ಬೀದರ್‌ | ಕನ್ನಡ ಕೃಷಿ ಡಿಪ್ಲೊಮಾ ಕೋರ್ಸ್‌ ಬಂದ್‌

Public TV
1 Min Read

– ಪಂಚ ಗ್ಯಾರಂಟಿಯಿಂದ ಸರ್ಕಾರದ ಬಳಿ ದುಡ್ಡಿಲ್ಲ
– ಕೋರ್ಸ್‌ ಬಂದ್‌ ಮಾಡಿದ್ದಕ್ಕೆ ವಿದ್ಯಾರ್ಥಿಗಳು ಆಕ್ರೋಶ

ಬೀದರ್: ತಾಲೂಕಿನ  ಜನವಾಡ ಸಮೀಪದ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ ನಡೆಯುತ್ತಿದ್ದ ಕನ್ನಡ ಕೃಷಿ ಡಿಪ್ಲೊಮಾ ಕೋರ್ಸ್‌ ಪ್ರಸಕ್ತ ವರ್ಷದಿಂದ ಸ್ಥಗಿತಗೊಳಿಸಲು ಕರ್ನಾಟಕ ಸರ್ಕಾರ (Karnataka Govt) ನಿರ್ಧಾರ ಮಾಡಿದೆ.

ಈ ಭಾಗದ ರೈತರ ಮಕ್ಕಳಿಗೆ ಸಹಾಯವಾಗಲೆಂದು 2012ರಲ್ಲಿ ಸಂಶೋಧನಾ ಕೇಂದ್ರದ ಆವರಣದಲ್ಲಿ ಕೃಷಿ ಡಿಪ್ಲೊಮಾ ಕೋರ್ಸ್‌ (Bidar Agriculture Diploma Courses) ಆರಂಭಿಸಲಾಗಿತ್ತು. ಕೃಷಿ ವಿಜ್ಞಾನ ಕೇಂದ್ರ ರಾಯಚೂರು ಅಡಿಯಲ್ಲಿ ಎಸ್‌ಎಸ್‌ಎಲ್‌ಸಿ (SSLC) ಬಳಿಕ ವಿದ್ಯಾರ್ಥಿಗಳು ಎರಡು ವರ್ಷದ ಡಿಪ್ಲೊಮಾ ಕೋರ್ಸ್ ಮಾಡುತ್ತಿದ್ದರು. ಕಳೆದ ವರ್ಷವು ಎರಡು ತರಗತಿ ಸೇರಿ 90ಕ್ಕೂ ಅಧಿಕ ವಿದ್ಯಾರ್ಥಿಗಳು ಡಿಪ್ಲೊಮಾ ಪದವಿ ಓದಿದ್ದರು. ಇದನ್ನೂ ಓದಿ: ಉದ್ಯಮಿ ವಿಜಯ್ ಮಲ್ಯ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್

ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ಪ್ರತ್ಯೇಕವಾದ ಕಟ್ಟಡ ನಿರ್ಮಿಸಲಾಗಿತ್ತು. ಪ್ರತಿ ವರ್ಷ 50 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿತ್ತು. ಕಳೆದ ಒಂದು ದಶಕದಿಂದ ಯಶಸ್ವಿಯಾಗಿ ಕೋರ್ಸ್‌ ನಡೆಸಿಕೊಂಡು ಬರಲಾಗಿತ್ತು. ಆದರೆ ಈಗ ಸರ್ಕಾರ ಅದನ್ನು ಸ್ಥಗಿತಗೊಳಿಸಲು ಮುಂದಾಗಿದೆ. ಪಂಚ ಗ್ಯಾರಂಟಿ ಯೋಜನೆಯಿಂದಾಗಿ ಸರ್ಕಾರಕ್ಕೆ ಡಿಪ್ಲೊಮಾ ಕಾಲೇಜು ನಡೆಸಲು ದುಡ್ಡಿಲ್ಲ. ಕಾಂಗ್ರೆಸ್ ಸರ್ಕಾರದ ಪಂಚ ಯೋಜನೆಗಳೇ ಬಂದ್‌ ಆಗಲು ಕಾರಣ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

 

ಕಾಲೇಜಿನ ಪ್ರಾಂಶುಪಾಲರಾದ ಡಾ. ಆರಾಧ್ಯ ಜಾದವ್ ಪ್ರತಿಕ್ರಿಯಿಸಿ, ಕೋಟ್ಯಂತರ ರೂ. ಖರ್ಚುಮಾಡಿ ಕೃಷಿ ವಿದ್ಯಾಲಯವನ್ನು ಸ್ಥಾಪಿಸಲಾಗಿದೆ. 2 ವರ್ಷದ ಡಿಪ್ಲೊಮಾದಿಂದಾಗಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಹೊರೆ ಬೀಳುವುದಿಲ್ಲ. ಸರ್ಕಾರ ಕೃಷಿ ಡಿಪ್ಲೊಮಾ ಕಾಲೇಜು ಬಂದ್ ಮಾಡಿದ್ದರಿಂದ ಎಲ್ಲಾ ಉಪಕರಣಗಳು ತುಕ್ಕು ಹಿಡಿಯುತ್ತಿದ್ದು ಕ್ಲಾಸ್‌ಗಳು ಧೂಳು ತಿನ್ನುತ್ತಿವೆ. 12 ವರ್ಷದಿಂದ ನಡೆಯುತ್ತಿದ್ದ ತರಗತಿಗಳು ಬಂದಾಗಿದ್ದು ಗ್ರಾಮೀಣ ಭಾಗದ ಮಕ್ಕಳಿಗೆ ಭಾರೀ ನಷ್ಟವಾಗಿದೆ. ಈ ಬಗ್ಗೆ ಕೃಷಿ ಸಚಿವ ಚಲುವರಾಯಸ್ವಾಮಿ ಗಮನಿಸಿ ಕೃಷಿ ಡಿಪ್ಲೊಮಾ ಪ್ರಾರಂಭಕ್ಕೆ ಮುತುವರ್ಜಿ ವಹಿಸಬೇಕಿದೆ ಎಂದು ಮನವಿ ಮಾಡಿದರು.

Share This Article