– ತಿಂಗಳ ಮಗು ಜೊತೆ ಮೇಲ್ಛಾವಣಿ ಏರಿದ ತಾಯಿ
– ಜೆಟ್ಟೂರಿನಲ್ಲಿ ಕೊಟ್ಟಿಗೆ ನೀರು ನುಗ್ಗಿ 40 ಎತ್ತುಗಳು ಸಾವು
ಕಲಬುರಗಿ: ಮಹಾರಾಷ್ಟ್ರದಲ್ಲಿ ಮಹಾಮಳೆ ಅಬ್ಬರಿಸುತ್ತಿದೆ. ಮಹಾರಾಷ್ಟ್ರದ (Maharashtra) ಜಲಾಶಯಗಳಿಂದ ಅಪಾರ ಪ್ರಮಾಣದ ನೀರನ್ನು ಭೀಮಾ ನದಿಗೆ (Bheema River) ಬಿಡಲಾಗ್ತಿದೆ. ಪರಿಣಾಮ ರಾಜ್ಯದಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ. ಕಲಬುರಗಿಯಲ್ಲಿ ಹರಿಯುವ ಭೀಮೆ ಅಪಾಯದ ಮಟ್ಟ ಮೀರಿದೆ. ಕಂಡಕಂಡಲೆಲ್ಲ ಭೀಮೆಯ ನೀರು ನುಗ್ಗುತ್ತಿದೆ. ಸಿಕ್ಕಿದೆಲ್ಲವನ್ನು ಅಪೋಷನ ಪಡೆಯುತ್ತಿದೆ.
ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಮವನ್ನ ಭೀಮಾ ನದಿಯ ನೀರು ಆವರಿಸಿದೆ. ಭೀಮಾ ನದಿ ಜೊತೆ ಕಾಗಿಣಾ ನದಿಯಲ್ಲೂ ಪ್ರವಾಹ (Flood) ಉಂಟಾಗಿದ್ದು, ಮಳಖೇಡ ತಾಂಡಾದ ಹಲವು ಮನೆಗಳಿಗೆ ನೀರು ನುಗ್ಗಿದೆ. ಗ್ರಾಮಕ್ಕೆ ಏಕಾಏಕಿ ರಭಸವಾಗಿ ನೀರು ನುಗ್ಗಿದ್ದರಿಂದ ಕಂಗಾಲಾದ ಗ್ರಾಮಸ್ಥರು ಮನೆಯ ಮೇಲ್ಛಾವಣಿ ಮೇಲೆ ಆಶ್ರಯ ಪಡೆದುಕೊಂಡಿದ್ದಾರೆ. ಮನೆಯಲ್ಲಿರುವ ವಸ್ತುಗಳೆಲ್ಲ ನೀರು ಪಾಲಾಗಿದೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ನಲ್ಲಿ ಸರ್ಕಾರ ಧಾರ್ಮಿಕ ಕ್ಷೇತ್ರಕ್ಕೆ ಧಕ್ಕೆ ಮಾಡಿದೆ: ನಿಖಿಲ್ ಕುಮಾರಸ್ವಾಮಿ
ತಿಂಗಳ ಮಗು ಜೊತೆ ಮೇಲ್ಛಾವಣಿ ಏರಿದ ತಾಯಿ
ಒಂದು ತಿಂಗಳ ಕಂದಮ್ಮನನ್ನು ಹೊತ್ತು ಕಳೆದೆರಡು ದಿನಗಳಿಂದ ಮೇಲ್ಛಾವಣಿಯಲ್ಲಿ ತಾಯಿ ಆಶ್ರಯ ಪಡೆದಿದ್ದಾರೆ. ಮಳಖೇಡ ಗ್ರಾಮದ ಶೋಭಾ ಎಂಬಾಕೆ ಮಡಿಲಲ್ಲಿ ಒಂದು ತಿಂಗಳ ಮಗು ಹಿಡಿದು ದಿನ ಕಳೆಯುವಂತಾಗಿದೆ. ಜೊತೆಗೆ ಇತರೆ ಮಕ್ಕಳು ಸಹ ಮನೆಯ ಚಾವಣಿ ಏರಿದ್ದಾರೆ. ನೆರವಿಗಾಗಿ ಮೊರೆ ಇಡ್ತಿದ್ದಾರೆ. ಕಣ್ಣು ಹಾಯಿಸಿದ ಕಡೆಯಲ್ಲೆಲ್ಲ ಬರೀ ನೀರೇ ನೀರು ಇದ್ದು.. ಯಾವ ಕಡೆ ಹೋಗಬೇಕೆಂದು ತಿಳಿಯದೇ ಗ್ರಾಮಸ್ಥರು ಕಂಗಾಲಾಗಿದ್ದಾರೆ. 2 ದಿನ ಕಳೆದ್ರೂ ಸಹ ತಾಯಿಮಗುವಿನ ರಕ್ಷಣೆ ಯಾವೊಬ್ಬ ಅಧಿಕಾರಿಗಳು ಬಂದಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ನಡೆಯುತ್ತಿದೆ ಅಕ್ರಮ ಗಣಿಗಾರಿಕೆ – ಸುತ್ತಮುತ್ತಲಿನ ಪ್ರದೇಶದ ಜನಕ್ಕೆ ಕಾಡ್ತಿದೆ ಶ್ವಾಸಕೋಶದ ಸಮಸ್ಯೆ!
