ಬಾಗಲಕೋಟೆ: ಭಾರತ್ ಮಾತಾ ಎನ್ನುವುದು ಅವೈಜ್ಞಾನಿಕ ಎಂದು ಎಐಎಂಐಎಂ ರಾಜ್ಯಾಧ್ಯಕ್ಷ ಉಸ್ಮಾನ್ ಘನಿ ಹುಮ್ನಾಬಾದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಾಗಲಕೋಟೆಯ ಇಳಕಲ್‌ನಲ್ಲಿ ಭಾಷಣ ಮಾಡುವಾಗ, ಒಂದು ಮಗುವಿಗೆ ಜನ್ಮ ಕೊಡಲು ಎಷ್ಟು ತಾಯಂದಿರು ಬೇಕು? ಒಬ್ಬರು ತಾಯಿ ಸಾಕಲ್ವಾ? ಹೀಗಿದ್ಮೇಲೆ ಭಾರತ ಮಾತಾ, ಗಂಗಾಮಾತಾ, ಗೋಮಾತಾ, ಎಲ್ಲಿಂದ ಬರ್ತಾರೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ಸಮನ್ವಿ ದಾರುಣ ಸಾವು
ಕಂಡ ಕಂಡವರನ್ನು ತಾಯಿ ಎನ್ನುತ್ತಾ ಹೋದರೆ ಮುಂದೆ ದೇಶದ ಗತಿ ಏನು ಎಂದು ವಿವಾದಾತ್ಮಕವಾಗಿ ಮಾತನಾಡಿದ್ದಾರೆ. ಉಸ್ಮಾನ್ ಘನಿ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಮೀಟೂ ಕೇಸಲ್ಲಿ ಅರ್ಜುನ್ ಸರ್ಜಾಗೆ ರಿಲೀಫ್