Big Boss Kannada: ನಮ್ರತಾ ಕಾರಣದಿಂದ ಸಂಗೀತಾ-ಕಾರ್ತಿಕ್ ಲವ್ ಬ್ರೇಕಪ್

By
2 Min Read

ನಿನ್ನೆಯ ಹಬ್ಬದ ಸಂಭ್ರಮ, ಇಂದಿನ ಕ್ಯಾಪ್ಟನ್ಸಿ ಟಾಸ್ಕ್‌ನ ಬಿಸಿಗೆ ಕರಗಿದೆ. ಅಗ್ಗಷ್ಟಿಕೆಯೆದುರು ನೋವು ಹಂಚಿಕೊಳ್ಳುತ್ತ ಒಂದಾಗಿದ್ದ ಸ್ಪರ್ಧಿಗಳ ನಡುವೆ ಮತ್ತೀಗ ಕಿಡಿ ಹೊತ್ತಿಕೊಂಡಿದೆ. ಮನೆಯ ಕ್ಯಾಪ್ಟನ್‌ ಆಗಲು ಅರ್ಹರಾದ ಇಬ್ಬರು ಸದಸ್ಯರನ್ನು ಮನೆಯ ಎಲ್ಲ ಸದಸ್ಯರೂ ಆರಿಸಬೇಕು ಎಂದು ಬಿಗ್‌ಬಾಸ್‌ (Bigg Boss Kannada) ಆದೇಶ ನೀಡಿದ್ದಾರೆ. ಸಂಗೀತಾ, ‘ತಾನು ಲೀಡರ್ ಆಗಬೇಕು ಅಂದುಕೊಂಡಿದ್ದೇನೆ’ ಎಂದು ಘೋಷಿಸಿದ್ದಾರೆ. ಆದರೆ ಅವರ ಆಪ್ತಸ್ನೇಹಿತ ಕಾರ್ತಿಕ್ ಅವರೇ ನಮ್ರತಾ ಮತ್ತು ತನಿಷಾ ಅವರನ್ನು ಕ್ಯಾಪ್ಟನ್ ಆಗಲು ಅರ್ಹರು ಎಂದು ಹೇಳಿ ಸೂಚಿಸಿದರು. ಇದು ಸಂಗೀತಾ ಅವರನ್ನು ಕೆರಳಿಸಿದೆ. ಮನಸಲ್ಲಿದ್ದುದನ್ನು ನೇರವಾಗಿ ಹೇಳಿಬಿಡುವ ಅಭ್ಯಾಸ ಇರುವ ಸಂಗೀತಾ ಈ ವಿಷಯವನ್ನೂ ಕಾರ್ತಿಕ್ ಬಳಿ ನೇರವಾಗಿಯೇ ಕೇಳಿದ್ದಾರೆ.

ಕಾರ್ತಿಕ್ (Karthik) ಮತ್ತು ಸಂಗೀತಾ (Sangeeta) ಮಧ್ಯ ಕಿಡಿ ಹೊತ್ತಿಕೊಂಡ ದೃಶ್ಯವು JioCinema ಬಿಡುಗಡೆ ಮಾಡಿರುವ ಫ್ರೋಮೊದಲ್ಲಿ ಸೆರೆಯಾಗಿದೆ. ಆಯ್ಕೆ ಸೂಚನಾ ಪ್ರಕ್ರಿಯೆ ಮುಗಿದ ಮೇಲೆ ಸಂಗೀತಾ, ‘ನೀನ್ಯಾಕೆ ನನ್ನನ್ನು ಆಯ್ಕೆ ಮಾಡಿಕೊಂಡಿಲ್ಲ’ ಎಂದು ಕಾರ್ತಿಕ್ ಅವರ ಬಳಿ ಕೇಳಿದ್ದಾರೆ. ಹಾಗೆಯೇ, ‘ಯಾಕೆ ನಮ್ರತಾ?’ ಎಂದೂ ಕೇಳಿದ್ದಾರೆ. ಅದಕ್ಕೆ ಕಾರ್ತಿಕ್ ನೇರವಾಗಿ ಉತ್ತರಿಸದೆ, ‘ಕೋಪ ಯಾಕೆ ಮಾಡ್ಕೋತಿಯಾ?’ ಎಂದು ಅನುನಯಿಸಲು ಹೋಗಿದ್ದಾರೆ

‘ನಾನು ಯಾರ ಮೇಲೂ ಡಿಫೆಂಡ್ ಆಗಿ ಬಂದಿಲ್ಲ ಇಲ್ಲಿ. ಜೊತೆಗಿದ್ದೋರೇ ಚುಚ್ಚುವುದು’ ಎಂದೆಲ್ಲ ಜರಿದಿದ್ದಾರೆ. ಕೊನೆಗೆ ‘ಯು ಆರ್ ಫೇಕ್‌’ ಎಂಬ ಮಾತು ಸಂಗೀತಾ ಬಾಯಲ್ಲಿ ಹೊರಬೀಳುತ್ತಿದ್ದಂತೆಯೇ ಕಾರ್ತಿಕ್ ಅಲ್ಲಿಂದ ಎದ್ದು ಹೊರಟುಹೋಗಿದ್ದಾರೆ.

ಬಿಗ್‌ಬಾಸ್‌ ಮನೆಯ ಬೆಸ್ಟ್‌ ಜೋಡಿ ಅಂತಲೇ ಗುರ್ತಿಸಿಕೊಂಡಿದ್ದ, ಸದಾ ಒಬ್ಬರಿಗೊಬ್ಬರು ಸಪೋರ್ಟ್‌ ಮಾಡುತ್ತ, ಒಬ್ಬರ ಸಲಹೆಯನ್ನು ಇನ್ನೊಬ್ಬರು ಕೇಳುತ್ತ ಬಂದಿದ್ದ ಕಾರ್ತಿಕ್ ಮತ್ತು ಸಂಗೀತಾ ಈ ಕಾರಣಕ್ಕಾಗಿಯೇ ಹಲವು ಸಲ ಉಳಿದವರ ಕೆಂಗಣ್ಣಿಗೆ ಗುರಿಯಾಗಿದ್ದಿದೆ. ಆದರೆ ಅವರ ಸಂಬಂಧದ ಮೇಲೆ ಈಗ ಯಾರದೋ ಕಣ್ಣು ಬಿದ್ದಂತಿದೆ.

ಯಾವಾಗಲೂ ಹ್ಯಾಪಿಯಾಗಿರುತ್ತಿದ್ದ ಕಾರ್ತಿಕ್ ಮತ್ತು ಸಂಗೀತ ಬೇರೆಯಾಗಿದ್ದಾರೆಯೇ? ಅವರ ನಡುವೆ ಒಡಕು ಮೂಡಿದೆಯೇ? ಪರಸ್ಪರ ಹಳೆಯದನ್ನು ಮರೆತು ಒಂದಾಗುತ್ತಾರಾ? ಅಥವಾ ಅವರಿಬ್ಬರ ನಡುವಿನ ಭಿನ್ನಾಭಿಪ್ರಾಯ ಮುಂದುವರಿದುಕೊಂಡೇ ಹೋಗುತ್ತದಾ? ಗೊತ್ತಿಲ್ಲ. ಆದರೆ, ಸಂಗೀತಾರನ್ನು ಕೆರಳಿಸುವುದಕ್ಕಾಗಿ ಮತ್ತೆ ಮತ್ತೆ ಕಾರ್ತಿಕ್ ಅವರು ನಮ್ರತಾ ಜೊತೆ ಹೋಗುತ್ತಿದ್ದಾರೆ. ಅವರೊಂದಿಗೆ ಡಾನ್ಸ್ ಮಾಡುತ್ತಿದ್ದಾರೆ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್