ಬೀದರ್ | ಸೈಟ್ ವಿಚಾರಕ್ಕೆ ಗಲಾಟೆ – ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಹತ್ಯೆ

Public TV
1 Min Read

ಬೀದರ್: ಸೈಟ್ ವಿಚಾರಕ್ಕೆ ಗಲಾಟೆಯಾಗಿ ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಹತ್ಯೆ ಮಾಡಿರುವ ಘಟನೆ ಬೀದರ್ (Bidar) ತಾಲೂಕಿನ ಗಾದಗಿ (Gadgi) ಗ್ರಾಮದಲ್ಲಿ ನಡೆದಿದೆ.ಇದನ್ನೂ ಓದಿ: 22 ಕೋಟಿ ರೂಪಾಯಿಗೆ ರಜನಿಯ ಕೂಲಿ ಸಿನಿಮಾ ಬಿಕರಿ

ಮಲ್ಲಿಕಾರ್ಜುನ (50) ಮೃತ ದುರ್ದೈವಿ. ಘಟನೆಯಾದ ದಿನ ಒತ್ತುವರಿ ಮಾಡಿದ್ದ ಸೈಟ್ ಕೇಳಿದ್ದಕ್ಕೆ ಮೃತ ಮಲ್ಲಿಕಾರ್ಜುನ ಹಾಗೂ ಆರೋಪಿಗಳ ನಡುವೆ ಗಲಾಟೆಯಾಗಿದೆ. ಜಗಳ ತಾರಕಕ್ಕೇರಿ ಕೊನೆಗೆ ಆರೋಪಿಗಳು ಚಾಕುವಿನಿಂದ ಇರಿದು ಹತ್ಯೆಗೈದಿದ್ದಾರೆ.

ಕೂಡಲೇ ಆತನನ್ನು ಬ್ರಿಮ್ಸ್‌ (BIMS) ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬೀದರ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ (Bidar Rural Police Station) ಪ್ರಕರಣ ದಾಖಲಾಗಿದೆ.ಇದನ್ನೂ ಓದಿ:ನನಗೂ ನನ್ನ ಪತ್ನಿಗೂ ಏನಾದ್ರು ಆದ್ರೆ ಅದಕ್ಕೆ ಪಾಕ್‌ ಸೇನಾ ಮುಖ್ಯಸ್ಥನೇ ಕಾರಣ: ಇಮ್ರಾನ್‌ ಖಾನ್‌ ಹೇಳಿಕೆ

Share This Article