ಮಗಳ ಹೆಸರು ಬದಲಿಸಿದ ದುನಿಯಾ ವಿಜಯ್

Public TV
1 Min Read

ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್ (Duniya Vijay) ಪುತ್ರಿ ಮೋನಿಕಾ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ದುನಿಯಾ ವಿಜಯ್ ಮತ್ತು ರಚಿತಾ ರಾಮ್ (Rachita Ram) ಕಾಂಬಿನೇಷನ್ ಸಿನಿಮಾ ಮುಹೂರ್ತ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿದೆ. ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವಾಗಲೇ ಮಗಳ ಹೆಸರನ್ನು ಬದಲಿಸಿದ್ದಾರೆ. ಹೆಸರು ಬದಲಿಸಿದ್ದೇಕೆ? ಎಂದು ಕಾರಣ ಕೂಡ ಬಿಚ್ಚಿಟ್ಟಿದ್ದಾರೆ.

ದುನಿಯಾ ವಿಜಯ್ 29ನೇ ಚಿತ್ರಕ್ಕೆ ‘ಕಾಟೇರ’ ಚಿತ್ರದ ಕಥೆಗಾರ ಜಡೇಶ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಮೂಲಕನೇ ಮಗಳನ್ನು ದುನಿಯಾ ವಿಜಯ್ ಇಂಡಸ್ಟ್ರಿಗೆ ಪರಿಚಯ ಮಾಡಿಸುತ್ತಿದ್ದಾರೆ. ಮೋನಿಕಾ ಬದಲು ರಿತಾನ್ಯಾ ಎಂದು ಹೆಸರಿಟ್ಟಿದ್ದಾರೆ. ಅದಕ್ಕೆ ಕಾರಣವೇನು ಎಂಬುದುನ್ನು ರಿತಾನ್ಯಾ (Rithanya Vijay) ತಿಳಿಸಿದ್ದಾರೆ.

ನಾನು ಮೋನಿಕಾ, ನನ್ನ ತಂಗಿ ಮೋನಿಷಾ ಎಲ್ಲರಿಗೂ ಒಂದು ಕನ್ಫೂಷನ್. ಅದರಿಂದ ಕೆಲವು ಬಾರಿ ನನ್ನ ವಿಡಿಯೋಗಳಿಗೆ ತಂಗಿಯ ಹೆಸರು ಹಾಕಿದ್ದು ಇದೆ. ಆ ಗೊಂದಲ ಬೇಡ ಅಂತ ನಾವು ರಿತಾನ್ಯಾ ಹೆಸರನ್ನು ಸೆಲೆಕ್ಟ್ ಮಾಡಿಕೊಂಡಿದ್ದೇವೆ ಎಂದು ವಿಜಯ್ ಪುತ್ರಿ ಮಾತನಾಡಿದ್ದಾರೆ.

ದುನಿಯಾ ವಿಜಯ್ ಡಬಲ್ ಖುಷಿಯಲ್ಲಿದ್ದಾರೆ. ಸಿನಿಮಾರಂಗಕ್ಕೆ ಬಂದು 30 ವರ್ಷ ಪೂರೈಸಿದ ಬೆನ್ನಲ್ಲೇ ಮಗಳು ಕೂಡ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:‘ವಿಶ್ವಂಭರ’ ಶೂಟಿಂಗ್ ಸ್ಥಳಕ್ಕೆ ಪವನ್ ಕಲ್ಯಾಣ್: ಬರಮಾಡಿಕೊಂಡ ತ್ರಿಷಾ

ರಿತಾನ್ಯಾ ವಿಜಯ್ ಅವರು ಅನುಪಮ್ ಖೇರ್ ಆಕ್ಟಿಂಗ್ ಸ್ಕೂಲ್‌ನಲ್ಲಿ ತರಬೇತಿ ಪಡೆದು ನಟನೆಯ ಅಖಾಡಕ್ಕೆ ಇಳಿದಿದ್ದಾರೆ. ಸಕಲ ತಯಾರಿ ಮಾಡಿಕೊಂಡು ತಂದೆ ತೋರಿಸಿಕೊಟ್ಟ ದಾರಿಯಲ್ಲಿ ಯುವ ನಟಿ ಹೆಜ್ಜೆ ಇಡುತ್ತಿದ್ದಾರೆ. ತಂದೆ ದುನಿಯಾ ವಿಜಯ್‌ರಂತೆಯೇ ಚಿತ್ರರಂಗದಲ್ಲಿ ಗೆದ್ದು ಬೀಗುತ್ತಾರಾ ಎಂದು ಕಾದುನೋಡಬೇಕಿದೆ.

Share This Article