ಭಾರತ್ ಮಾತಾ ಕಿ ಜೈ: ಸಲ್ಮಾನ್ ಖಾನ್ ಮಾಡಿದ ಪೋಸ್ಟ್ ವೈರಲ್

Public TV
1 Min Read

ಬಾಲಿವುಡ್ (Bollywood) ನಟ ಸಲ್ಮಾನ್ ಖಾನ್ (Salman Khan) ಮಾಡಿರುವ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚುನಾವಣೆಗೆ ಸಂಬಂಧಿಸಿದಂತೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಸಲ್ಮಾನ್.. ಭಾರತ್ ಮಾತಾ ಕಿ ಜೈ (Bharat Mata Ki Jai) ಎಂದು ಆ ಪೋಸ್ಟ್ ಅನ್ನು ಕೊನೆಗೊಳಿಸಿದ್ದಾರೆ.

ವರ್ಷದ 365 ದಿನವೂ ನಾನು ಜಿಮ್‍್ಗೆ ಹೋಗುತ್ತೇನೆ. ಯಾವುದೇ ಕಾರಣಕ್ಕೂ ತಪ್ಪಿಸೋದಿಲ್ಲ. ಮೇ 20 ರಂದು ತಪ್ಪಿಸದೇ ಮತದಾನ ಮಾಡುತ್ತೇನೆ. ನೀವು ಮಾಡುತ್ತೀರಿ ಅಲ್ಲ.. ತಪ್ಪದೇ ಮತದಾನ ಮಾಡಿ. ಭಾರತ್ ಮಾತೆಗೆ ತೊಂದರೆ ಕೊಡಬೇಡಿ. ಭಾರತ್ ಮಾತಾ ಕಿ ಜೈ ಎಂದು ಅವರು ಪೋಸ್ಟ್ ಮಾಡಿದ್ದಾರೆ.

 

ರಶ್ಮಿಕಾ ಮಂದಣ್ಣ ಭಾರತದ ಅಭಿವೃದ್ದಿ ಬಗ್ಗೆ ಪೋಸ್ಟ್ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಸ್ವತಃ ಪ್ರಧಾನಿ ಮೋದಿ ಅವರೇ ರಶ್ಮಿಕಾಗೆ ಧನ್ಯವಾದಗಳನ್ನು ತಿಳಿಸಿದ್ದರು. ಈ ಬೆನ್ನಲ್ಲೇ ಸಲ್ಮಾನ್ ಪೋಸ್ಟ್ ಭಾರೀ ಮಹತ್ವ ಪಡೆದುಕೊಂಡಿದೆ.

Share This Article