ಜನಾರ್ದನ ರೆಡ್ಡಿ ಒಬ್ಬ ನೀಚ, ರಾಕ್ಷಸ: ಏಕವಚನದಲ್ಲೇ ಭರತ್ ರೆಡ್ಡಿ ವಾಗ್ದಾಳಿ

2 Min Read

– ಬಳ್ಳಾರಿಯಲ್ಲಿ ರಾಕ್ಷಸರ ಅಟ್ಟಹಾಸ ನಡೆಯುತ್ತಿದೆ: ಶಾಸಕ ಆಕ್ರೋಶ

ಬಳ್ಳಾರಿ: ಜನಾರ್ದನ ರೆಡ್ಡಿ (Janardhan Reddy) ಒಬ್ಬ ನೀಚ, ರಾಕ್ಷಸ. ಅದಕ್ಕೆ ಅಂತ್ಯ ಮಾಡಿಯೇ ಮಾಡ್ತೇವೆ ಎಂದು ಶಾಸಕ ನಾರಾ ಭರತ್ ರೆಡ್ಡಿ (Bharat Reddy) ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಬ್ಯಾನರ್ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಹತ್ಯೆಯಾದ ವಿಚಾರವಾಗಿ ಮಾತನಾಡಿ, ನಾಳೆ ವಾಲ್ಮೀಕಿ ಕಾರ್ಯಕ್ರಮ ಮಾಡುತ್ತೇವೆ. ರಾಜಶೇಖರ್ ಆತ್ಮಕ್ಕೆ ಶಾಂತಿ ಸಿಗಲಿ. ಅವರು ಇಂದಿನವರೆಗೂ ನಿಜ ಹೇಳಿದವರಲ್ಲ. ಅವನು ಜೀವಮಾನದಲ್ಲಿ ಇಂತಹದೇ ಕೆಲಸ ಮಾಡಿಕೊಂಡು ಬಂದಿದ್ದಾನೆ. ಅವರು ಹೇಳಿದ್ದಕ್ಕೆಲ್ಲ ಪ್ರತಿಕ್ರಿಯಸಿಲ್ಲ. ನಾವ್ಯಾರು ಜನಾರ್ದನ ರೆಡ್ಡಿ ಮನೆ ಮುಂದೆ ಬ್ಯಾನರ್ ಹಾಕಿಲ್ಲ. ಅವನೊಬ್ಬ ನೀಚ. ಅವರ ಮೇಲೆ 3 ಎಫ್‌ಐಆರ್ ದಾಖಲಾಗಿದೆ. ಅವರ ಮೇಲೆ ತನಿಖೆ ಆಗುತ್ತೆ. ತನಿಖೆ ಬಳಿಕ ಮೇಲೆ ಮಾತನಾಡುತ್ತೇನೆ. ನ್ಯಾಯ ದೇವರು ಕೊಡುತ್ತಾನೆ. ಅವರು ಹೇಡಿಗಳು, ರೆಡ್ಡಿ ಅವನು ರಾಕ್ಷಸ. ಅದಕ್ಕೆ ಅಂತ್ಯ ಮಾಡೇ ಮಾಡ್ತೇವೆ. ನಾಳೆ ನಡೆಯುವ ಕಾರ್ಯಕ್ರಮ ನಡೆಯಬಾರದು ಎಂಬ ದುರುದ್ದೇಶ ಇದೆ. ಅವನಿಗೆ ಶಿಕ್ಷೆ ಆಗೇ ಆಗುತ್ತೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಜನಾರ್ದನ್ ರೆಡ್ಡಿ ಮೇಲೆ ಗುಂಡು ಹಾರಿತು, ಒಬ್ಬ ಪೆಟ್ರೋಲ್ ಬಾಂಬ್ ಎಸೆದ: ಶ್ರೀರಾಮುಲು ಗಂಭೀರ ಆರೋಪ

