ರಶ್ಮಿಕಾ ಕನ್ನಡದವಳಲ್ಲ ಅಂದ್ರು ಅವಳನ್ನ ನಾವ್ ಬಿಡೋಲ್ಲ: ಭಾವನಾ ರಾಮಣ್ಣ

Public TV
1 Min Read

ನಟಿ ರಶ್ಮಿಕಾ (Rashmika Mandanna) ಏನೇ ಹೇಳಲಿ, ನಮಗೆ ಅವಳು ಕನ್ನಡದವಳು. ಅವಳ ಬಗ್ಗೆ ಹೆಮ್ಮೆ ಇದೆ. ಜನ ಎಲ್ಲರನ್ನೂ ಕನ್ನಡದವರು ಅಂತಾನೇ ಕರೆಯೋದು ಎಂದು ಭಾವನಾ ರಾಮಣ್ಣ (Bhavana Ramanna) ಹೇಳಿದ್ದಾರೆ.

ರಶ್ಮಿಕಾ ಅವರು, ಕೊಡವ ಸಮಾಜದಿಂದ ಬಂದ ಮೊದಲ ನಟಿ ಎಂದು ಇತ್ತೀಚೆಗೆ ಹೇಳಿದ್ದರು. ಈ ವಿಚಾರವಾಗಿ `ಪಬ್ಲಿಕ್ ಟಿವಿ’ಗೆ ಪ್ರತಿಕ್ರಿಯೆ ನೀಡಿದ ಭಾವನ ಅವರು, ರಶ್ಮಿಕಾ ಸಾಧನೆ ಖಂಡಿತಾ ಇದೆ. ಅವಳು ಕನ್ನಡದವಳಲ್ಲ ಅಂದ್ರೂ ಅವ್ರನ್ನ ನಾವ್ ಬಿಡೋದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ರಶ್ಮಿಕಾ ಹೇಳಿಕೆ ವಿವಾದ | ಕೊಡವ ಸಮುದಾಯ ಎಲ್ಲರನ್ನೂ ಬೆಂಬಲಿಸಿದೆ: ನಟಿ ಪ್ರೇಮ

ನಟಿ ಭಾವನಾ ರಾಮಣ್ಣ ಕೃತಕ ಗರ್ಭಧಾರಣೆ ಮೂಲಕ ಮಗು ಪಡೆಯಲು ಮುಂದಾಗಿದ್ದಾರೆ. ಇದೀಗ ಆರು ತಿಂಗಳ ಗರ್ಭಿಣಿ ಆಗಿರುವ ಭಾವನ ತಾಯಿ ಆಗೋದು ಪ್ರತಿಯೊಬ್ಬ ಹೆಣ್ಣಿನ ಜನ್ಮಸಿದ್ಧ ಹಕ್ಕು, ಮಕ್ಕಳನ್ನ ಪಡೆಯುವುದಕ್ಕಾಗಿಯೇ ಮದುವೆ ಆಗಬೇಕಿಲ್ಲ. ಮನೆ, ಸಂಸಾರ, ಮಕ್ಕಳು ಅನ್ನೋದಕ್ಕೆ ಅಷ್ಟೇ ಹೆಣ್ಣು ಸೀಮಿತವಾಗದೇ ಎಲ್ಲಾ ವರ್ಗದಲ್ಲೂ ಮಹಿಳೆ ಸಬಲರಾಗಿ ಬೆಳೆದಿದ್ದಾರೆ. ಒಬ್ಬಂಟಿ ಜೀವನ ನಡೆಸುವ ಮಹಿಳೆಯರಿಗೆ ಕಲಾವಿದರಿಗೆ ಈ ಪ್ರಕ್ರಿಯೆ ನೆರವಾಗಲಿದೆ ಎಂದಿದ್ದಾರೆ.

ಸ್ವಾಭಾವಿಕವಾಗಿ ಮಕ್ಕಳನ್ನ ಪಡೆಯೋದು ಬೇರೆ. ಆದ್ರೆ ಈ ಪ್ರಕ್ರಿಯೆಗೆ ಒಳಪಡಬೇಕಾದ್ರೆ ನಾನು ಕೂಡಾ ಸಾಕಷ್ಟು ಮಾನಸಿಕವಾಗಿ ಯೋಚನೆ ಮಾಡಿದ್ದೀನಿ. ನಾನು ಮದುವೆ ಯಾಕ್ ಆಗ್ಲಿಲ್ಲ ಅನ್ನೋದಕ್ಕೆ ಕಾರಣಗಳು ಸಾಕಷ್ಟಿವೆ. ಆದ್ರೆ ಈ ವಿಚಾರ ಅಂತಾ ಬಂದಾಗ ಕುಟುಂಬಸ್ಥರು ಸ್ನೇಹಿತರು ಸಲಹೆಗಳನ್ನ ನೀಡಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕೊಡವ ಕಮ್ಯೂನಿಟಿಯಿಂದ ಇಂಡಸ್ಟ್ರಿಗೆ ಬಂದಿದ್ದು ನಾನೇ ಫಸ್ಟ್ – ರಶ್ಮಿಕಾ ಮತ್ತೊಂದು ಯಡವಟ್ಟು 

Share This Article