ಬೆಳಿಗ್ಗೆ ಪಹಲ್ಗಾಮ್‌ನಲ್ಲಿ ಎಂಜಾಯ್ ಮಾಡಿ ಹೋಗಿದ್ವಿ – ಉಗ್ರರ ದಾಳಿಯಿಂದ ಪಾರಾದ ಬೀದರ್ ದಂಪತಿ

Public TV
1 Min Read

-ಗುಂಡಿನ ದಾಳಿ ವೇಳೆ 14 ಕಿ.ಮೀ ದೂರದಲ್ಲಿದ್ವಿ ಎಂದ ದಂಪತಿ

ಬೀದರ್: ನಾವು ಗುಂಡಿನ ದಾಳಿ ನಡೆಯುತ್ತಿದ್ದ ಪ್ರದೇಶದಿಂದ 14 ಕಿ.ಮೀ ದೂರದಲ್ಲಿದ್ದೆವು, ಸ್ವಲ್ಪದರಲ್ಲೇ ಆ ದಾಳಿಯಿಂದ ಪಾರಾಗಿ ಬಂದಿದ್ದೇವೆ ಎಂದು ಪಹಲ್ಗಾಮ್‌ನಲ್ಲಿ (Pahalgam) ನಡೆದ ಹಿಂದೂಗಳ ನರಮೇಧದಿಂದ ಪಾರಾದ ಬೀದರ್‌ನ (Bidar) ದಂಪತಿ ಅಲ್ಲಿನ ಭೀಕರತೆಯ ಬಗ್ಗೆ ಬಿಚ್ಚಿಟ್ಟಿದ್ದಾರೆ.ಇದನ್ನೂ ಓದಿ: ಪಾಕ್‌ ಸೈನಿಕರಿಂದ 24*7 ಭದ್ರತೆ – ಲಾಹೋರ್‌ನಲ್ಲಿ ಪಹಲ್ಗಾಮ್ ದಾಳಿಯ ಮಾಸ್ಟರ್‌ಮೈಂಡ್‌ ಸಯೀದ್‌ ಐಷಾರಾಮಿ ಜೀವನ

`ಪಬ್ಲಿಕ್ ಟಿವಿ’ಯೊಂದಿಗೆ ದಂಪತಿ ಮಾತನಾಡಿ, ನಾವು ಹೊಸದಾಗಿ ಮದುವೆಯಾಗಿದ್ದಕ್ಕೆ ಕಾಶ್ಮೀರಕ್ಕೆ ಹೋಗಿದ್ವಿ. ಕುಟುಂಬದವರು ಸೇರಿ ನಮ್ಮ ಸೋದರ ಸಂಬಂಧಿ ಜೊತೆಗೆ ಸ್ವಂತ ಕಾರಿನಲ್ಲಿ ಪ್ರವಾಸಕ್ಕೆ ಹೋಗಿದ್ದೆವು. ಏ.22 ರಂದು ಬೆಳಗಿನ ಜಾವ ನಾವು ಪಹಲ್ಗಾಮ್‌ನ ಬೈಸರನ್ (Baisaran) ವ್ಯಾಲಿಗೆ ಹೋಗಿ, ಅಲ್ಲಿ ಎಂಜಾಯ್ ಬಳಿಕ ನಾವು ಅಲ್ಲಿಂದ 14 ಕಿ.ಮೀ. ದೂರದಲ್ಲಿರುವ ಬೆಹತಬ್ ವ್ಯಾಲಿಗೆ ಹೋಗಿದ್ವಿ, ಆಗ ಬೈಸರನ್ ವ್ಯಾಲಿಯಲ್ಲಿ ಉಗ್ರರ ದಾಳಿ ನಡೆಯಿತು.

ದೇವರು, ಹಿರಿಯರ ಕೃಪೆಯಿಂದ ನಾವು ಪಾರಾಗಿ ಬಂದಿದ್ದೇವೆ ಅನಿಸುತ್ತದೆ. ನಾವು ಅಲ್ಲಿಂದ 14 ಕಿ.ಮಿ. ದೂರದಲ್ಲಿದ್ದರೂ ಕೂಡ ಸಹಜವಾಗಿಯೇ ತುಂಬಾ ಭಯ ಆಯ್ತು. ಇನ್ನೂ ಆ ಭಯದಿಂದ ಹೊರಬಂದಿಲ್ಲ. ಆದರೆ ಬೈಸರನ್ ವ್ಯಾಲಿಗೆ ಬಂದ ಪ್ರವಾಸಿಗರಿಗೆ ಅಲ್ಲಿನ ಭದ್ರತಾ ಸಿಬ್ಬಂದಿ ಬಹಳ ಧೈರ್ಯ ತುಂಬಿದರು. ನೂರು ಮೀಟರ್‌ಗೆ ಒಬ್ಬರು ಭದ್ರತಾ ಸಿಬ್ಬಂದಿ ಇದ್ದರು. ಸೆಕ್ಯೂರಿಟಿ ತುಂಬಾ ಚೆನ್ನಾಗಿದೆ. ಡೇಂಜರ್ ಝೋನ್‌ನಲ್ಲಿ ನಮ್ಮನ್ನು ಓಡಾಡೋಕೆ ಬಿಡುತ್ತಿರಲಿಲ್ಲ. ಘಟನೆಯಾದ ಬಳಿಕ ನಾವು ಅಲ್ಲಿಂದ ವಾಪಸ್ ಬಂದ್ವಿ. ಈ ರೀತಿ ಅಮಾಯಕ ಪ್ರವಾಸಿಗರ ಮೇಲೆ ದಾಳಿ ಮಾಡಿದ ಉಗ್ರರನ್ನು ಬಿಡಬಾರದು. ಪ್ರಧಾನಿ ಮೋದಿ ಪಾಕಿಸ್ತಾನದ ಮೇಲೆ ಯುದ್ಧ ಮಾಡಿ ಹಿಂದೂಗಳ ನರಮೇಧಕ್ಕೆ ಪ್ರತೀಕಾರ ತಿರಿಸಿಕೊಳ್ಳಬೇಕು ಎಂದರು.ಇದನ್ನೂ ಓದಿ: ಪಹಲ್ಗಾಮ್‌ ದಾಳಿ – ಉ.ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಹೈಅಲರ್ಟ್‌

Share This Article