ಭೀಮೆ ಅಬ್ಬರಕ್ಕೆ ಕಟ್ಟಿಸಂಗಾವಿ ಸೇತುವೆ ಮುಳುಗಡೆ
ಮಹಾರಾಷ್ಟ್ರದಿಂದ ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಬಿಟ್ಟಿರುವುದರಿಂದ ಕಲಬುರಗಿ ಜಿಲ್ಲೆಯಲ್ಲಿ ನೆರೆ ಪರಿಸ್ಥಿತಿ ಉಲ್ಬಣಿಸಿದೆ. ಜೇವರ್ಗಿ ತಾಲ್ಲೂಕಿನ ಕಟ್ಟಿಸಂಗಾವಿ ಹೊಸ ಸೇತುವೆ ಸಹ ಮುಳುಗಡೆ ಆಗಿದೆ. ಸೇತುವೆಯ ಮೇಲಿಂದ ಭೀಮಾ ನದಿ ನೀರು ಹರಿಯುತ್ತಿದೆ. ಪರಿಣಾಮ ಬೀದರ್ – ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಸಂಚಾರ ಸಂಪೂರ್ಣ ಬಂದ್ ಆಗಿದೆ. ಇದರಿಂದಾಗಿ ವಾಹನ ಸವಾರರ ಪರದಾಡುವಂತಾಗಿದೆ. ಇದನ್ನೂ ಓದಿ: Kolar | ಕಿಡಿಗೇಡಿಗಳಿಂದ ಮನೆಗೆ ಬೆಂಕಿ – 4 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ
ಕಲಬುರಗಿಯ ಭೀಮಾ ನದಿಯಲ್ಲಿ ಕ್ಷಣಕ್ಷಣಕ್ಕೂ ಪ್ರವಾಹ ಹೆಚ್ಚಾಗುತ್ತಿದೆ. ಭೀಮಾ ನದಿ ರಭಸಕ್ಕೆ ಬ್ರೀಡ್ಜ್ ಪಕ್ಕದ ಜಮೀನುಗಳು ಜಲಮಯವಾಗಿದೆ. ಜೇವರ್ಗಿ ತಾಲೂಕಿನ ಚಿಮ್ಮನಳ್ಳಿ ಬ್ರೀಡ್ಜ್ ಕಂ ಬ್ಯಾರೇಜ್‌ಗೆ ಭಾರೀ ನಷ್ಟವಾಗಿದೆ. ಪ್ರವಾಹ ನಿಂತರು ಚಿಮ್ಮನಳ್ಳಿ ಬ್ರಿಡ್ಜ್‌ನಲ್ಲಿ ಹನಿ ನೀರು ನಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ರಾಯಚೂರು | ಟೀ ಕುಡಿಯಲು ಅಂಗಡಿಗೆ ತೆರಳಿದ್ದಾಗ ಕುಸಿದ ಛಾವಣಿ – ವೃದ್ಧೆ ಸಾವು
ಭೀಮೆ ಜೊತೆ ಕಾಗಿಣಾ ನದಿ ಬೋರ್ಗರೆತ
ಭೀಮ ನದಿಯ ಅಬ್ಬರ ಜೊತೆ ಸೇಡಂನ ಕಾಗಿಣಾ ನದಿಯಲ್ಲೂ ಪ್ರವಾಹ ಸ್ಥಿತಿ ಉಲ್ಬಣಿಸಿದೆ. ಪರಿಣಾಮ ಸೇಡಂನ ಮಳಖೇಡದ ಉತ್ತರಾದಿಮಠ ಸಂಪೂರ್ಣ ಜಲಾವೃತವಾಗಿದೆ. ಜಯತೀರ್ಥರ ಮೂಲವೃಂದಾವನ ಸಂಪೂರ್ಣ ಮುಳುಗಡೆ ಆಗಿದೆ. ಉತ್ತರಾಧಿಮಠದ ಒಂದು ಮಹಡಿ ಸಂಪೂರ್ಣ ಜಲಮಯವಾಗಿದೆ. ಹೀಗಾಗಿ ಮಠದ ಎರಡನೇ ಮಹಡಿಯಲ್ಲಿ ಜಾನುವಾರು ಸಮೇತ ಅರ್ಚಕರು ವಾಸವಾಗಿದ್ದಾರೆ. ಅಫಜಲಪುರ, ಜೇವರ್ಗಿ, ಚಿತ್ತಾಪುರ ಹಾಗು ಸೇಡಂ ತಾಲೂಕುಗಳ ಜನರು ಕಂಗಾಲಾಗಿದ್ದಾರೆ.
40 ಎತ್ತುಗಳು ಸಾವು
ಇನ್ನು ಚಿಂಚೋಳಿ ತಾಲ್ಲೂಕಿನ ಜೆಟ್ಟೂರ್ ಗ್ರಾಮದಲ್ಲಿ ಹಳ್ಳದ ನೀರು ಕೊಟ್ಟಿಗೆ ನುಗ್ಗಿ 40 ಎತ್ತುಗಳು ಸಾವನ್ನಪ್ಪಿದೆ. ತಡರಾತ್ರಿ ದನದ ಕೊಟ್ಟಿಗೆಗೆ ನುಗ್ಗಿ ದುರಂತ ಸಂಭವಿಸಿದೆ. ಕೊಟ್ಟಿಗೆಯಲ್ಲಿ ಎತ್ತುಗಳು ಕಟ್ಟಿ ಹಾಕಿದ್ದರಿಂದ ಹೊರ ಹೋಗೋಕೆ ಆಗದೇ ಪ್ರಾಣ ಬಿಟ್ಟಿವೆ.