ.

Share This Article