ಪಂಜಾಬ್ ನಿಯೋಜಿತ ಸಿಎಂ ಭಗವಂತ್ ಮಾನ್ ನಟ ಹಾಗೂ ಕಾಮಿಡಿ ಕಲಾವಿದ

Public TV
2 Min Read

ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ಕೆಲ ಕಡೆ ಅಚ್ಚರಿ ಮೂಡಿಸಿದ್ದರೆ, ಕೆಲ ರಾಜ್ಯಗಳಲ್ಲಿ ನಿರೀಕ್ಷಿತ ಫಲದಂತಿದೆ. ಫಲಿತಾಂಶ ಪೂರ್ವ ಬಂದ ಸಮೀಕ್ಷೆಗಳು ಬಹುತೇಕ ಖಚಿತವಾಗಿವೆ. ಅದರಂತೆ ಪಂಜಾಬ್ ನಲ್ಲಿ ಆಮ್ ಆದ್ಮಿ ಪಾರ್ಟಿಯೇ ಅತೀ ಹೆಚ್ಚು ಅಂತರದಿಂದ ಗೆಲುವು ಸಾಧಿಸಿ, ಅಧಿಕಾರ ಚುಕ್ಕಾಣೆ ಹಿಡಿಯಲು ದಿನಗಣನೆ ಶುರುವಾಗಿದೆ. ಇದನ್ನೂ ಓದಿ : ಕಿಕ್ ಏರಿಸಲು ಹೊರಟಿದ್ದ ಸಮಂತಾಗೆ ‘ನೋ ನೋ’ ಅಂದ ಟ್ರೋಲಿಗರು

ಚುನಾವಣೆ ಮುನ್ನವೇ ಪಂಜಾಬ್ ನ ಸಿಎಂ ಅಭ್ಯರ್ಥಿ ಭಗವಂತ್ ಮಾನ್ ಎಂದು ಕೇಜ್ರಿವಾಲಾ ಘೋಷಣೆ ಮಾಡಿದ್ದರು. ಅವರ ಮೇಲಿನ ನಂಬಿಕೆ ಸುಳ್ಳಾಗಿಲ್ಲ. ನಿರೀಕ್ಷೆಗಿಂತ ಹೆಚ್ಚೆ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಹಾಗಾಗಿ ಭಗವಂತ್ ಮಾನ್ ಮುಂದಿನ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತ.  ಹಾಗಾದರೆ, ಯಾರು ಈ ಭಗವಂತ್ ಖಾನ್? ಇದನ್ನೂ ಓದಿ : ಮೆಗಾಸ್ಟಾರ್ ಚಿರಂಜೀವಿ ಹೊಸ ಚಿತ್ರದಲ್ಲಿ ಕಮಲ್ ಹಾಸನ್ ಪುತ್ರಿ ಶ್ರುತಿ

ಸಿನಿಮಾ ಮತ್ತು ಮ್ಯೂಸಿಕ್ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಭಗವಂತ್. ತೊಂಬತ್ತರ ದಶಕದಿಂದಲೂ ಅವರು ಕಾಮಿಡಿ ಶೋಗಳನ್ನು ಮಾಡುತ್ತಲೇ, ಸಾವಿರಾರು ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದಾರೆ. ಈ ವೇಳೆಯಲ್ಲಿ ಭಗವಂತ್ ಜತೆ ಕಾಣಿಸಿಕೊಳ್ಳುತ್ತಿದ್ದ ಮತ್ತೊಂದು ಹೆಸರು ಖ್ಯಾತ ಕಾಮಿಡಿಯನ್ ಜಗ್ತರ್ ಜಗ್ಗಿ ಅವರದ್ದು. ಭಗವಂತ್ ಮತ್ತು ಜಗ್ತರ್ ಜಗ್ಗಿ ಕಾಮಿಡಿ ಇದ್ದರೆ ಸಾಕು, ನಗೆಹಬ್ಬ ಗ್ಯಾರಂಟಿ ಆಗಿರುತ್ತಿತ್ತು. ಈ ಜೋಡಿ ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ  ಅಮೆರಿಕಾ, ಇಂಗ್ಲೆಂಡ್, ಅರಬ್ ದೇಶಗಳು, ಕೆನಡಾ ಸೇರಿದಂತೆ ವಿದೇಶಗಳಲ್ಲೂ ಇವರು ಸಾಕಷ್ಟು ಕಾಮಿಡಿ ಶೋಗಳನ್ನು ನೀಡಿದ್ದಾರೆ. ಇದನ್ನೂ ಓದಿ : ಇಂದು ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವರ್ಣರಂಜಿತ ತೆರೆ

