ಗಾಂಧಿ ಕುಟುಂಬದವರೆಲ್ಲಾ ಬಂದರೂ ಏನೂ ಪರಿವರ್ತನೆ ಆಗಲ್ಲ: HDK

Public TV
2 Min Read

ಬೆಂಗಳೂರು: ಭಾರತ್ ಜೋಡೋ (Bharat Jodo) ಯಾತ್ರೆಯಿಂದ ಜೆಡಿಎಸ್ (JDS) ಭದ್ರಕೋಟೆಗೆ ಏನೂ ಆಗಲ್ಲ. ಗಾಂಧಿ ಕುಟುಂಬದ (Family) ಎಲ್ಲಾ ಸದಸ್ಯರು ಬಂದರೂ ಏನೂ ಪರಿವರ್ತನೆ ಆಗಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.

ಜೆಡಿಎಸ್ ಭದ್ರಕೋಟೆಯಲ್ಲಿ ಭಾರತ್ ಜೋಡೋ ಕಾರ್ಯಕ್ರಮ ಹಾಗೂ ಸೋನಿಯಾ, ರಾಹುಲ್ ಗಾಂಧಿ (Rahul Gnadhi) ಪಾದಯಾತ್ರೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಭಾರತ್ ಜೋಡೋದಿಂದ ನಮ್ಮ ಕ್ಷೇತ್ರದ ಮೇಲೆ ಏನೂ ಪರಿಣಾಮ ಬಿರೋದಿಲ್ಲ. ಗಾಂಧಿ ಕುಟುಂಬದ ಎಲ್ಲಾ ಸದಸ್ಯರು ಬಂದರೂ ಏನೂ ಪರಿವರ್ತನೆ ಆಗೊಲ್ಲ. ಜನರ ಸಮಸ್ಯೆ ಬಗ್ಗೆ ಎರಡು ರಾಷ್ಟ್ರೀಯ ಪಕ್ಷಗಳಿಗೆ (National Party) ಕಾಳಜಿ ಇಲ್ಲ. ಇದೆಲ್ಲವೂ ಜನರಿಗೆ ಅರ್ಥವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಲಾವಿದರ ಕೋಟಾದಲ್ಲಿ ಎಂಎಲ್ಸಿ ಆಗಿರೋ ಯೋಗೇಶ್ವರ್‌ಗೆ 50 ಕೋಟಿ ಅನುದಾನ ಹೇಗೆ ಕೊಡ್ತಾರೆ: ನಿಖಿಲ್‌ ಪ್ರಶ್ನೆ

ಜೆಡಿಎಸ್ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಾದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ನಮ್ಮ ಕಾರ್ಯಕರ್ತರ ಮೇಲೆ ಎಫ್‌ಐಆರ್ (FIR) ದಾಖಲು ಆಗಿದೆ. ಯಾರ ಚಿತಾವಣೆ ಎಫ್‌ಐಆರ್ (FIR) ಆಗಿದೆ ಅಂತ ನನಗೆ ಗೊತ್ತಿದೆ. ಘಟನೆ ಬಗ್ಗೆ ಸಂಪೂರ್ಣ ದಾಖಲೆ ನನ್ನ ಬಳಿ ಇದೆ. ಹಿರಿಯ ಅಧಿಕಾರಿಗಳು, ಸಿಎಂಗೆ (Chief Minister) ಈ ಬಗ್ಗೆ ವಿವರಣೆ ಕೊಡ್ತೀನಿ. ಈ ಘಟನೆಗೆ ಯಾರು ಜವಾಬ್ದಾರರೋ ಅವರ ಮೇಲೆ ಕ್ರಮ ಆಗಬೇಕು. ಈ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿದೆ. ಯಾವ ಆಧಾರದಲ್ಲಿ ಕಾರ್ಯಕ್ರಮ ಆಯ್ತು? ಯಾರು ಕಾರ್ಯಕ್ರಮ ಮಾಡಿದ್ರು? ಅಂತ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಸಿಪಿವೈ ಕಾರಿನ ಮೇಲೆ ಕಲ್ಲು, ಮೊಟ್ಟೆ ಎಸೆತ ಪ್ರಕರಣ- 14 ಜನರ ಮೇಲೆ FIR ದಾಖಲು

ಅಶ್ವಥ್ ನಾರಾಯಣ (CN Ashwath Naraya) ವಿರುದ್ಧ ದಾಖಲೆ ರಿಲೀಸ್ ಮಾಡಿದ್ದಕ್ಕೆ ಹೀಗಾಯಿತು ಅನ್ನೋ ಪ್ರಶ್ನೆಗೆ ಉತ್ತರಿಸಿದ ಹೆಚ್‌ಡಿಕೆ, ಬಿಎಂಎಸ್ (BMS) ಟ್ರಸ್ಟ್ ಕೇಸ್‌ಗೂ ರಾಜಕೀಯ ಕಾರ್ಯಕ್ರಮಕ್ಕೂ ಸಂಬಂಧವಿಲ್ಲ. ಚನ್ನಪಟ್ಟಣದ ರಾಜಕೀಯ ವಿಚಾರದಲ್ಲಿ ಇದು ಆಗಿದೆ. ಅವರು ರಾಜಕೀಯವಾಗಿ ನೆಲೆಯೂರಬೇಕು, ಅಸ್ಥಿತ್ವ ಉಳಿಸಿಕೊಳ್ಳಬೇಕು ಅಂತ ಹೀಗೆ ಮಾಡಿದ್ದಾರೆ. ಅಶ್ವಥ್ ನಾರಾಯಣ 420 ಕೆಲಸವನ್ನೇ ಸಮರ್ಥಿಸಿಕೊಳ್ಳುವುದು ಎಂದು ಕುಟುಕಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *