ರಾಯಣ್ಣನನ್ನು ನಡುರಸ್ತೆಯಲ್ಲಿ ನಿಲ್ಲಿಸಿದವರು ಬಿಎಸ್‍ವೈ ಬಗ್ಗೆ ಮಾತಾಡಬೇಕಿಲ್ಲ – ಈಶ್ವರಪ್ಪ ವಿರುದ್ಧ ಭೀಮಾಶಂಕರ್ ಪಾಟೀಲ್ ಕಿಡಿ

Public TV
1 Min Read

ದಾವಣಗೆರೆ: ಸಂಗೊಳ್ಳಿರಾಯಣ್ಣರನ್ನು ನಡುರಸ್ತೆಯಲ್ಲಿ ನಿಲ್ಲಿಸಿದವರು ನೀವು, ಯಡಿಯೂರಪ್ಪನವರ ಬಗ್ಗೆ ಮಾತನಾಡಿದರೆ ಹಾದಿ ಬೀದಿಯಲ್ಲಿ ವಿಚಾರಿಸಬೇಕಾಗುತ್ತದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಭೀಮಾಶಂಕರ್ ಪಾಟೀಲ್ ಕಿಡಿಕಾರಿದ್ದಾರೆ.

ನಗರದ ರೇಣುಕಾ ಮಂದಿರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಪಕ್ಷದೊಳಗಿನ ಕುತಂತ್ರಿಗಳು ಗ್ರಾಮಪಂಚಾಯಿತಿ ಗೆಲ್ಲಲು ಆಗದವರು ಯಡಿಯೂರಪ್ಪನವರ ಬಗ್ಗೆ ಮಾತನಾಡುತ್ತಾರೆ ಅಷ್ಟೇ. ಇನ್ನು ಮುಂದೆ ಬಿಎಸ್‍ವೈ ಬಗ್ಗೆ ಮಾತನಾಡಿದರೆ ನಡು ರಸ್ತೆಯಲ್ಲಿ ನಿಲ್ಲಿಸುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದನ್ನು ಓದಿ: ನೀನೊಬ್ಬ ನಕಲಿ, ಢೋಂಗಿ ಹೋರಾಟಗಾರ- ಭೀಮಾಶಂಕರ್ ಪಾಟೀಲ್‍ಗೆ ಕಟೀಲ್ ಆಪ್ತನಿಂದ ಎಚ್ಚರಿಕೆ

ಕೇಂದ್ರದ ನಾಯಕರಿಗೆ ಬದ್ಧತೆ ಇದ್ದರೆ ಯಡಿಯೂರಪ್ಪ ನೇತೃತ್ವದಲ್ಲಿ ಕೆಲಸ ಮಾಡಲಿ. ಕೇಂದ್ರ ಸರ್ಕಾರ ರಾಜ್ಯಕ್ಕೆ ಒಂದು ಪೈಸೆ ಕೊಟ್ಟಿಲ್ಲ. ಯಾವ ಉದ್ದೇಶಕ್ಕೆ ಕೇಂದ್ರ ಈ ರೀತಿ ಮಾಡುತ್ತಿದೆ ಗೊತ್ತಿಲ್ಲ. ನಾವು ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತರು ಭಿಕ್ಷೆ ಬೇಡಿಯಾದರೂ ಉತ್ತರ ಕರ್ನಾಟಕದ ಸಂತ್ರಸ್ತರಿಗೆ ಪರಿಹಾರ ಕೊಡುತ್ತೇವೆ. ಸ್ವಾಭಿಮಾನಕ್ಕೆ ಧಕ್ಕೆ ತಂದರೆ ನಾವು ಬಿಡುವುದಿಲ್ಲ. ಯಡಿಯೂರಪ್ಪನವರ ವಿಚಾರಕ್ಕೆ ಬಂದರೆ ಸುಟ್ಟು ಭಸ್ಮರಾಗುತ್ತೀರಿ. ಕೇಂದ್ರದವರೆಗೆ ಮುಟ್ಟಿ ನೋಡಿಕೊಳ್ಳಬೇಕು ಈ ರೀತಿ ಮಾಡುತ್ತೇವೆ ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಅವರ ಆಡಳಿತ ವಿಚಾರದಲ್ಲಿ ಮೂಗು ತೂರಿಸಿ ಅವರಿಗೆ ಭಂಗ ತರುತ್ತಿದ್ದಾರೆ. ಧರ್ಮವನ್ನು ಕಾಪಾಡಿದವರು ಬಿಎಸ್‍ವೈ, ಅವರಿಗೆ ಭಂಗ ತರುವ ಕೆಲಸ ಮಾಡುತ್ತಿದ್ದಾರೆ. ಲುಂಗಿ ಕಟ್ಟಲು ಬರದವರು ರಾಜಕೀಯ ಮಾಡುತ್ತಿದ್ದಾರೆ. ಯಡಿಯೂರಪ್ಪನವರಿಗೆ ತೊಂದರೆಕೊಟ್ಟು ತೊಡೆ ತಟ್ಟಿದರೆ ನಾವು ಕೂಡ ತೊಡೆ ತಟ್ಟಲು ಸಿದ್ಧ ಎಂದು ಬಹಿರಂಗವಾಗಿ ಸವಾಲ್ ಹಾಕಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಬೇಳೆ ಬೇಯಿಸಿಕೊಳ್ಳಲು ಯಡಿಯೂರಪ್ಪನವರ ಹೆಸರು ಬಳಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

Share This Article
Leave a Comment

Leave a Reply

Your email address will not be published. Required fields are marked *