ಬ್ಯಾನರ್ ಹಾಕುವ ಸಂಬಂಧ ಬಳ್ಳಾರಿಯಲ್ಲಿ ಗಲಾಟೆ ನಡೆದಿದೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ನಾನು ಕೇಸ್ ಡೈವರ್ಟ್ ಮಾಡಲು ಹೋಗಲ್ಲ. ನಮ್ಮ ಕಾರ್ಯಕರ್ತ, ತಮ್ಮನ ಸಾವಾಗಿದೆ. ನಾವು ದುಃಖದಲ್ಲಿದ್ದೇವೆ. ಬಳ್ಳಾರಿಯಲ್ಲಿ ಮೊದಲಿನಿಂದಲೂ ರಾಕ್ಷಸರ ಅಟ್ಟಹಾಸ ನಡಿತಾ ಇದೆ. ವಾಲ್ಮೀಕಿ ಪುತ್ಥಳಿ ಅನಾವರಣ ಕೆಡಿಸಲು ರಾಕ್ಷಸರು ಮಾಡುತ್ತಾ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಜನಾರ್ದನ ರೆಡ್ಡಿ ಒಬ್ಬ ನೀಚ, ಅವನ ಮನೆ ಮುಂದೆ ಬ್ಯಾನರ್ ಹಾಕಿಲ್ಲ. ರಸ್ತೆಯಲ್ಲಿ ಬ್ಯಾನರ್ ಹಾಕಲಾಗಿದೆ. ಅಕ್ರಮ ಗಣಿಗಾರಿಕೆ ಇಶ್ಯೂ ಡೈವರ್ಟ್ ಮಾಡಲು ಜನಾರ್ದನ ರೆಡ್ಡಿ ಇಂತಹ ನೀಚ ಕೃತ್ಯಕ್ಕೆ ಇಳಿದಿದ್ದಾನೆ. ಅಂತಹ ರಾಕ್ಷಸರು ಎಷ್ಟು ಜನ ಬಂದರೂ ಏನೂ ಮಾಡಲು ಆಗಲ್ಲ. ಬಳ್ಳಾರಿ ಶಾಂತಿಯುತವಾಗಿ ಇದೆ. ಮೂರು ಎಫ್‌ಐಆರ್ ದಾಖಲಾಗಿವೆ. ಪೊಲೀಸರಿಂದ ತನಿಖೆ ನಡೆದಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮೃತ ಕಾಂಗ್ರೆಸ್ ಕಾರ್ಯಕರ್ತನ ದೇಹ ಹೊಕ್ಕಿರೋದು ಪೊಲೀಸ್ ಬುಲೆಟ್ ಅಲ್ಲ: ಎಸ್‌ಪಿ ಸ್ಪಷ್ಟನೆ

ನಮ್ಮ ಪಕ್ಷದ ರಾಜ್ಯ ನಾಯಕರು, ಹೈಕಮಾಂಡ್, ಡಿ.ಕೆ.ಶಿವಕುಮಾರ್ ನನ್ನ ಜತೆ ಮಾತನಾಡಿದ್ದಾರೆ. ನಾವೆಲ್ಲ ನಿಮ್ಮ ಜತೆ ಇದ್ದೇವೆ, ಯಾವುದಕ್ಕೂ ಕುಗ್ಗಬೇಡ ಎಂದು ಹೇಳಿದ್ದಾರೆ. ನಾಳೆ ನಡೆಯುವ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ನಮ್ಮ ಅಜ್ಜನ ಕಾರ್ಯಕ್ರಮ ಅದ್ದೂರಿಯಾಗಿ ಮಾಡುತ್ತೇವೆ. ಎಷ್ಟೇ ರಾಕ್ಷಸರಿಂದ ಅಡ್ಡಿ ಬಂದರೂ ನಿಲ್ಲಿಸುವುದಿಲ್ಲ ಎಂದು ಸವಾಲು ಹಾಕಿದರು.

Share This Article