ಕಾಮಿಡಿ ಶೋಗಳು ಮಾತ್ರವಲ್ಲ, ತೊಂಬತ್ತರ ದಶಕದಲ್ಲಿ ಭಗವಂತ್ ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟರು. ಈವರೆಗೂ ಸುಮಾರ 15ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಸಮಾಜ ಸೇವೆಯತ್ತ ಒಲವು ಹೆಚ್ಚಾಗಿದ್ದರಿಂದ ಸಿನಿಮಾ ರಂಗದಿಂದ ದೂರವಾಗಿ ಲೋಕ್ ಲೆಹರ್ ಫೌಂಡೇಷನ್ ಎಂಬ ಎನ್.ಜಿ.ಓ ಸಂಸ್ಥೆಯನ್ನು ಸ್ಥಾಪಿಸಿ ವಿಶೇಷ ಚೇತನ ಮಕ್ಕಳ ಬಾಳಿಗೆ ಬೆಳಕಾದವರು. ಇದನ್ನೂ ಓದಿ : ಮಾ.13ಕ್ಕೆ ಅರಮನೆ ಮೈದಾನದಲ್ಲಿ ಜೇಮ್ಸ್ ಪ್ರೀ ಇವೆಂಟ್, ಹೊಸಪೇಟೆಯಲ್ಲಿ ಸಕ್ಸಸ್ ಸಂಭ್ರಮ

ಭಗಮಂತ್ ಮಾನ್ ಹುಟ್ಟಿದ್ದು ಪಂಜಾಬ್ ನ ಸಂಗ್ರುರ್ ಜಿಲ್ಲೆಯ ಸತೋಜ್ ಗ್ರಾಮದಲ್ಲಿ. ಹರ್ಪಾಲ್ ಕೌರ್ ಮ್ತು ಮಹಿಂದರ್ ಸಿಂಗ್ ದಂಪತಿಯ ಪುತ್ರ ಇವರು. 17 ಅಕ್ಟೋಬರ್ 1973ರಲ್ಲಿ ಹುಟ್ಟಿರುವ ಭಗವಂತ್, ನಗುತ್ತಲೇ ಭೂಮಿಗೆ ಬಂದರು ಎನ್ನುವ ಮಾತೂ ಜನಜನಿತ. ಇದನ್ನೂ ಓದಿ : ಬೆಂಗಳೂರಿನಿಂದ ಗಡಿಭಾಗಕ್ಕೆ ಆರ್.ಆರ್.ಆರ್ ಅದ್ಧೂರಿ ಕಾರ್ಯಕ್ರಮ ಶಿಫ್ಟ್

ಕಾಲೇಜು ಶಿಕ್ಷಣ ಮುಗಿಯುತ್ತಿದ್ದಂತೆಯೇ ಕಾಮಿಡಿ ಕ್ಷೇತ್ರಕ್ಕೆ ಕಾಲಿಟ್ಟರು. ಅಲ್ಲಿಂದ ಸಮಾಜ ಸೇವೆಯತ್ತ ಮುಖ ಮಾಡಿದರು. ಅವರು ಮಾಡಿದ ಸಮಾಜ ಸೇವೆಯೇ ಇಂದು ಅವರನ್ನು ಮುಖ್ಯಮಂತ್ರಿ ಸ್ಥಾನದವರೆಗೂ ಕರೆದುಕೊಂಡು ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *