ಯಾರನ್ನೋ ಓಲೈಸಲು ಹೋದರೆ ದೊಡ್ಡ ಬೆಲೆ ತೆರಬೇಕಾಗುತ್ತದೆ: ರಾಜ್ಯ ಸರ್ಕಾರಕ್ಕೆ ಹೆಚ್‌ಡಿಕೆ ಎಚ್ಚರಿಕೆ

Public TV
1 Min Read

ಬೆಂಗಳೂರು: ಯಾರನ್ನೋ ಓಲೈಸಲು ಸರ್ಕಾರದ ಆಸ್ತಿ ಲೂಟಿ ಹೊಡೆಯುವವರಿಗೆ ರಕ್ಷಣೆ ಕೊಟ್ಟರೆ ಮುಂದೆ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ವಿಜಯಪುರ, ಧಾರವಾಡದ (Dharawada) ರೈತರ ಜಮೀನಿಗೆ ವಕ್ಫ್ ಬೋರ್ಡ್ (Waqf Board) ನೋಟಿಸ್ ನೀಡಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರ ಕ್ಯಾಬಿನೆಟ್‌ನಲ್ಲಿ ವಕ್ಫ್‌ಗೆ ಸಂಬಂಧಿಸಿದಂತೆ ಚರ್ಚೆ ಆಗಿದೆ. ವಕ್ಫ್ ಬಗ್ಗೆ ಚರ್ಚೆ ಆಗಬೇಕು ಎಂದು ಕೇಂದ್ರದಲ್ಲಿ ತೀರ್ಮಾನ ಆಗಿದೆ. ಇವತ್ತು ಕರ್ನಾಟಕದಲ್ಲಿ ವಾತಾವರಣದಿಂದ ರೈತರು ಭಯಭೀತರಾಗಿದ್ದಾರೆ. ಮೊನ್ನೆ ವಿಜಯಪುರ ಆಯ್ತು, ನಿನ್ನೆ ಧಾರವಾಡದಲ್ಲಿ ಇದೇ ಸಮಸ್ಯೆ ಆಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್ ನಾಯಕರ ಟೀಕೆಗೆ ನ.23ಕ್ಕೆ ಉತ್ತರ ಕೊಡ್ತೀನಿ: ಹೆಚ್‌ಡಿಕೆ

ರೈತರ ಭೂಮಿ ಆಗಲಿ, ಸರ್ಕಾರದ ಭೂಮಿ ಆಗಲಿ ವಕ್ಫ್ ಹೆಸರಿನಲ್ಲಿ ಯಾರೋ ನಾಲ್ಕು ಜನ, ಆ ಸಮಾಜಕ್ಕೆ ಸೇರಿದವರು ಅಥವಾ ಭೂಗಳ್ಳರು ಆ ಭೂಮಿಯನ್ನ ಸ್ವೇಚ್ಛಾಚಾರವಾಗಿ ಕಾನೂನು ಬಾಹಿರವಾಗಿ ಲಪಟಾಯಿಸುತ್ತಿದ್ದಾರೆ. ಆ ಸತ್ಯಾಂಶಗಳು ಹೊರಗೆ ಬರಬೇಕು ಅನ್ನೋದು ನನ್ನ ಅಭಿಪ್ರಾಯ ಎಂದರು. ಇದನ್ನೂ ಓದಿ: ಉಪಚುನಾವಣೆ ಸೋಲುವ ಭಯದಿಂದ ಬಿಜೆಪಿ-ಜೆಡಿಎಸ್ ವಕ್ಫ್ ವಿವಾದ ಮಾಡ್ತಿವೆ: ಪ್ರಿಯಾಂಕ್ ಖರ್ಗೆ

ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದೇನೆ. ಈ ರೀತಿ ಯಾರನ್ನೋ ಓಲೈಸುವಂತಹ ಕೆಲಸ ಮಾಡಿ ಸರ್ಕಾರದ ಆಸ್ತಿಯನ್ನ ಲೂಟಿ ಹೊಡೆಯೋರಿಗೆ ರಕ್ಷಣೆ ಕೊಡುವುದಕ್ಕೆ ಹೋದರೆ ಅದಕ್ಕೆ ದೊಡ್ಡ ಮಟ್ಟದ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ವಿಮಾನಯಾನ ಸಂಸ್ಥೆಗಳಿಗೆ ಬಾಂಬ್‌ ಬೆದರಿಕೆ – ಆರೋಪಿ ಅರೆಸ್ಟ್‌

Share This Article