ಭೋಜಪುರಿ ಸಿಂಗರ್ ನಿಶಾಗೆ ಗುಂಡೇಟು- ಆಸ್ಪತ್ರೆಗೆ ದಾಖಲು

Public TV
1 Min Read

ಭೋಜಪುರಿ ಸಿಂಗರ್‌ (Bhojpuri Singer) ನಿಶಾ ಉಪಾಧ್ಯಾಯ (Nisha Upadhyay) ಮೇಲೆ ಲೈವ್ ಶೋ ವೇಳೆ ಗುಂಡಿನ (Bullet) ದಾಳಿ ನಡೆದಿದೆ. ಬಿಹಾರದ ಪಾಟ್ನ ಬಳಿ ಖಾಸಗಿ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ನಿಶಾ ವೇದಿಕೆ ಏರಿ ಹಾಡು ಹಾಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಬಂದೂಕಿನ ಸದ್ದು ಕೇಳಿ ಬಂದಿದೆ. ಏನಾಯ್ತು ಎಂದು ನೋಡುವಷ್ಟರಲ್ಲಿ ಆಕೆಯ ಎಡಗಾಲಿನ ತೊಡೆಗೆ ಗುಂಡು ತಗುಲಿದೆ.

ಬಿಹಾರದ ಪಾಟ್ನದಲ್ಲಿ ಖಾಸಗಿ ಕಾರ್ಯಕ್ರಮವೊಂದಕ್ಕೆ ಲೈವ್ ಶೋ ನೀಡಲು ಗಾಯಕಿ ನಿಶಾ ಭಾಗಿಯಾಗಿದ್ದರು. ಈ ಕಾರ್ಯಕ್ರಮ ನಡುವೆ, ಸ್ಥಳೀಯ ಜನರು ಸಂಭ್ರಮದಲ್ಲಿ ಗುಂಡು ಹಾರಿಸಲು ಪ್ರಾರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಗಾಯಕಿ ನಿಶಾ ಕಾಲಿಗೆ ಗುಂಡು ತಗುಲಿದೆ ಎಂದು ತಿಳಿದುಬಂದಿದೆ. ಗುಂಡಿನ ದಾಳಿಗೆ ಒಳಗಾದ ಗಾಯಕಿಯನ್ನು ಪಾಟ್ನಾದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಗಾಯಕಿ ನಿಶಾ ಈಗ ಚೇತರಿಸಿಕೊಂಡಿದ್ದಾರೆ. ಆಸ್ಪತ್ರೆ ಬೆಡ್ ಮೇಲೆಯೇ ಮಾಧ್ಯಮಗಳ ಜೊತೆ ಘಟನೆ ಬಗ್ಗೆ ಮಾತನಾಡಿದ್ದಾರೆ. ಗುಂಡೇಟಿನಿಂದ ಗಾಯಕಿ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಸದ್ಯ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ. ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದ್ದರಿಂದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ:ಸಮಂತಾರನ್ನು ಫೇವರೇಟ್ ಗರ್ಲ್ ಎಂದ ‘ಲೈಗರ್’ ಹೀರೋ

ಗುಂಡಿನ ದಾಳಿಗೆ ಕೆಲ ನಿಮಿಷಗಳ ಮೊದಲು ನಿಶಾ ಕಾರ್ಯಕ್ರಮದಲ್ಲಿ ಡ್ರಮ್ ಬಾರಿಸುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಈ ಘಟನೆಗೆ ಸಂಬಂಧಿಸಿ, ಯಾವುದೇ ಲಿಖಿತ ದೂರು ದಾಖಲಾಗಿಲ್ಲ ಎಂದು ಹೇಳಲಾಗುತ್ತಿದೆ. ಗುಂಡಿನ ದಾಳಿ ಹೇಗೆ ನಡೆದಿದೆ ಮತ್ತು ಗುಂಡಿನ ದಾಳಿಯಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದರ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ನಿಶಾ ಉಪಾಧ್ಯಾಯ ಬಿಹಾರದ ಖ್ಯಾತ ಗಾಯಕಿ ನಿಶಾ, ‘ಲೇ ಲೇ ಆಯೆ ಕೋಕಾ ಕೋಲಾ’, ‘ನವಕರ್ ಮಂತ್ರ’, ‘ಧೋಲಿದಾ ಧೋಲ್ ರೇ ವಾಗಡ್’ ಮತ್ತು ‘ಹಸಿ ಹಸಿ ಜಾನ್ ಮರೇಲಾ’ ಹಾಡಿರುವ ಜನಪ್ರಿಯ ಗೀತೆಗಳಾಗಿದೆ.

Share This Article