ಬೀದರ್: ಕೇಂದ್ರದ ಕಾರ್ಮಿಕ-ರೈತ ವಿರೋಧಿ ಕ್ರಮಗಳು ಹಾಗೂ ಕಾರ್ಪೊರೇಟ್ ಪರ ನಿಲುವು ಖಂಡಿಸಿ ಬುಧವಾರ ಭಾರತ್ ಬಂದ್‌ಗೆ 10ಕ್ಕೂ ಹೆಚ್ಚು ಸಂಘಟನೆಗಳು ಕರೆ ನೀಡಿವೆ. ಈ ಹಿನ್ನೆಲೆ ಗಡಿಜಿಲ್ಲೆ ಬೀದರ್‌ನಲ್ಲಿ ಸಾವಿರಾರು ಕಾರ್ಮಿಕರು ಸೇರಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿದ್ದಾರೆ.
ನಗರದ ಅಂಬೇಡ್ಕರ್ ವೃತದಿಂದ ಡಿಸಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿದ್ದು, ವಿವಿಧ ಚಾಲಕರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಸಾವಿರಾರು ಕಾರ್ಮಿಕರು ಪ್ರತಿಭಟನಾ ರ‍್ಯಾಲಿಯಲ್ಲಿ ಭಾಗಿಯಾಗಿದ್ದಾರೆ. ಈ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.ಇದನ್ನೂ ಓದಿ: ಹೊಸ ಗೆಟಪ್‌ನಲ್ಲಿ ಶಿವಣ್ಣನ ಫಸ್ಟ್ ಲುಕ್ ರಿಲೀಸ್
ಸಾವಿರಾರು ಕಾರ್ಮಿಕರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದು, ಡಿಸಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದ್ದಾರೆ. ಮಹಿಳಾ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದು, ಧರಣಿ ಬಳಿಕ ಡಿಸಿಗೆ ಮನವಿ ಸಲ್ಲಿಸಲಿದ್ದಾರೆ.
ಬೇಡಿಕೆಗಳೇನು?
* ನಾಲ್ಕು ಕಾರ್ಮಿಕ ಸಂಹಿತೆ ರದ್ದುಗೊಳಿಸಬೇಕು
* ಕೇಂದ್ರ ಸರ್ಕಾರ ತಂದಿರುವ ನಾಲ್ಕು ಸಂಹಿತೆಗಳನ್ನು ತಿರಸ್ಕರಿಸಬೇಕು
* ಕನಿಷ್ಠ ವೇತನ ಜಾರಿಗೊಳಿಸಬೇಕು
* ಕೇಂದ್ರ ತಂದಿರುವ ನಿಯಮದಲ್ಲಿ ಸಂಘ ರಚಿಸುವ ಹಕ್ಕು ಕಸಿದುಕೊಳ್ಳಲಾಗಿದೆ
* ಇದನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಬೇಕು
* ಹೊಸ ಸಂಘ ರಚಿಸಲು ಅನುಮತಿ ನೀಡಬೇಕು
* ಕೆಲಸದ ಅವಧಿಯನ್ನು 12 ಗಂಟೆಯಿಂದ 8ಗಂಟೆಗೆ ಕಡಿತಗೊಳಿಸಬೇಕು
* ಗುತ್ತಿಗೆ ನೌಕರಿ ರದ್ದುಗೊಳಿಸಿ ಖಾಯಂ ನೌಕರಿ ಜಾರಿಯಾಗಬೇಕು. ಇದನ್ನೂ ಓದಿ: ಡಿಕೆ ಬ್ರದರ್ಸ್ ಹೆಸ್ರಲ್ಲಿ ವಂಚನೆ ಕೇಸ್; ಸಿನಿಮಾ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಿದ್ದ `ಬಂಗಾರಿ’ ಗೌಡ!