ಐಪಿಎಲ್‌ನಲ್ಲಿ 200 ವಿಕೆಟ್ – ಭುವಿ ಮೊದಲ ವೇಗಿ

1 Min Read

– ಈ ಮೈಲಿಗಲ್ಲು ತಲುಪಿದ 2ನೇ ಬೌಲರ್

ಬೆಂಗಳೂರು: ಐಪಿಎಲ್ (IPL) ಇತಿಹಾಸದಲ್ಲೇ 200 ವಿಕೆಟ್ ಕಬಳಿಸಿದ ಮೊದಲ ವೇಗದ ಬೌಲರ್ (Fast Bowler) ಎಂಬ ದಾಖಲೆಯನ್ನು ಭುವನೇಶ್ವರ್ ಕುಮಾರ್  (Bhuvneshwar Kumar) ಬರೆದಿದ್ದಾರೆ.

ಚಿನ್ನಸ್ವಾಮಿ ಮೈದಾನದಲ್ಲಿ (Chinnaswamy Stadium) ಭಾನುವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧದ ಪಂದ್ಯದಲ್ಲಿ ಆಯುಷ್ ವಿಕೆಟ್ ಕಬಳಿಸುವ ಮೂಲಕ ಭುವಿ ಈ ದಾಖಲೆಗೆ ಪಾತ್ರರಾದರು. ಟೂರ್ನಿ ಇತಿಹಾಸದಲ್ಲೇ 200 ವಿಕೆಟ್ ಮೈಲುಗಲ್ಲು ತಲುಪಿದ 2ನೇ ಬೌಲರ್ ಎಂಬ ದಾಖಲೆ ಭುವಿ ಪಾಲಾಗಿದೆ.

ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ 224 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಭುವಿ ಈಗ 200 ವಿಕೆಟ್‌ಗಳೊಂದಿಗೆ ಈ ಕ್ಲಬ್‌ಗೆ ಸೇರಿದ್ದಾರೆ. 2011ರಿಂದ ಐಪಿಎಲ್‌ನಲ್ಲಿ ಆಡುತ್ತಿರುವ ಭುವಿ ಒಟ್ಟು 3 ತಂಡ ಪ್ರತಿನಿಧಿಸಿದ್ದಾರೆ. 2011ರಿಂದ ಪುಣೆ ತಂಡದ ಪರ 3 ವರ್ಷ ಆಡಿದ್ದ ಭುವಿ, 2014ರಿಂದ 2024ರವರೆಗೂ ಹೈದರಾಬಾದ್ ತಂಡದಲ್ಲಿದ್ದರು. 2025ರಲ್ಲಿ ಆರ್‌ಸಿಬಿ ತಂಡಕ್ಕೆ ಸೇರ್ಪಡೆಗೊಂಡಿದ್ದರು.

ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್ ಪಡೆದವರು:
ಬೌಲರ್ – ಪಂದ್ಯ – ವಿಕೆಟ್
ಚಹಲ್ – 176 – 224
ಭುವನೇಶ್ವರ್ – 192 -202
ನರೇನ್ – 191 – 193
ಚಾವ್ಲಾ – 192 – 192
ಅಶ್ವಿನ್ – 221 – 187

Share This Article