‘ಪುಷ್ಪ 2’ ಚಿತ್ರದ ಮುಂದೆ ಅಬ್ಬರಿಸಲಿದೆ ಶಿವಣ್ಣ ನಟನೆಯ ‘ಭೈರತಿ ರಣಗಲ್’ ಸಿನಿಮಾ

Public TV
1 Min Read

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ನಟನೆಯ ‘ಭೈರತಿ ರಣಗಲ್’ (Bhairathi Rangal) ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಇದೇ ಆಗಸ್ಟ್ 15ಕ್ಕೆ ‘ಭೈರತಿ ರಣಗಲ್’ ಚಿತ್ರ ಪುಷ್ಪ 2 ಚಿತ್ರದ ಮುಂದೆ ರಿಲೀಸ್ ಆಗಲಿದೆ. ಶಿವಣ್ಣರ ರಗಡ್ ಅವತಾರ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ.

ಶಿವಣ್ಣ- ಶ್ರೀಮುರಳಿ ನಟನೆಯ ‘ಮಫ್ತಿ’ ಸಿನಿಮಾ 2017ರಲ್ಲಿ ರಿಲೀಸ್ ಆಗಿ ಗಲ್ಲಾಪೆಟ್ಟಿಗೆಯಲ್ಲಿ ಸೌಂಡ್ ಮಾಡಿತ್ತು. ಇದೀಗ ಚಿತ್ರದ ಪ್ರೀಕ್ವೆಲ್‌ನಲ್ಲಿ ಶಿವಣ್ಣ ಪಾತ್ರದ ಅಸಲಿ ಕಥೆ ಶುರುವಾಗಲಿದೆ. ಹೊರ ಜಗತ್ತಿಗೆ ಹಣ ಮಾಡುವ, ಮೋಸ ಮಾಡುವ ವ್ಯಕ್ತಿಯಂತೆ ಕಾಣುವ ಈ ವ್ಯಕ್ತಿಯ ನಿಜವಾದ ವ್ಯಕ್ತಿತ್ವ ನಂತರದಲ್ಲಿ ಅನಾವರಣ ಆಗುತ್ತಾ ಹೋಗುತ್ತದೆ. ಆ ವ್ಯಕ್ತಿಯ ಹಿಂದಿನ ಕಥೆ ‘ಭೈರತಿ ರಣಗಲ್’ ಚಿತ್ರದಲ್ಲಿ ಇರಲಿದೆ.

 

View this post on Instagram

 

A post shared by Geetha Pictures (@geethapictures)

ಇದೇ ಆಗಸ್ಟ್ 15ರಂದು ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಪುಷ್ಪ 2 ರಿಲೀಸ್ ಆಗಲಿದೆ. ಇದರ ಜೊತೆಗೆ ರೋಹಿತ್ ಶೆಟ್ಟಿ ‘ಸಿಂಗಂ ಅಗೇನ್’ ಚಿತ್ರ, ವಿಜಯ್ ದಳಪತಿ ನಟನೆಯ ಚಿತ್ರ ಕೂಡ ತೆರೆಗೆ ಅಬ್ಬರಿಸಲಿದೆ. ಈ 3 ಚಿತ್ರಗಳ ಮುಂದೆ ಭೈರತಿ ರಣಗಲ್ ಚಿತ್ರ ಸ್ಪರ್ಧೆಗೆ ಇಳಿಯುತ್ತಿದೆ. ಇದನ್ನೂ ಓದಿ:Miss World 2024: ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಎಡವಿದ ಕರ್ನಾಟಕ ಮೂಲದ ಸಿನಿ ಶೆಟ್ಟಿ

‘ಪುಷ್ಪ 2’ (Pushpa 2) ಚಿತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಸಿನಿಮಾನ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲು ನಿರ್ಮಾಪಕರು ಯೋಚಿಸಿದ್ದರು. ಆದರೆ, ಈಗ ಶಿವರಾಜ್‌ಕುಮಾರ್ ಸಿನಿಮಾ ರಿಲೀಸ್ ಆಗುತ್ತಿದ್ದು, ಭರ್ಜರಿ ಸ್ಪರ್ಧೆ ಏರ್ಪಡುತ್ತಿದೆ.

‘ಭೈರತಿ ರಣಗಲ್’ ಚಿತ್ರಕ್ಕೆ ನರ್ತನ್ ಆ್ಯಕ್ಷನ್ ಕಟ್ ಹೇಳಿದ್ರೆ, ಗೀತಾ ಶಿವರಾಜ್‌ಕುಮಾರ್ ನಿರ್ಮಾಣ ಮಾಡ್ತಿದ್ದಾರೆ. ಶಿವಣ್ಣಗೆ ‘ಸಪ್ತಸಾಗರದಾಚೆ ಎಲ್ಲೋ’ ನಟಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ.

Share This Article