ಉಡಾನ್ ಯೋಜನೆಯಡಿ ಬಳ್ಳಾರಿ, ಕೋಲಾರ ಮಿನಿ ಏರ್‌ಪೋರ್ಟ್‌ಗೆ ಬಿಡ್ ಸ್ವೀಕಾರ: ಕೇಂದ್ರ ವಿಮಾನಯಾನ ಸಚಿವಾಲಯ

Public TV
1 Min Read

ನವದೆಹಲಿ: ಉಡಾನ್ ಯೋಜನೆಯಡಿ (Udan Scheme) ಬಳ್ಳಾರಿ ಹಾಗೂ ಕೋಲಾರ ಏರ್‌ಸ್ಟ್ರಿಪ್‌ಗಳಲ್ಲಿ (ಮಿನಿ ಏರ್‌ಪೋರ್ಟ್) ಸಣ್ಣ ವಿಮಾನಗಳ ಕಾರ್ಯಾಚರಣೆಗಾಗಿ (20 ಸೀಟುಗಳಿಗಿಂತ ಕಡಿಮೆ) ಬಿಡ್‌ಗಳನ್ನು ಸ್ವೀಕರಿಸಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ (Ministry of Civil Aviation) ತಿಳಿಸಿದೆ.

ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯ ಲಹರ್ ಸಿಂಗ್ ಸಿರೋಯಾ ಕೇಳಿರುವ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳಿಧರ್ ಮೊಹೊಲ್ (Murlidhar Mohol), ಈ ವಿಮಾನ ನಿಲ್ದಾಣಗಳ ಆರಂಭಕ್ಕೆ ಒಪ್ಪಿಗೆ ನೀಡುವಂತೆ ರಾಜ್ಯ ಸರ್ಕಾರವನ್ನು ಕೋರಲಾಗಿದೆ. ಜೊತೆಗೆ, ಭೂಮಿಯ ಲಭ್ಯತೆಯನ್ನು ಖಚಿತಪಡಿಸುವಂತೆ ತಿಳಿಸಲಾಗಿದೆ. ರಾಜ್ಯ ಸರ್ಕಾರವು ಉಚಿತವಾಗಿ ಭೂಮಿ ಒದಗಿಸಬೇಕು ಎಂದಿದ್ದಾರೆ. ಇದನ್ನೂ ಓದಿ: 17,000 ಕೋಟಿ ಬ್ಯಾಂಕ್ ಲೋನ್ ವಂಚನೆ ಕೇಸ್ – ಇಡಿ ವಿಚಾರಣೆಗೆ ಹಾಜರಾದ ಅನಿಲ್ ಅಂಬಾನಿ

ಈ ನಿಲ್ದಾಣದಲ್ಲಿ ಆರಂಭಿಕ ಹಂತದಲ್ಲಿ ಸಣ್ಣ ವಿಮಾನಗಳ ಕಾರ್ಯಾಚರಣೆ ಮಾಡಲಾಗುವುದು. ಆ ಭೂಮಿಯಲ್ಲಿ ಮುಂದೆ ನಿಲ್ದಾಣದ ವಿಸ್ತರಣೆಗೆ ಅವಕಾಶವೂ ಇರಬೇಕು. ಅಂತಹ ಜಾಗ ಗುರುತಿಸುವಂತೆ ಸೂಚಿಸಲಾಗಿದೆ. ರಾಯಚೂರು, ಕುಶಾಲನಗರ ಹಾಗೂ ಹಾಸನದಲ್ಲಿ ಏರ್‌ಸ್ಟ್ರಿಪ್‌ಗಳ ನಿರ್ಮಾಣಕ್ಕೆ ಯಾವುದೇ ಬಿಡ್ ಸ್ವೀಕಾರ ಆಗಿಲ್ಲ ಎಂದು ಸ್ಟಷ್ಟಪಡಿಸಿದ್ದಾರೆ.

Share This Article